ಮನೆಗಳಲ್ಲಿ ಪಾತ್ರೆಗಳು ಸಾಕಷ್ಟು ಇದ್ದರೂ ಕೂಡ ಟಿ ಅಥವಾ ಕಾಫಿಯನ್ನು ಮಾಡಲು ಪ್ರತಿದಿನ ಒಂದೇ ಪಾತ್ರೆಯನ್ನ ಬಳಸುತ್ತೇವೆ ಅದಲು ಟೀ ಮಾಡಿದ ಪಾತ್ರೆಯನ್ನು ತೊಳೆಯಲು ಸ್ವಲ್ಪ ಕಷ್ಟ ಯಾಕೆಂದರೆ ಕಲೆಗಳು ಹೆಚ್ಚಿರುತ್ತದೆ. ಹಾಗೂ ಕೆಲವು ಬಾರಿ ಯಾವುದಾದರು ಒಂದು ಪದಾರ್ಥವನ್ನು ನೋಡದೆ ಅಥವಾ ಅದರ ಮೇಲೆ ಗಮನಹರಿಸದೆ ಅದು ಅತಿಯಾಗಿ ಬಿಸಿಯಾಗಿ ಹೊತ್ತಿ ಹೋಗಬಹುದು. ಇದರಿಂದ ಪದಾರ್ಥ ಹಾಳಾಗುವುದಲ್ಲದೆ ಪಾತ್ರೆ ಕೂಡ ಸುಟ್ಟು ಹೋಗುತ್ತದೆ. ಚಹಾ ಮಾಡಿದ ಪಾತ್ರೆಯಲ್ಲಿ ಇರುವಂತಹ ಕಲೆಗಳನ್ನ ಹಾಗೂ ಸುಟ್ಟು ಕರಕಲು ಆದಂತ ಕಲೆಗಳಲ್ಲೂ ಶಮನ ಮಾಡಲು ಸ್ವಲ್ಪ ಕಷ್ಟ.. ಹಾಗಾಗಿ ಈ ಬೆಸ್ಟ್ ಟಿಪ್ಸ್ ಬಳಸಿ ಕಲೆಗಳನ್ನ ಹೋಗಲಾಡಿಸಿ.

ಅಡುಗೆ ಸೋಡಾ
ಟೀ ಅಥವಾ ಕಾಫಿ ಪಾತ್ರೆಗಳಲ್ಲಿ ಇರುವಂತಹ ಕಪ್ಪು ಕಲೆಗಳನ್ನ ತೆಗೆದುಹಾಕಲು ಒಂದು ಟೇಬಲ್ ಸ್ಪೂನ್ ಅಷ್ಟು ಬೇಕಿಂಗ್ ಸೋಡಾ ಗೆ ಅರ್ಧದಷ್ಟು ನಿಂಬೆ ರಸವನ್ನ ಹಾಕಿ ಮಿಶ್ರಣ ಮಾಡಿ. ಆ ಮಿಶ್ರಣವನ್ನು ಕಲೆಯಾದ ಪಾತ್ರೆಗಳಿಗೆ ಹಚ್ಚಿ ಅರ್ಧ ಗಂಟೆಗಳ ಕಾಲ ಬಿಟ್ಟು ತೊಳಿಯುವುದರಿಂದ ಕಲೆಗಳು ಬೇಗನೆ ನಿವಾರಣೆಯಾಗುತ್ತದೆ.
ಉಪ್ಪು
ಕಲೆಗಳು ಹೆಚ್ಚಿರುವ ಪಾತ್ರಗಳ ಮೇಲೆ ಉಪ್ಪನ್ನ ಸವರಿ ಕೆಲ ನಿಮಿಷಗಳ ಕಾಲ ಹಾಗೆ ಬಿಡಿ ನಂತರ ಒಂದು ಬ್ರಷ್ ನಿಂದ ಚೆನ್ನಾಗಿ ಉಜ್ಜಿದರೆ ಕಲೆಗಳು ಶಮನಗೊಳ್ಳುತ್ತದೆ.

ನೀರು ಮತ್ತು ವೈಟ್ ವಿನೆಗರ್
ಒಂದು ಟೇಬಲ್ ಸ್ಪೂನ್ ಅಷ್ಟು ವೈಟ್ ವಿನೆಗರ್ ಅನ್ನ ಅರ್ಧ ಪಾತ್ರೆ ನೀರಿಗೆ ಬೆರೆಸಿ. ನಂತರ ಆ ಮಿಶ್ರಣವನ್ನು ಕಲೆಯಾಗಿರುವ ಪಾತ್ರಗಳ ಒಳಗೆ ಹಾಕಿ ಅರ್ಧ ಗಂಟೆ ಬಿಡಿ.. ಇದರಿಂದ ಕಲೆಗಳು ಶಮನವಾಗುತ್ತದೆ.