ಅಬ್ಬಬಾ ಎಲ್ಲಿ ನೋಡಿದ್ರೂ ಮದುವೆ ಸಂಭ್ರಮಗಳು ಒಂದ್ರ ಮೇಲೊಂದು ನೆಡಿತಾನೆ ಇವೆ . ಮದುವೆಯಲ್ಲಿ ನಡೆಯುವ ಪ್ರತಿಯೊಂದು ಶಾಸ್ತ್ರವೂ ಕೂಡ ಅದ್ದೂರಿಯಾಗಿ ಮಾಡ್ತಾರೆ.. ಅದರಲ್ಲಿ ಹಲ್ದಿ ಕೂಡ ಒಂದು ,ಮುಂಚೆ ಎಲ್ಲ ಮಹೂರ್ತದ ಹಿಂದಿನ ದಿನ ಹಲ್ದಿನ ಮಾಡ್ತಾ ಇದ್ರು.. ಆದ್ರೆ ಈಗೆಲ್ಲ ಹಳದಿಗೆ ಅಂತ ಒಂದು ದಿನವನ್ನು ಮೀಸಲಿಡ್ತಾರೆ..ಹಲ್ದಿ ದಿನ ಬರುವಂತ ಪ್ರತಿಯೊಬ್ಬರೂ ಕೂಡ ಹಲ್ದಿ ಬಟ್ಟೆಯನ್ನ ಧರಿಸಿರ್ತಾರೆ..ಈ ಒಂದು ಸ್ಪೆಷಲ್ ಇವೆಂಟ್ ಗೆ ಮದುಮಗಳಿಗೆ ಅಂತಾನೇ ಹೊಸ ಹಾಗೂ ಟ್ರೆಂಡಿಂಗ್ ಕಲೆಕ್ಷೆನ್ಸ್ ಮಾರ್ಕೆಟ್ ಗೆ ಲಗ್ಗೆ ಇಟ್ಟಿವೆ..
ಮಸ್ಟರ್ಡ್ ಹಳದಿ ಲೆಹೆಂಗಾ
ಇದಕ್ಕೆ ಮ್ಯಾಚಿಂಗ್ ಬ್ಲೌಸ್ ಹಾಗೂ ಮ್ಯಾಚಿಂಗ್ ದುಪ್ಪಟ್ಟವನ್ನ ಧರಿಸಿದ್ರೆ ಹಳದಿಗೆ ಪರ್ಫೆಕ್ಟ್ ವೇರ್. ಇದಕ್ಕೆ ನೀವು ಕಾಂಟ್ರಾಸ್ಟ್ ಕಲರ್ ದುಪಟ್ಟವನ್ನು ಕೂಡ ವೇರ್ ಮಾಡಬಹುದು.

ಯಲ್ಲೋ ಅಥವಾ ವೈಟ್ ಸೀರೆ
ಸೀರೆ ಧರಿಸಿದಾಗ ಅದಕ್ಕೆ ಕಾಂಟ್ರಾಸ್ಟ್ ಕಲರ್ ಬ್ಲೌಸ್ ವೇರ್ ಮಾಡಿದ್ರೆ ಗ್ರಾಂಡ್ ಲುಕ್ ನೀಡುತ್ತದೆ. ಹಾಗೂ ಮಿರರ್ ವರ್ಕ್ ಇದ್ರೆ ಭರ್ಜರಿ ಲುಕ್ ನೀಡುತ್ತದೆ..

ಶರಾರಾ ಡ್ರೆಸ್
ಈಗ ಮಾರ್ಕೆಟ್ ನಲ್ಲಿ ತುಂಬಾ ಟ್ರೆಂಡ್ ಕ್ರಿಯೆಟ್ ಮಾಡಿರುವ ಔಟ್ ಫಿಟ್ ಅಂದ್ರೆ ಶರಾರಾ.ಕ್ರಾಪ್ ಟಾಪ್ ಹಾಗೂ ಪಾಲಾಜೊ ಜೊತೆಗೆ ಓವರ್ ಕೋಟ್ ಬರುತ್ತದೆ..ಕೋಟ್ ಆಪ್ಷನ್ ಗೆ ಅಷ್ಟೆ..

ಇನ್ನೂ ಕ್ರಾಪ್ ಟಾಪ್ ಸ್ಕರ್ಟ್ , ಹಾಫ್ ಸಾರೀ, ಯಲ್ಲೋ ಫ್ಲೋರಲ್ ಡ್ರೆಸ್, ಗಾಗ್ರಾ ಹೀಗೆ ಸಾಕಷ್ಟು ಕಲೆಕ್ಷನ್ ಮಾರ್ಕೆಟ್ ನಲ್ಲಿವೆ..ಹಾಗೂ ಒಂದಕಿಂತ ಒಂದು ಡ್ರೆಸ್ ಬೊಂಬಾಟಾಗಿದೆ..