ಸನಾತನ ಹಿಂದೂ ಧರ್ಮದ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಪುತ್ರ ಉದಯನಿಧಿ ಸ್ಟಾಲಿನ್ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಸೋಮವಾರ (ಸೆಪ್ಟೆಂಬರ್ 4) ಖಂಡನೆ ವ್ಯಕ್ತಪಡಿಸಿದೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ರವಿ, ಸನಾತನ ಧರ್ಮ ಅತ್ಯಂತ ಪ್ರಾಚಿನದ್ದು, ವೈವಿಧ್ಯತೆಯಿಂದ ಕೂಡಿದ ಸಂಸ್ಕೃತಿ ಇದೆ. ಶ್ರೀಮಂತವಾದ ಹಿಂದೂ ಧರ್ಮವನ್ನ ಒಂದು ಮಲೇರಿಯಾ ರೋಗಕ್ಕೆ ಹೋಲಿಕೆ ಮಾಡಿರುವುದು ಸರಿಯಲ್ಲ ಉದಯನಿಧಿ ಸ್ಟಾಲಿನ್ ಓರ್ವ ರೋಗಿಷ್ಟ ಮನಸ್ಥಿತಿಯುಳ್ಳವ. ಇವರಿಗೆ ಶೀಘ್ರದಲ್ಲಿ ಚಿಕಿತ್ಸೆ ಮಾಡಬೇಕಿದೆ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅಣಕವಾಡಿದ್ದಾರೆ.
ಹಿಂದೂ ಧರ್ಮ ಶ್ರೇಷ್ಠತೆಯನ್ನು ಯಾವತ್ತು ಕಳೆದುಕೊಳ್ಳುವುದಿಲ್ಲ.ಹಿಂದೂ ಧರ್ಮವನ್ನ ನಾಶಮಾಡಬೇಕು ಎಂಬ ಉದಯನಿಧಿ ಸ್ಟಾಲಿನ್ ಹೇಳಿಕೆ ಹಿಂದೆ ದುಷ್ಟ ಮನಸ್ಸಿದೆ. ಹಿಂದೂ ಧರ್ಮ ಅಂದ್ರೆ ಸೂರ್ಯನಂತೆ ಯಾವತ್ತಿಗೂ ಅದನ್ನ ನಾಶಮಾಡಲು ಸಾಧ್ಯವಿಲ್ಲ ಎಂದು ಡಾ.ಕೃಷ್ಣ ಪ್ರಸನ್ನ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪುತ್ತೂರುನಗರ ಮಂಡಲ ಬಿಜೆಪಿ ಅಧ್ಯಕ್ಷ ಸಚಿನ್ ಉಪಸ್ಥಿತರಿದ್ದರು



