• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಗಾಂಜಾ ಕೈಗಿಟ್ಟು ವಿದ್ಯಾರ್ಥಿಯಿಂದ ಹಣ ವಸೂಲಿಗೆ ಯತ್ನ!!

ಪ್ರತಿಧ್ವನಿ by ಪ್ರತಿಧ್ವನಿ
June 8, 2024
in ಕರ್ನಾಟಕ
0
ಗಾಂಜಾ ಕೈಗಿಟ್ಟು ವಿದ್ಯಾರ್ಥಿಯಿಂದ ಹಣ ವಸೂಲಿಗೆ ಯತ್ನ!!
Share on WhatsAppShare on FacebookShare on Telegram

ಬೆಂಗಳೂರು: ವಿದ್ಯಾರ್ಥಿಯೊಬ್ಬ ಸ್ನೇಹಿತರೊಂದಿಗೆ ಡಾಬಾದಲ್ಲಿ ಊಟ ಮುಗಿಸಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ದರೋಡೆ ಮಾಡಿದ್ದ ರೌಡಿ ಶೀಟರ್‌ ಸೇರಿ ಆರು ಮಂದಿ ಆರೋಪಿಗಳನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ADVERTISEMENT

ಆಂಧ್ರಪ್ರದೇಶ ಮೂಲದ ಗೋಪಿಚಂದ್‌, ತೇಜ್‌ದೀಪ್‌, ಗಂಗಮ್ಮನಗುಡಿ ರೌಡಿ ಶೀಟರ್‌ ಶರತ್‌, ಸಹಚರರಾದ ಮಂಜುನಾಥ್‌, ಚೇತನ್‌ಗೌಡ, ಚೇತನ್‌ ಕುಮಾರ್‌ ಬಂಧಿತ ಆರೋಪಿಗಳು. ಸಿಲಿಕಾನ್ ಸಿಟಿಯ ರಾಜಾನುಕುಂಟೆಯ ಖಾಸಗಿ ವಿಶ್ವವಿದ್ಯಾಲಯದ ಬಿಟೆಕ್‌ ವಿದ್ಯಾರ್ಥಿ ಇಟಗಲ್‌ಪುರ ನಿವಾಸಿ ವಿಘ್ನೇಶ್‌(20) ಎಂಬ ವಿದ್ಯಾರ್ಥಿಯ ಮೇಲೆಯೇ ಹಲ್ಲೆ ನಡೆಸಿ, ದರೋಡೆ ಮಾಡಿದ್ದರು.

ವಿಘ್ನೇಶ್‌ ಆಂಧ್ರಪ್ರದೇಶ ಮೂಲದವನು. ಜೂ.2ರಂದು ಸಹಪಾಠಿಗಳಾದ ಗೋಪಿಚಂದ್‌ ಮತ್ತು ತೇಜ್‌ದೀಪ್‌ ರೂಮ್‌ ಬಳಿ ಬಂದು ಬನ್ನೇರುಘಟ್ಟದ ಬಂದೂಸ್‌ ಡಾಬಾಗೆ ಊಟಕ್ಕೆ ಹೋಗೋಣ ಎಂದು ಕರೆದಿದ್ದಾರೆ. ಹೀಗಾಗಿ ವಿಘ್ನೇಶ್‌ ಹಾಗೂ ಆತನ ಸ್ನೇಹಿತ ಗಣೇಶ್‌ ಒಂದು ಬೈಕ್ ನಲ್ಲಿ ಹಾಗೂ ಗೋಪಿಚಂದ್‌ ಮತ್ತು ತೇಜ್‌ ದೀಪ್‌ ಮತ್ತೊಂದು ವಾಹನದಲ್ಲಿ ಡಾಬಾಗೆ ತೆರಳಿದ್ದಾರೆ. ಊಟ ಮುಗಿದ ಮೇಲೆ ಮರಳಿ ಬರುತ್ತಿದ್ದಾಗ ಡ್ಯಾನಿಶ್‌ ಫಾರಂ ಹತ್ತಿರ ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ವಿಘ್ನೇಶ್‌ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಅಡ್ಡಗಟ್ಟಿದ್ದಾರೆ.

ಬೈಕ್ ನಲ್ಲಿ ಗಾಂಜಾ ಇರಿಸಿ ನಿಮ್ಮ ಸ್ನೇಹಿತರಾದ ತೇಜ್‌ದೀಪ್‌ ಮತ್ತು ಗೋಪಿಚಂದ್‌ ನಮ್ಮ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಅವರನ್ನು ಬಾ ಅಂತ ಹೇಳು ಎಂದು ಗದರಿಸಿದ್ದಾರೆ. ಗಾಂಜಾ ಪೊಟ್ಟಣವನ್ನು ತೆಗೆದು ವಿಘ್ನೇಶ್‌ ದ್ವಿಚಕ್ರ ವಾಹನದಲ್ಲಿ ಇರಿಸಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡು ವಿಘ್ನೇಶ್ ಹತ್ತಿರ ಇದ್ದ 20 ಸಾವಿರ ರೂ. ಹಾಗೂ 12 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಗಾಂಜಾದ ವಿಡಿಯೋ ಡಿಲೀಡ್‌ ಮಾಡಬೇಕಾದರೆ, 10 ಲಕ್ಷ ರೂ. ಹಣ ನೀಡಬೇಕು ಎಂದು ಧಮ್ಕಿ ಹಾಕಿದ್ದಾರೆ.

ನಂತರ ವಿಘ್ನೇಶ್‌ ನ ರಾಯಲ್‌ ಎನ್‌ಫೀಲ್ಡ್ ದ್ವಿಚಕ್ರ ವಾಹನವನ್ನು ಅಡಮಾನ ಇರಿಸಿ 50 ಸಾವಿರ ರೂ. ಪಡೆದಿದ್ದಾರೆ. ಉಳಿದ ಹಣ ಎರಡು ದಿನಗಳಲ್ಲಿ ಕೊಡಬೇಕು, ಇಲ್ಲವಾದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಕುರಿತು ವಿಘ್ನೇಶ್ ದೂರು ದಾಖಲಿಸಿದ್ದು, ಪೊಲೀಸರು 6 ಜನರನ್ನು ಬಂಧಿಸಿದ್ದಾರೆ. ಬಂಧಿತ ಆರು ಮಂದಿ ಆರೋಪಿಗಳ ಪೈಕಿ ತೇಜ್‌ದೀಪ್‌ ಮತ್ತು ಗೋಪಿಚಂದ್‌ ದೂರುದಾರ ವಿಘ್ನೇಶ್‌ ವ್ಯಾಸಂಗ ಮಾಡುತ್ತಿರುವ ವಿಶ್ವವಿದ್ಯಾಲಯದಲ್ಲೇ ಬಿಟೆಕ್‌ ಓದುತ್ತಿದ್ದಾರೆ. ವಿಘ್ನೇಶ್ ನ ಬಗ್ಗೆ ಎಲ್ಲವನ್ನೂ ತಿಳಿದುಕೊಂಡು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.

Tags: ArrestdrugsPolicestudent
Previous Post

ಚಂದ್ರಬಾಬು ನಾಯ್ಡುಗೆ ಶುಕ್ರದೆಶೆ; ಆರ್ಥಿಕವಾಗಿ, ರಾಜಕೀಯವಾಗಿ ಬೆಳೆದದ್ದು ಏನು?

Next Post

ಪರಿಷತ್ ಚುನಾವಣೆ; ಆಡಳಿತ ಪಕ್ಷಕ್ಕೆ 3, ಮೈತ್ರಿಗೆ 3 ಸ್ಥಾನಗಳಲ್ಲಿ ಗೆಲುವು

Related Posts

 Daily Horoscope February 14: ಇಂದು ಕೆಲಸದಲ್ಲಿ ಬಡ್ತಿ ಪಡೆಯುವ ರಾಶಿಗಳಿವು..!
Top Story

 Daily Horoscope February 14: ಇಂದು ಕೆಲಸದಲ್ಲಿ ಬಡ್ತಿ ಪಡೆಯುವ ರಾಶಿಗಳಿವು..!

by ಪ್ರತಿಧ್ವನಿ
February 14, 2026
0

ಮೇಷ ರಾಶಿಯ ಇಂದಿನ ಭವಿಷ್ಯ ಇಂದು ನೀವು ಕೆಲಸದ ವಿಷಯದಲ್ಲಿ ಸ್ವಲ್ಪ ಗಂಭೀರವಾಗಿರುತ್ತೀರಿ. ಕಚೇರಿಯ ಬಾಕಿ ಕೆಲಸಗಳನ್ನು ಮುಗಿಸಲು ಹೆಚ್ಚಿನ ಶ್ರಮ ವಹಿಸಬೇಕಾಗಬಹುದು. ಪ್ರೇಮ ಸಂಬಂಧಗಳಲ್ಲಿ ಇರುವವರಿಗೆ...

Read moreDetails
ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ

February 13, 2026
CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ

CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ

February 13, 2026
ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ  ಜೋ ಸೈಮನ್‌ ಕೊನೆಯುಸಿರು..

ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ ಜೋ ಸೈಮನ್‌ ಕೊನೆಯುಸಿರು..

February 13, 2026
ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ  ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

February 13, 2026
Next Post
ಪರಿಷತ್ ಚುನಾವಣೆ; ಆಡಳಿತ ಪಕ್ಷಕ್ಕೆ 3, ಮೈತ್ರಿಗೆ 3 ಸ್ಥಾನಗಳಲ್ಲಿ ಗೆಲುವು

ಪರಿಷತ್ ಚುನಾವಣೆ; ಆಡಳಿತ ಪಕ್ಷಕ್ಕೆ 3, ಮೈತ್ರಿಗೆ 3 ಸ್ಥಾನಗಳಲ್ಲಿ ಗೆಲುವು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada