ರೇಣುಕಾಸ್ವಾಮಿ (renuka swamy) ಕೊಲೆ ಪ್ರಕರಣದ ಆರೋಪಿಗಳನ್ನ ಸ್ಥಳ ಮಹಜರು ಮಾಡಿಸಲು ಕಾಮಾಕ್ಷಿಪಾಳ್ಯ ಪೊಲೀಸರು ಚಿತ್ರದುರ್ಗಕ್ಕೆ (chitradurga) ಕರೆದುಕೊಂಡು ಹೋಗಲಿದ್ದಾರೆ ಅನ್ನೋ ಮಾಹಿತಿ ಇದೆ. ಪ್ರಕರಣದ ನಾಲ್ವರು ಆರೋಪಿಗಳನ್ನ ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಲಿದ್ದಾರೆ.

ಕೊಲೆಯಾದ ರೇಣುಕಾ ಸ್ವಾಮಿಯನ್ನ ಚಿತ್ರದುರ್ಗದಿಂದ ಕಿಡ್ನಾಪ್ (Kidnap) ಮಾಡಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ರು. ಪ್ರಕರಣದ ಎ3 ಆರೋಪಿ ಸಲಹೆ ಮೇರೆಗೆ ಕಿಟ್ರ್ಯಾಪ್ ಮಾಡಿದ್ದ ರಾಘವೇಂದ್ರ, ಕಾರ್ತೀಕ್, ನಂದಿಶ್, ಪವನ್‌ನನ್ನ ಸ್ಥಳ ಮಹಜರಿಗೆ ಕರೆದುಕೊಂಡು ಹೋಗಲಿದ್ದಾರೆ.
ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಈ ಟೀಂ ಯಾವ ರೀತಿ ಕಿಟ್ರ್ಯಾಪ್ ಮಾಡಿಕೊಂಡು ಬಂದ್ರು ಎಂಬುದರ ಬಗ್ಗೆ ಸಾಕ್ಷ ಕಲೆಹಾಕುವಲ್ಲಿ ಈ ಸ್ಪಾಟ್ ಮಹಜರ್ ಮುಖ್ಯ ಪಾತ್ರ ವಹಿಸಲಿದೆ.