ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ(Renukaswamy) ಹತ್ಯೆ ಕೇಸ್ ಸಂಬಂಧ ಇಂದು 57ನೇ CCH ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ಡಿ.17 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಪ್ರಕರಣದ ಸಾಕ್ಷಿಗಳಾದ ಮೃತ ರೇಣುಕಾಸ್ವಾಮಿ ತಂದೆ, ತಾಯಿಗೆ ಸಮನ್ಸ್ ಜಾರಿಗೊಳಿಸಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾರ್ಜ್ ಫ್ರೇಮ್ ಆದ ನಂತರ ಸಾಕ್ಷಿ ವಿಚಾರಣೆ ಶುರುವಾಗಿದೆ. ಹೀಗಾಗಿ ಆತನ ತಂದೆ ತಾಯಿ ಪ್ರಕರಣದ 7, 8ನೇ ಸಾಕ್ಷಿಯಾಗಿರೋರುವುದರಿಂದ ಇಬ್ಬರಿಗೂ ಸಾಕ್ಷಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿದೆ.

ಇನ್ನು ಸಾಕ್ಷಿಗಳ ಹಾಜರು ಪಡಿಸುವ ವಿಚಾರವಾಗಿ ದರ್ಶನ್ ಪರ ವಕೀಲರು ಎತ್ತಿದ್ದ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಯಾವ ಸಾಕ್ಷಿಗಳನ್ನು ಹಾಜರುಪಡಿಸಬೇಕೆಂಬುದು ಪ್ರಾಸಿಕ್ಯೂಷನ್ ಆಯ್ಕೆ ಎಂದು ಆಕ್ಷೇಪ ತಿರಸ್ಕರಿಸಿದ್ದಾರೆ.
ಇದೇ ವೇಳೆ ತಮ್ಮ ಬ್ಯಾರಕ್ ಗೆ ಟಿವಿ ಬೇಕೆಂದು ಕೇಳಿಕೊಂಡಿದ್ದ ಆರೋಪಿ ಲಕ್ಷ್ಮಣ್ ಮನವಿ ಪುರಸ್ಕರಿಸಿದ ನ್ಯಾಯಾಲಯ ದರ್ಶನ್ ಬ್ಯಾರಕ್ ಗೆ ಟಿವಿ ಅಳವಡಿಸಲು ಸೂಚನೆ ನೀಡಿದೆ. ಹೊಸ ಟಿವಿ ಅಳವಡಿಕೆವರೆಗೂ ಬೇರೆ ಬ್ಯಾರಕ್ ನಲ್ಲಿ ಟಿವಿ ನೋಡಲು ಅವಕಾಶ ಕಲ್ಪಿಸಬೇಕು ಎಂದು ಜೈಲು ಅಧಿಕಾರಿಗಳಿಗೆ 57 ನೇ ಸಿಸಿಹೆಚ್ ಜಡ್ಜ್ ಈರಪ್ಪಣ್ಣ ಪವಡಿ ನಾಯ್ಕ್ ಸೂಚನೆ ನೀಡಿದ್ದಾರೆ.
ಇನ್ನು ತನ್ನ ತಂದೆ ನಿಧನರಾದ ಹಿನ್ನೆಲೆ ಮುಂದಿನ ಕಾರ್ಯಕ್ಕೆ 14ನೇ ಆರೋಪಿ ಪ್ರದೋಷ್ ಗೆ 4 ದಿನಗಳ ಮಧ್ಯಂತರ ಜಾಮೀನು ನೀಡಿ ನ್ಯಾಯಾಲಯ ಆದೇಶ ಮಾಡಿದೆ.












