ನಟ ದರ್ಶನ್ (Actor darshan) ಮತ್ತು ಗ್ಯಾಂಗ್ ಕೊಲೆ ಕೇಸ್ ನಲ್ಲಿ ಅಂದರ್ ಆಗ್ತಿದ್ದ ಹಾಗೆ , ಇನ್ನು ಹಲವರು ಇದೀಗ ನಟ ದರ್ಶನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಮುಂದಾಗಿದ್ದಾರೆ. ನಟ ದರ್ಶನ್ ಹೀರೋ ಅಲ್ಲ ವಿಲನ್ ಎಂದು ಟೀಕಿಸಿದ್ದಾರೆ.
ಹತ್ತು ವರ್ಷಗಳ ಹಿಂದಿನ ಕರಾಳ ಕಥೆ ಈಗ ವೈರಲ್ (Viral) ಆಗೋದಕ್ಕೆ ಆರಂಭವಾಗಿದೆ. ಆ ಮೂಲಕ ಕೊಲೆ ಪ್ರಕರಣ (Murder case) ಬಳಿಕ ದರ್ಶನ್‌ನ ಒಂದೊಂದೆ ಮುಖ ಅನಾವರಣಗೊಳ್ಳುತ್ತಿದೆ.
ಟಿ ನರಸೀಪುರ (T Narasipura) ಸಮೀಪದ ತೂಗುದೀಪ ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕನ ಬದುಕು ನರಕಮಯವಾಗಿದೆ. ಕೆಲಸ ಮಾಡುವ ವೇಳೆ ಈತನಿಗೆ ಎತ್ತು ಕೊಂಬಿನಿಂದ ತಿವಿದಿತ್ತು. ಆಗ ಎತ್ತಿನ ಕೊಂಬು ಕಣ್ಣಿನಿಂದ ತೂರಿ ತಲೆ ಬುರುಡೆಯ ಹೊರಗೆ ಬಂದಿತ್ತು.
ಚಾಮರಾಜನಗರ (Chamaraja nagar) ತಾಲೂಕಿನ ನಿಜಲಿಂಗನಪುರದ ಮಹೇಶ್ ಎಂಬಾತನಿಗೆ ಹೀಗಾಗಿತ್ತು.ಕಣ್ಣು ಕಳೆದುಕೊಂಡ ಕಾರ್ಮಿಕ ಆಸ್ಪತ್ರೆಗೆ ಸೇರಿಸಿದ್ದರು. ಆ ನಂತರ ನಟ ದರ್ಶನ್ ಕಡೆಯವರು ಚಿಕಿತ್ಸೆ ಕೊಡಿಸಿ ಮನೆಗೆ ತಂದು ಬಿಟ್ಟು ಹೋಗಿದ್ದರು.
ಇದಾದ ಬಳಿಕ ತಮಗೆ ಆದ ನಷ್ಟಕ್ಕೆ ಪರಿಹಾರ ಕೇಳಲು ಕಾರ್ಮಿಕನ ಸಂಬಂಧಿಕರು ಫಾರ್ಮ್ ಹೌಸ್ ಗೆ (Darshan’s farm house) ಹೋದ್ರೆ ಸಾಕುನಾಯಿ ಛೂ ಬಿಟ್ಟಿದ್ದರಂತೆ ಈ ಡಿ ಬಾಸ್ ಗ್ಯಾಂಗ್.ಬಳಿಕ ಮೈಸೂರಿನ (Mysuru) ಹೊಟೇಲ್ ಗೆ ಮಾತುಕತೆಗೆ ಕರೆಸಿ ರೌಡಿಗಳಿಂದ ಬೆದರಿಕೆ ಹಾಕಿಸಿದ್ದರು ಎಂಬ ಆರೋಪ ಮಾಡಿದ್ದಾರೆ.
ಹತ್ತು ವರ್ಷಗಳಿಂದ ಹಾಸಿಗೆ ಹಿಡಿದಿರುವ ಕೂಲಿ ಕಾರ್ಮಿಕ ಮಹೇಶ (Mahesh) ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದ್ದಾರೆ.ತಾಯಿ ಮತ್ತು ಹೆಂಡತಿ ಸದ್ಯ ಮಹೇಶ್ ಆರೈಕೆ ಮಾಡುವುದರಲ್ಲಿ ಜೀವನ ಕಳೆದಿದ್ದಾರೆ. ಹೀಹಾಗಿ ಈ ಇಡೀ ಕುಟುಂಬ ದರ್ಶನ್ ಗೆ ಹಿಡಿ ಶಾಪ ಹಾಕುತ್ತಾ ಕಣ್ಣೀರಲ್ಲಿ ಕೈ ತಳೊಯುವಂತಾಗಿದೆ.