ಅರಣ್ಯ ಇಲಾಖೆ ಪೊಲೀಸರ ದಾಳಿ ಸಂದರ್ಭದಲ್ಲಿ ಅಶೋಕ್ ಪಾಟೀಲ್ ಮನೆಯ ಜಗಲಿಯಲ್ಲಿ ಹುಲಿ ಚರ್ಮವನ್ನು ಪೂಜೆಗೆ ಇಟ್ಟಿದ್ದರು ಎನ್ನಲಾಗಿದೆ
ಬೀದರ್: ಮನೆಯಲ್ಲಿ ಹುಲಿ ಚರ್ಮ ಪತ್ತೆಯಾದ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡ ಅಶೋಕ್ ಪಾಟೀಲ್ ಅವರನ್ನ ಬಂಧಿಸಿರುವ ಅರಣ್ಯ ಇಲಾಖೆ ಪೊಲೀಸರು, ಹುಲಿ ಚರ್ಮವನ್ನ ವಶಕ್ಕೆ ಪಡೆದಿದ್ದಾರೆ.
ಬೀದರ್ ತಾಲೂಕಿನ ಸಂಗೋಳಗಿ ಗ್ರಾಮದ ನಿವಾಸಿ ಜೆಡಿಎಸ್ ಮುಖಂಡ ಅಶೋಕ್ ಪಾಟೀಲ್ ಅವರ ಮನೆಯಲ್ಲಿ ಹುಲಿ ಚರ್ಮದ ತುಂಡುಗಳು ಇರುವ ಬಗ್ಗೆ ದೊರೆತ ಖಚಿತ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಬೀದರ್ ಮತ್ತು ಕಲಬುರಗಿ ಅರಣ್ಯ ಇಲಾಖೆ ಅಧಿಕಾರಿಗಳು ಅಶೋಕ್ ಪಾಟೀಲ್ ಅವರನ್ನ ಬಂಧಿಸಿದ್ದಾರೆ.


ಅರಣ್ಯ ಇಲಾಖೆ ಪೊಲೀಸರ ದಾಳಿ ಸಂದರ್ಭದಲ್ಲಿ ಅಶೋಕ್ ಪಾಟೀಲ್ ಮನೆಯ ಜಗಲಿಯಲ್ಲಿ ಹುಲಿ ಚರ್ಮವನ್ನು ಪೂಜೆಗೆ ಇಟ್ಟಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು 4 ಹುಲಿ ಚರ್ಮದ ತುಂಡುಗಳನ್ನು ಜಪ್ತಿ ಮಾಡಿದ್ದಾರೆ. ಅಶೋಕ್ ಪಾಟೀಲ್ ಅವರನ್ನು ವಶಕ್ಕೆ ಪಡೆದು ಮುಂದಿನ ವಿಚಾರಣೆ ಕೈಗೊಂಡಿದ್ದಾರೆ.
ಬೀದರ್ ಅರಣ್ಯ ಇಲಾಖೆ ಅಧಿಕಾರಿ ವಾನತಿ ನೇತೃತ್ವದ ತಂಡದಿಂದ ದಾಳಿ ನಡೆಸಲಾಗಿದ್ದು, ದಾಳಿಯಲ್ಲಿ ಎಎಸ್‌ಎಫ್ ಡಾ.ಶಿವಕುಮಾರ್, ವಲಯ ಅರಣ್ಯ ಅಧಿಕಾರಿ ಮಹೇಂದ್ರ ಮೌರ್ಯ ಸೇರಿದಂತೆ ಇತರೆ ಸಿಬ್ಬಂದಿ ಇದ್ದರು.