• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವಿಜಯೇಂದ್ರ ಕೆಳಗಿಳಿಸಿ ಎಂದ ರೆಬಲ್‌ ನಾಯಕರು: ದಿಢೀರ್‌ ದೆಹಲಿಗೆ ಹಾರಿದ ಯಡಿಯೂರಪ್ಪ..!

ಪ್ರತಿಧ್ವನಿ by ಪ್ರತಿಧ್ವನಿ
December 13, 2025
in Top Story, ಕರ್ನಾಟಕ, ರಾಜಕೀಯ
0
ವಿಜಯೇಂದ್ರ ಕೆಳಗಿಳಿಸಿ ಎಂದ ರೆಬಲ್‌ ನಾಯಕರು: ದಿಢೀರ್‌ ದೆಹಲಿಗೆ ಹಾರಿದ ಯಡಿಯೂರಪ್ಪ..!
Share on WhatsAppShare on FacebookShare on Telegram

ಬೆಂಗಳೂರು : ರಾಜ್ಯ ಕಾಂಗ್ರೆಸ್‌ (Congress) ಪಾಳಯದಲ್ಲಿನ ನಾಯಕತ್ವದ ವಿಚಾರ ಬದಿಗೆ ಸರಿಯುವ ಹೊತ್ತಿಗೆಯೇ ಬಿಜೆಪಿಯಲ್ಲಿ ರೆಬಲ್‌ ಟೀಂ ಮತ್ತೆ ಸಕ್ರಿಯವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಆಯ್ಕೆಯಾದ ದಿನದಿಂದಲೂ ಈವರೆಗೂ ಅತೃಪ್ತ ನಾಯಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ವಿಜಯೇಂದ್ರ ನಾಯಕತ್ವವನ್ನು ವಿರೋಧಿಸಿ ಹೇಳಿಕೆಗಳನ್ನು ನೀಡುವ ಮೂಲಕ ಬಹಿರಂಗವಾಗಿ ಗೋಕಾಕ ಶಾಸಕ ರಮೇಶ್‌ ಜಾರಕಿಹೊಳಿ ನೇತೃತ್ವದಲ್ಲಿ ಬಂಡಾಯದ ಬಾವುಟ ಹಾರಿಸಿದ್ದಾರೆ.

ADVERTISEMENT
CM Siddaramaiah : ವೇತನ ಸಹಿತ ಖುತುಚಕ್ರ ರಜೆಯನ್ನ ಘೋಷಣೆ ಮಾಡಿದ್ದೇವೆ #pratidhvani

ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುವುದಾಗಿ ಹಾದಿ ಬೀದಿಯಲ್ಲಿ ಮಾತನಾಡುತ್ತ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದರು. ನಾವು ಯಾವುದೇ ಕಾರಣಕ್ಕೂ ವಿಜಯೇಂದ್ರ ನಾಯಕತ್ವ ಒಪ್ಪುವುದಿಲ್ಲ. ಅವರಿಂದ ರಾಜ್ಯದಲ್ಲಿ ಬಿಜೆಪಿಗೆ ಒಳ್ಳೆಯದಾಗುವುದಿಲ್ಲ. ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರವನ್ನು ಎದುರಿಸುವಲ್ಲಿ, ವೈಫಲ್ಯಗಳ ಬಗ್ಗೆ ಹೋರಾಡುವಲ್ಲಿ ವಿಜಯೇಂದ್ರ ನಾಯಕತ್ವ ಸಫಲವಾಗುವುದಿಲ್ಲ ಎನ್ನುವುದು ರೆಬಲ್‌ ಟೀಂನ ವಾದವಾಗಿದೆ. ಅಲ್ಲದೇ ಸರ್ಕಾರದ ವಿರುದ್ಧ ಹೋರಾಟಗಳನ್ನು ಸಂಘಟಿಸುವುದರಲ್ಲಿ ವಿಜಯೇಂದ್ರ ಯಶಸ್ವಿಯಾಗಿಲ್ಲ. ಕಾಂಗ್ರೆಸ್‌ ಸರ್ಕಾರದಲ್ಲಿನ ಪ್ರಸ್ತುವ ವಿದ್ಯಮಾನಗಳ ಬಗ್ಗೆಯೂ ರೆಬಲ್‌ ನಾಯಕರು ಬಿಜೆಪಿ ಹೈಕಮಾಂಡ್‌ ನಾಯಕರ ಗಮನಕ್ಕೆ ತಂದಿದ್ದಾರೆ.

ಹೀಗಾಗಿಯೇ ಕಳೆದ ಕೆಲ ದಿನಗಳಿಂದ ಸೈಲೆಂಟಾಗಿದ್ದ ಬಿಜೆಪಿ ಅತೃಪ್ತ ನಾಯಕರ ತಂಡ ಇದೀಗ ಮತ್ತೆ ತನ್ನ ಕೆಲಸ ಪ್ರಾರಂಭಿಸಿದೆ. ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಕುಟುಂಬದ ವಿರುದ್ದ ಆಗಾಗ ಕೆಂಡ ಕಾರುವ ಈ ಟೀಂ ರಾಜ್ಯ ಬಿಜೆಪಿಯ ವಿರುದ್ಧ ದೂರನ್ನು ಹೊತ್ತು ದೆಹಲಿಗೆ ಹಾರಿದೆ. ಬಿಜೆಪಿಯ ಹೈಕಮಾಂಡ್‌ನ ಕೆಲ ಪ್ರಮುಖ ನಾಯಕರನ್ನು ಭೇಟಿಯಾಗಿ ವಿಜಯೇಂದ್ರ ನಾಯಕತ್ವದ ವಿರುದ್ದ ದೂರನ್ನು ನೀಡಿದೆ. ಅಲ್ಲದೆ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆಯೂ ಮನವಿ ಮಾಡಿದ್ದು, ಮುಂಬರುವ ಎಲ್ಲ ಚುನಾವಣೆಗಳ ಹಿತದೃಷ್ಟಿಯಿಂದ ವಿಜಯೇಂದ್ರ ಬದಲಾವಣೆಗೆ ಆಗ್ರಹಿಸಿದ್ದಾರೆ.

DK Shivakumar: ದೆಹಲಿಗೆ ಹೋಗಿದ್ಯಾಕೆ ಅನ್ನೋ ಬಗ್ಗೆ ಏರ್​ಪೋರ್ಟ್​ನಲ್ಲಿ ಡಿಸಿಎಂ ಡಿಕೆಶಿ ರಿಯಾಕ್ಷನ್ #pratidhvani

ಪ್ರಮುಖವಾಗಿ ದಾವಣಗೆರೆಯಿಂದ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್, ಕುಮಾರ ಬಂಗಾರಪ್ಪ, ಮಾಜಿ ಸಚಿವ ಶ್ರೀಮಂತ್‌ ಪಾಟೀಲ್ ಸೇರಿದಂತೆ ಹಲವು ರೆಬಲ್ಸ್ ನಾಯಕರು ದೆಹಲಿಯಲ್ಲಿ ರಾಜ್ಯ ಉಸ್ತುವಾರಿ ರಾಧಾ ‌ಮೋಹನ್‌ ದಾಸ್ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ‌ರಾಜ್ಯ ಕಾಂಗ್ರೆಸ್‌ನಂತೆಯೇ ಬಿಜೆಪಿಯಲ್ಲಿಯೂ ಒಳ ಬೇಗುದಿ ಹೆಚ್ಚಾಗಿದೆ, ಈ ಹಿನ್ನೆಲೆಯಲ್ಲಿ ಭಿನ್ನಮತದ ಕಾವು ಪಕ್ಷದ ವರಿಷ್ಠರ ಅಂಗಳಕ್ಕೆ ತಲುಪಿದೆ.

