• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ ಆಗ್ತಿದೆ.. ಅದು ಸಿಎಂ ಚೇಂಜ್ ಆದ್ರೂ ಇರಬಹುದು !

ಪ್ರತಿಧ್ವನಿ by ಪ್ರತಿಧ್ವನಿ
December 11, 2022
in ಕರ್ನಾಟಕ, ರಾಜಕೀಯ
0
ಮಂಗಳೂರು; ಪಾಲಿಕೆ ನೂತನ ಮಹಾಪೌರರಾಗಿ ಬಿಜೆಪಿಯ ಜಯಾನಂದ ಆಯ್ಕೆ ಸಾಧ್ಯತೆ
Share on WhatsAppShare on FacebookShare on Telegram

ರಾಜ್ಯ ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿ ನಾವಿಕನಾಗಿ ಸರ್ಕಾರವನ್ನು ನಡೆಸಿದ್ರೆ, ನಳೀನ್​ ಕುಮಾರ್​ ಕಟೀಲ್​ ಪಕ್ಷವನ್ನು ಮುನ್ನಡೆಸಲು ನಾವಿಕನಾಗಿದ್ದಾರೆ. ಆದರೆ ಇವರಿಬ್ಬರ ನೇತೃತ್ವದಲ್ಲಿ ವಿಧಾನಸಭಾ ಚುನಾವಣೆಗೆ ಹೋದರೆ ಪಕ್ಷ ಗೆಲ್ಲುವ ಯಾವ ಲಕ್ಷ ಇಲ್ಲ ಅನ್ನೋದು ಸರ್ವೇಗಳಲ್ಲಿ ಹೊರಬಿದ್ದಿದೆ. ಈಗಾಗಲೇ ಮೂರ್ನಾಲ್ಕು ಸರ್ವೇ ಮಾಡಿಸಿರುವ ಬಿಜೆಪಿ ಹೈಕಮಾಂಡ್​ ರಾಜ್ಯದಲ್ಲಿ ಮರು ಆಯ್ಕೆ ಆಗುವ ಸಾಧ್ಯತೆಗಳು ಇಲ್ಲ ಎನ್ನುವ ಸಂದೇಶಗಳೇ ಹೈಕಮಾಂಡ್​ಗೆ ತಲುಪಿವೆ. ಹೀಗಾಗಿ ದೆಹಲಿಯಲ್ಲಿ ಭಾರೀ ಚರ್ಚೆಗಳು ಶುರುವಾಗಿದ್ದು, ದೆಹಲಿಯಿಂದ ಬಂದಿರುವ ಮಾಹಿತಿಯನ್ನು ಆರ್​ಎಸ್​ಎಸ್​ ಮುಖಂಡರು ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಶುಕ್ರವಾರ ಮಧ್ಯರಾತ್ರಿ ತನಕ ಸಿಎಂ ಜೊತೆಗೆ ನಡೆದ ಸಭೆಯಲ್ಲಿ ಸಿಎಂ ಅದಲು ಬದಲು ಮಾಡುವ ಬಗ್ಗೆಯೂ ಮಾತುಕತೆ ಆಗಿದೆ ಎನ್ನಲಾಗಿದೆ. ಆದರೆ ಸಿಎಂ ಬದಲಾವಣೆ ಆದರೆ ಲಿಂಗಾಯತ ಸಮಯುದಾಯವನ್ನು ಎದುರು ಹಾಕಿಕೊಳ್ಳುವ ಭೀತಿಯೂ ಶುರುವಾಗಿದೆ.

ADVERTISEMENT

ಬಿ.ಎಲ್​​ ಸಂತೋಷ್​​ ನೇತೃತ್ವದಲ್ಲಿ ನಡೆಯುತ್ತಿದೆ ಸ್ಟ್ರಾಟಜಿ..!

ಆರ್​ಎಸ್​ಎಸ್​ ಮೂಲದಿಂದ ಬಂದಿರುವ ನಾಯಕ ಬಿ.ಎಲ್​ ಸಂತೋಷ್​, ದೆಹಲಿ ಮಟ್ಟದಲ್ಲಿ ಭಾರೀ ಪ್ರಭಾವಿ ಆಗಿದ್ದಾರೆ. ರಾಜ್ಯದ ಪ್ರಮುಖ ನಿರ್ಧಾರಗಳಲ್ಲಿ ಮಹತ್ವದ ಪಾತ್ರ ನಿರ್ವಹಣೆ ಮಾಡುತ್ತಿದ್ದಾರೆ. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ಮಾಡಿ ಬೇರೊಬ್ಬರ ನಾಯಕತ್ವದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲು ತಯಾರಿ ನಡೆಯುತ್ತಿದೆ ಎನ್ನಲಾಗಿದೆ. ಒಂದು ವೇಳೆ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಚುನಾವಣೆಗೆ ಹೋಗಬೇಕು ಎನ್ನುವುದಾದರೆ ಸಚಿವ ಸಂಪುಟ ವಿಸ್ತರಣೆ ಮಾಡಿಕೊಂಡು ಹೊಸ ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಂಡು ಚುನಾವಣೆಗೆ ಹೋಗುವ ಬಗ್ಗೆಯೂ ಆಯ್ಕೆ ಕೊಡಲಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಸಚಿವ ಸಂಪುಟ ವಿಸ್ತರಣೆ ವೇಳೆ ಕೆಲವರನ್ನು ಹೊರಕ್ಕೆ ಕಳುಹಿಸುವ ಸಾಧ್ಯತೆ ಹೆಚ್ಚಾಗಿದೆ. ಕೊರೊನಾ ಸಮಯ ಹಾಗು ಭ್ರಷ್ಟಾಚಾರದ ವಿಚಾರದಲ್ಲಿ ಯಾರೆಲ್ಲಾ ಸರ್ಕಾರದ ಹೆಸರು ಹಾಳು ಮಾಡಿದ್ದಾರೆ. ಅಂತಹ ಸಚಿವರನ್ನು ಕೈಬಿಡುವುದಕ್ಕೆ ತಯಾರಿ ನಡೆದಿದೆ.

