ಕೆಲವು ನವಜಾತ ಶಿಶುಗಳಿಗೆ ಮೈ ಮೇಲೆ ಹೆಚ್ಚಿನ ಕೂದಲು ಇರುತ್ತದೆ. ದಿನಗಳು ಕಳೆದಂತೆ ಕೂದಲು ಕಡಿಮೆಯಾಗುತ್ತವೆ. ಆದರೆ ದಿನ ಕಳೆದಂತೆ ಮಕ್ಕಳು ಬೆಳೆಯುತ್ತಾ ಹೋಗುತ್ತಾರೆ ಅದೇ ರೀತಿ ಕೂದಲ ಬೆಳೆಯುತ್ತ ಹೋದ್ರೆ ತೊಂದರೆ ಆಗಬಹುದು. ಹಾಗಾಗಿ ಶುರುವಿನಿಂದಲೇ ಕಾಳಜಿ ವಹಿಸುವುದು ಉತ್ತಮ.. ಇನ್ನು ಕೂದಲನ್ನು ನಿವಾರಣೆ ಮಾಡಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ.!

ಅರಿಶಿಣ ಮತ್ತು ಮೊಸರು
ಒಂದು ಟೇಬಲ್ ಸ್ಪೂನ್ ಅಷ್ಟು ಮೊಸರಿಗೆ ಅರ್ಧ ಟೇಬಲ್ ಸ್ಪೂನ್ ಅಷ್ಟು ಅರಿಶಿಣವನ್ನು ಬೆಳೆಸಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಆ ಮಿಶ್ರಣವನ್ನ ಮಗುವಿನ ದೇಹಕ್ಕೆ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಮಸಾಜ್ ಮಾಡಿ ಹಾಗೂ ಸ್ನಾನ ಮಾಡಿಸುವುದರಿಂದ, ದಿನೇ ದಿನೇ ಕಳೆದಂತೆ ಕೂದಲು ಕಡಿಮೆಯಾಗುತ್ತದೆ.

ಆಲಿವ್ ಆಯಿಲ್ ಮತ್ತು ನಿಂಬೆರಸ
ಒಂದು ಟೇಬಲ್ ಸ್ಪೂನ್ ಅಷ್ಟು ಆಲಿವ್ ಆಯಿಲ್ ಗೆ ಅದರ ಸರಿ ಪ್ರಮಾಣದ ಎಷ್ಟು ನಿಂಬೆರಸವನ್ನ ಬೆರೆಸಿ ನಂತರ ಆ ಮಿಶ್ರಣವನ್ನ ಮಗುವಿನ ಮೈಮೇಲೆ ಚೆನ್ನಾಗಿ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಮಸಾಜ್ ಮಾಡಿ ಬಿಸಿ ನೀರಿಂದ ಸ್ನಾನ ಮಾಡಿಸಿ. ಈ ರೆಮಿಡಿಯಿಂದ ಕೂದಲು ಉದುರುವುದು ಪಕ್ಕ.
ಕಡಲೆ ಹಿಟ್ಟು ಮತ್ತು ಹಾಲು
ಒಂದು ಟೇಬಲ್ ಸ್ಪೂನ್ ನಷ್ಟು ಕಡಲೆಹಿಟ್ಟಿಗೆ ಅದಕ್ಕೆ ಬೇಕಾದಷ್ಟು ಹಾಲನ್ನ ಬೆರೆಸಿ. ಹಾಗೂ ಸ್ನಾನ ಮಾಡಿಸುವ ಮುನ್ನ ಮಗುವಿನ ಮೈಗೆ ಆ ಮಿಶ್ರಣವನ್ನು ಹಚ್ಚಿ ಒಂದಿಷ್ಟು ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಸ್ನಾನ ಮಾಡಿಸಿ..ಇದರಿಂದ ಕೂದಲ ಬೆಳವಣಿಗೆ ಕಡಿಮೆಯಾಗುತ್ತದೆ.

ಇದೆಲ್ಲದರ ಜೊತೆಗೆ ನೀವು ಈ ಮಿಶ್ರಣಗಳನ್ನ ಮಗುವಿನ ಇಡಿ ದೇಹಕ್ಕೆ ಹಚ್ಚುವ ಮೊದಲು ಯಾವುದಾದರೂ ಒಂದು ಭಾಗಕ್ಕೆ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಡಿ.
ಕಾರಣ ಈ ಮಿಶ್ರಣದಿಂದ ಯಾವುದೇ ರೀತಿಯ ರಿಯಾಕ್ಷನ್ ಇರಿಟೇಶನ್ ಗುಳ್ಳೆಗಳು ಅಥವಾ ಅಲರ್ಜಿ ಕಾಣಿಸಿಕೊಳ್ಳದೆ ಇದ್ದರೆ ಮಗುವಿನ ದೇಹಕ್ಕೆ ಹಚ್ಚಬಹುದು.
ಹಾಗೂ ಮಗುವಿನ ಚರ್ಮ ಅಥವಾ ಮೈ ತುಂಬಾನೇ ಮೃದುವಾಗಿರುತ್ತದೆ ಹಾಗಾಗಿ ಮಸಾಜ್ ಮಾಡುವಾಗ ಜಾಗೃತಿಯಿಂದ ಮಾಡಬೇಕು.