ಇತ್ತ ಅತೃಪ್ತ ನಾಯಕರು ವರಿಷ್ಠರನ್ನು ಭೇಟಿಯಾದ ಬಳಿಕ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಬೆಳವಣಿಗೆಗಳು ವೇಗ ಪಡೆದುಕೊಂಡಿವೆ. ಪುತ್ರನ ಪಟ್ಟಕ್ಕೆ ಯಾವುದೇ ಕಾರಣಕ್ಕೂ ಧಕ್ಕೆ ಬರಬಾರದು, ವಿಜಯೇಂದ್ರ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂದು ಖುದ್ದು ಪುತ್ರನ ಪರ ಯಡಿಯೂರಪ್ಪ ಅಖಾಡಕ್ಕಿಳಿದಿದ್ದು, ದಿಢೀರ್‌ ಮಾಜಿ ಸಿಎಂ ದೆಹಲಿಯ ವಿಮಾನ ಹತ್ತಿದ್ದಾರೆ ಎನ್ನಲಾಗುತ್ತಿದೆ. ಕಳೆದ 2ದಿನಗಳಿಂದ ದೆಹಲಿಯ ಕರ್ನಾಟಕ ಭವನದಲ್ಲಿಯೇ ಠಿಕಾಣಿ ಹೂಡಿರುವ ನಾಯಕರು ಸಾಧ್ಯವಾದಷ್ಟು ಬಿಜೆಪಿ ವರಿಷ್ಠರನ್ನು ಭೇಟಿಯಾಗುವ ಪ್ಲಾನ್‌ ಮಾಡಿದ್ದಾರೆ.

Jarkiholi Brothers: ಲಕ್ಷ್ಮಣ್ ಸವದಿ ಆಸೆಗೆ ಜಾರಕಿಹೊಳಿ ಬ್ರದರ್ಸ್ ತಣ್ಣೀರು..! #LaxmanSavadi #congress

ಅಲ್ಲದೇ ಇದೇ ರಬೆಲ್‌ ಗುಂಪಿನ ಇನ್ನೋರ್ವ ನಾಯಕ ಹಾಗೂ ಪಕ್ಷದಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ದೆಹಲಿಯಲ್ಲಿ ನಡೆಯುವ ಪ್ರತಿಯೊಂದು ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಹೀಗಾಗಿ ಸದ್ಯಕ್ಕೆ ವಿಜಯೇಂದ್ರ ವಿರುದ್ಧ ದೂರಿನ ಪಟ್ಟಿಯನ್ನು ಹೊತ್ತು ತೆರಳಿರುವ ರೆಬಲ್‌ ನಾಯಕರ ಮನವಿಗೆ ಬಿಜೆಪಿ ಹೈಕಮಾಂಡ್‌ ನಾಯಕರು ಮಣೆ ಹಾಕ್ತಾರಾ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ.

Tags: BJPBS YediyurappaBY VijayendraJP NaddaKarnatakaKarnataka PoliticsPolitics
Previous Post

ದರ್ಶನ್ ಬ್ಯಾರಕ್‌ಗೆ ಟಿವಿ.. ರೇಣುಕಾಸ್ವಾಮಿ ತಂದೆ-ತಾಯಿಗೆ ಸಮನ್ಸ್

Next Post

ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ‌ ರಷ್ಯಾ ರಕ್ಷಣಾ ಸಚಿವ ನಮನ

Related Posts

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ
ರಾಜಕೀಯ

ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

by ಪ್ರತಿಧ್ವನಿ
April 28, 2026
0

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿದ್ದು, ಆಡಳಿತ ವಿರೋಧಿ ಅಲೆ ಹೊಸ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ All India Trinamool Congress ಸರ್ಕಾರದ...

Read moreDetails
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

April 28, 2026
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

April 28, 2026
Next Post
ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ‌ ರಷ್ಯಾ ರಕ್ಷಣಾ ಸಚಿವ ನಮನ

ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ‌ ರಷ್ಯಾ ರಕ್ಷಣಾ ಸಚಿವ ನಮನ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada