ವಾಲ್ಮೀಕಿ ನಿಗಮದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಸಿದ್ದು ಸರ್ಕಾರಕ್ಕೆ ಟೆನ್ಸನ್ ಶುರುವಾಗಿದೆ. ಮೈತ್ರಿ ನಾಯಕರಿಂದ ಸಿಎಂ ಸಿದ್ದರಾಮಯ್ಯ (M Siddaramiah) ರಾಜೀನಾಮೆಗೆ ಒತ್ತಡ ಹೆಚ್ಚಾಗ್ತಿದೆ. ಹೀಗಾಗಿ ನಿಗಮದ ಭ್ರಷ್ಟಾಚಾರದ ವಿಚಾರದಲ್ಲಿ ಪಾರಾಗಲು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ ಎನ್ನಲಾಗ್ತಿದೆ.
ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ (Basanagowda daddal) ರಾಜೀನಾಮೆ ಮೂಲಕ ಪ್ರಕರಣದಿಂದ ಜಾರಿಕೊಳ್ಳುವ ಸಾಧ್ಯತೆಯಿದೆ. ಇನ್ನು ವಿಪಕ್ಷಕ್ಕೆ ಅಸ್ತ್ರವಾಗಿರುವ ಈ ಪ್ರಕರಣದಿಂದ ಹೊರ ಬರಲು ಸಿದ್ದರಾಮಯ್ಯ ಕಸರತ್ತು ನಡೆಸ್ತಿದ್ದಾರೆ.
ಇನ್ನು ಹಗರಣ ಬಗ್ಗೆ ಎಸ್ಐಟಿ (SIT) ತಂಡ ತನಿಖೆಯನ್ನು ಚುರುಕುಗೊಳಿಸಿದೆ. ತಲೆಮರಿಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. 18 ನಕಲಿ ಖಾತೆಗಳ ಲಿಸ್ಟ್ ಹಾಗೂ ಆ ಅಕೌಂಟ್ ಹೋಲ್ಡರ್ ಗಳ ಲಿಸ್ಟ್ ರೆಡಿ ಮಾಡಿಕೊಂಡು ಬ್ಯಾಂಕ್ಗಳಿಂದ ಮಾಹಿತಿ ಕಲೆ ಹಾಕಿದ್ದಾರೆ.