ಥೈರಾಯ್ಡ್ ಅನ್ನೋದು ಇತ್ತೀಚಿನ ದಿನಗಳಲ್ಲಿ ತುಂಬಾನೇ ಕಾಮನ್ ಆದ ಸಮಸ್ಯೆಯಾಗಿದ್ದು ಹೆಚ್ಚಿನ ಹೆಣ್ಣು ಮಕ್ಕಳಲ್ಲಿ ಈ ಪ್ರಾಬ್ಲಮ್ ಜಾಸ್ತಿಯಾಗಿದೆ. ಅಯೋಡಿನ್ ಅಂಶದ ಕೊರತೆ ಹಾಗೂ ನಿಯಮಿತವಾಗಿ ದೇಹದ ಬೆಳವಣಿಗೆ ಮತ್ತು ಪೋಷಣೆಗೆ ಬೇಕಾದ ಪೌಷ್ಟಿಕ ಆಹಾರ ಸೇವಿಸದೇ ಇರುವುದು ಕೂಡ ಥೈರಾಯ್ಡ್ ಸಮಸ್ಯೆಗೆ ಕಾರಣವಾಗುತ್ತದೆ. ಇನ್ನು ಗರ್ಭಿಣಿಯರಿಗೆ ಥೈರಾಯ್ಡ್ ಕಾಡುವುದು ಸಜಹ..ಹಾಗೆಗಿ ಥೈರಾಯ್ಡ್ ಮ್ಯಾನೇಜ್ ಮಾಡುವುದು ಅತ್ಯಾವಶ್ಯ..ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಮ್ಯಾನೇಜ್ ಮಾಡಲು ಈ ಸುಲಭ ಮಾರ್ಗಳನ್ನು ಅನುಸರಿಸಿ..

ಆಹಾರ ಪದ್ಧತಿಯಲ್ಲಿ ಬದಲಾವಣೆಗಳು
ಸೀ ಫುಡ್ ಮತ್ತು ಅಯೋಡಿನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಥೈರಾಯ್ಡ್ ಮ್ಯಾನೇಜ್ ಮಾಡಲು ಸಹಾಯ ಮಾಡುತ್ತದೆ.
ಅತಿಯಾದ ಅಯೋಡಿನ್ ಸೇವನೆಯನ್ನು ತಪ್ಪಿಸಿ
ಅತಿಯಾದ ಅಯೋಡಿನ್ ಸೇವನೆಯನ್ನು ತಪ್ಪಿಸಿ, ಏಕೆಂದರೆ ಇದು ಥೈರಾಯ್ಡ್ ಸಮಸ್ಯೆಗಳನ್ನು ಇನ್ನಷ್ಟು ಹದಗೆಡಿಸಬಹುದು.

ನೀರಿನಂಶ ಕಾಪಾಡಿಕೊಳ್ಳಿ
ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳುವುದು ಮುಖ್ಯ ಇದು ಥೈರಾಯ್ಡ್ ಕಾರ್ಯ ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಸಾಕಷ್ಟು ನಿದ್ರೆ ಪಡೆಯಿರಿ
ನಿದ್ರೆ ಸರಿಯಾಗಿ ಮಾಡುವುದರಿಂದ ಥೈರಾಯ್ಡ್ ಹಾರ್ಮೋನ್ ಮಟ್ಟವನ್ನು ನಿಯಂತ್ರಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.