ಮಾಹಾರಾಷ್ಟ್ರದಲ್ಲಿ ಉಂಅಟಗಿರುವ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರದ 42 ಶಾಸಕರು ದೂರದ ಅಸ್ಸಾಂನ ಗುವಾಹಟಿಯಲ್ಲಿರುವ ಐಷಾರಾಮಿ ಹೋಟೆಲ್ನಲ್ಲಿ ತಂಗಿದ್ದಾರೆ.
ರಾಡಿಸನ್ ಬ್ಲೂ ಹೋಟೆಲ್ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು ಅನುಮತಿಯಿಲ್ಲದೆ ಯಾರೊಬ್ಬರು ಒಳಗೋಗಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.
ಇನ್ನು ಕಳದೆದೊಂದು ವಾರದಿಂದ ಅಸ್ಸಾಂನಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು ಇಲ್ಲಿಯವರೆಗು 90ಕ್ಕು ಹೆಚ್ಚು ಜನರು ಸಾವನಪ್ಪಿದ್ದು 50 ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿ ಹಿಮಾಂತ ಬಿಸ್ವಾಸ್ ಶರ್ಮ ಮಹಾ ಶಾಸಕರು ಜೊತೆ ಹೋಟೆಲ್ನಲ್ಲಿ ತಂಗಿದ್ದು ವಿರೋಧ ಪಕ್ಷ ಹಾಗು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಸ್ಸಾಂನಲ್ಲಿ ಜನ ಮಳೆ ಹಾಗು ಪ್ರವಾಹದಿಂದ ತೀವ್ರ ಸಂಕ್ಷಟದಲ್ಲಿದ್ದಾರೆ. ಆದರೆ, ಮುಖ್ಯಮಂತ್ರಿ ಶರ್ಮಾ ಮೈತ್ರಿ ಸರ್ಕಾರದ ಬಂಡಾಯ ಶಾಸಕರೊಂದಿಗೆ ಹೋಟೆಲ್ನಲ್ಲಿ ಮಜಾ ಮಾಡುತ್ತಿದ್ದಾರೆ ಎಂದು ಟಿಎಂಸಿ ಆರೋಪಿಸಿ ಹೋಟೆಲ್ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದೆ.
ಸಿಎಂದ ಶರ್ಮ ಜನರ ತೆರಿಗೆ ದುಡ್ಡಿನಲ್ಲಿ ಮಹಾರಾಷ್ಟ್ರದ ಬಂಡಾಯ ಶಾಸಕರಿಗೆ ರಾಜಾತಿಥ್ಯ ನೀಡುತ್ತಿದೆ ಎಂದು ಅಸ್ಸಾಂ ಕಾಂಗ್ರೆಸ್ ಕಿಡಿಕಾರಿದೆ.
Our freedom to dissent against @BJP4Assam’s political horse-trading cannot be stifled in this way.
— AITC Assam (@AITC4Assam) June 23, 2022
We prioritise the #Flood affected people of Assam, whereas CM @himantabiswa prioritises his “tourists”. pic.twitter.com/BKPOFs9DiL