ದೆಹಲಿ ತಲುಪಿದ್ದಾರೆ ಚನ್ನಪಟ್ಟಣದ ನಾಯಕ ಸಿ.ಪಿ ಯೋಗೇಶ್ವರ್..!

RSS ನಾಯಕರೊಂದಿಗೆ ಸಿಎಂ ಸಾಲು ಸಾಲು ಸಭೆ ನಡೆದಿದೆ. ಡಿಸೆಂಬರ್​ 7ರಂದು ದತ್ತಾತ್ರೇಯ ಹೊಸಬಾಳೆ ಹಾಗು ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ್ದರು. ಶುಕ್ರವಾರ ಒಂದೇ ದಿನ 2 ಬಾರಿ C R ಮುಕುಂದ್ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಸಂಪುಟ ವಿಸ್ತರಣೆ ಮಾಡುವುದಾದರೆ ಯಾರನ್ನು ಸೇರಿಸಿಕೊಳ್ಳಬೇಕು, ಯಾರನ್ನು ವಿಧಾನಸಭಾ ಸಂಪುಟದಿಂದ ಕೈಬಿಡಬೇಕು. ವಿಧಾನಸಭೆ ಟಿಕೆಟ್ ನೀಡುವಾಗ ಏನೆಲ್ಲಾ ಪರಿಗಣನೆ ಮಾಡ್ಬೇಕು ಅನ್ನೋದ್ರ ಜೊತೆಗೆ ಕೆಲವು ಶಾಸಕರು, ಸಚಿವರ ಕೆಲಸ ಹಾಗು ಸಾಧನೆಗಳ ಬಗ್ಗೆ ಪರಾಮರ್ಶೆಯ ವರದಿ ತೆಗೆದುಕೊಳ್ಳಲಾಗಿದೆ. ಬೆಳಗಾವಿ ಅಧಿವೇಶನಕ್ಕೂ ಮುನ್ನವೇ ಸಚಿವ ಸಂಪುಟ ವಿಸ್ತರಣೆ ಮಾಡಬೇಕು. 10 ಹೊಸ ಮುಖಗಳನ್ನು ತಂದು ಸರ್ಕಾರದ ಮೇಲೆ ಬಂದಿರುವ 40 ಪರ್ಸೆಂಟ್​​ ಭ್ರಷ್ಟಾಚಾರದ ಆರೋಪದಿಂದ ಹೊರಕ್ಕೆ ಬಂದು ಹೊಸ ಟೀಂನಿಂದ ಚುನಾವಣೆ ಎದುರಿಸಲು ಭಾರತೀಯ ಜನತಾ ಪಾರ್ಟಿ ನಾಯಕತ್ವ ನಿರ್ಧಾರ ಮಾಡಿದೆ.

ಗುಜರಾತ್​ನಲ್ಲಿರುವ ಬಿ.ಎಸ್​ ಯಡಿಯೂರಪ್ಪ ಜೊತೆಗೆ ಚರ್ಚೆ..!

ಗುಜರಾತ್​​ ಸರ್ಕಾರ ರಚನೆಯಲ್ಲಿ ವೀಕ್ಷಕರಾಗಿ ಬಿ.ಎಸ್​ ಯಡಿಯೂರಪ್ಪ ತೆರಳಿದ್ದು, ರಾಜ್ಯ ವಿಧಾನಸಭಾ ಚುನಾವಣೆ ಬಗ್ಗೆಯೂ ಚರ್ಚೆಯೂ ನಡೆಯಲಿ ಎನ್ನಲಾಗ್ತಿದೆ. ಪಕ್ಷದ ಬಲವರ್ಧನೆ, 2023 ಚುನಾವಣೆಯಲ್ಲಿ ಗೆಲ್ಲುವ ದೃಷ್ಟಿಯಿಂದ ಬಹುದೊಡ್ಡ ಮಟ್ಟದಲ್ಲಿ ಸರ್ಜರಿ ಮಾಡುವ ಲೆಕ್ಕಾಚಾರ ನಡೆದಿದೆ. ಬಸವರಾಜ ಬೊಮ್ಮಾಯಿ ಅವರನ್ನು ಸಚಿವ ಸಂಪುಟಕ್ಕೆ ಕೆ.ಎಸ್​ ಈಶ್ವರಪ್ಪ, ರಮೇಶ್ ಜಾರಕಿಹೊಳಿ, ಸಿ.ಪಿ ಯೋಗೇಶ್ವರ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಮೂಲ ಬಿಜೆಪಿಗರಿಗೆ ಸಂಪುಟದಲ್ಲಿ ಸ್ಥಾನಮಾನ ನೀಡುವುದು ಅಷ್ಟೇ ಅಲ್ಲ, ಯುವ ಶಾಸಕರಿಗೆ ಸಂಪುಟದಲ್ಲಿ ಹೊಣೆಗಾರಿಕೆ ನೀಡುವುದು ಸಂಘ ಪರಿವಾರದ ನಿರ್ಧಾರ ಎನ್ನಲಾಗಿದೆ. ಈಗಾಗಲೇ ಸಿ.ಪಿ ಯೋಗೇಶ್ವರ್ ಈಗಾಗಲೇ ದೆಹಲಿಗೆ ತೆರಳಿದ್ದು, ಶೀಘ್ರದಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಕೂಡ ದೆಹಲಿಗೆ ತೆರಳಲಿದ್ದು, ಬಾಂಬೆ ಟೀಂನಲ್ಲಿ ಕೆಲವರನ್ನು ಕೈ ಬಿಡುವ ಸಾಧ್ಯತೆಗಳು ಹೆಚ್ಚಾಗಿದೆ ಎನ್ನುವ ಮಾಹಿತಿ ಸಿಗ್ತಿದೆ.

ಕೃಷ್ಣಮಣಿ

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಮನೆಯಲ್ಲಿ ಹುಲಿ ಚರ್ಮ‌ ಪತ್ತೆ: ಜೆಡಿಎಸ್ ಮುಖಂಡನ ಬಂಧನ

Next Post

ಆರನೇ ‘ವಂದೇ ಭಾರತ್‌ ರೈಲಿ’ ಗೆ ಪ್ರಧಾನಿ ಮೋದಿ ಚಾಲನೆ

Related Posts

ಕರ್ನಾಟಕ ರಾಜಕೀಯದಲ್ಲಿ ಮಹಾಪಲ್ಲಟ: ಸಿದ್ದರಾಮಯ್ಯ ರಾಜೀನಾಮೆ, ಡಿಕೆ ಶಿವಕುಮಾರ್ ನೂತನ ಸಿಎಂ?
ಕರ್ನಾಟಕ

ಕರ್ನಾಟಕ ರಾಜಕೀಯದಲ್ಲಿ ಮಹಾಪಲ್ಲಟ: ಸಿದ್ದರಾಮಯ್ಯ ರಾಜೀನಾಮೆ, ಡಿಕೆ ಶಿವಕುಮಾರ್ ನೂತನ ಸಿಎಂ?

by ಪ್ರತಿಧ್ವನಿ
May 28, 2026
0

ಕರ್ನಾಟಕ ರಾಜಕೀಯದಲ್ಲಿ ಐತಿಹಾಸಿಕ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ವರ್ಷದ ಆಡಳಿತದ ಬಳಿಕ ಅಧಿಕೃತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಉಪಮುಖ್ಯಮಂತ್ರಿ...

Read moreDetails
ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

ಮಧ್ಯಾಹ್ನ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ: ಡಿಕೆಶಿ ಮುಂದಿನ ಸಿಎಂ ಬಹುತೇಕ ಖಚಿತ?

May 28, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ರಾಜ್ಯಸಭೆ ಸ್ಥಾನಕ್ಕೆ ಸಿದ್ದರಾಮಯ್ಯ ನಿರಾಸಕ್ತಿ? ರಾಜ್ಯ ರಾಜಕೀಯದಲ್ಲೇ ಮುಂದುವರಿಯಲು ಸಿಎಂ ಮನಸ್ಸು!

May 28, 2026
ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

May 28, 2026
ಸಿದ್ದರಾಮಯ್ಯ ರಾಜೀನಾಮೆ ಸುದ್ದಿಗೆ ಬಿಜೆಪಿ ನಾಯಕರು‌ ಹೇಳಿದ್ದೇನು ?

ಸಿದ್ದರಾಮಯ್ಯ ರಾಜೀನಾಮೆ ಸುದ್ದಿಗೆ ಬಿಜೆಪಿ ನಾಯಕರು‌ ಹೇಳಿದ್ದೇನು ?

May 28, 2026
Next Post
ಆರನೇ ‘ವಂದೇ ಭಾರತ್‌ ರೈಲಿ’ ಗೆ ಪ್ರಧಾನಿ ಮೋದಿ ಚಾಲನೆ

ಆರನೇ 'ವಂದೇ ಭಾರತ್‌ ರೈಲಿ' ಗೆ ಪ್ರಧಾನಿ ಮೋದಿ ಚಾಲನೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada