ಮೈಸೂರು: ಹೆಚ್ ಡಿ ಕೋಟೆ ತಾಲೂಕಿನ ದಮ್ಮನಕಟ್ಟೆ ಅರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಇಂದು ಮುಂಜಾನೆ ಹುಲಿಗಳ ದರ್ಶನ ನೀಡಿದೆ
ತಾಯಿಯೊಂದಿಗಿದ್ದ ನಾಲ್ಕು ಹುಲಿ ಮರಿಗಳನ್ನು ಕಂದು ಕಣ್ತುಂಬಿಕೊಂಡು ಪ್ರವಾಸಿಗರು ಸಂತಸಪಟ್ಟಿದ್ದಾರೆ .
ಇಂದು ಬೆಳ್ಳಂಬೆಳಿಗ್ಗೆ ತಾಸುಗಟ್ಟಲೇ ಮರಿಗಳೊಂದಿಗೆ ದರ್ಶನ ನೀಡಿದ ಹುಲಿಗಳ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದ ಪ್ರವಾಸಿಗರು.ಸಾಮಾಜಿಕ ಜಾರಣದಲ್ಲಿ ಹಂಚಿಕೊಂಡಿದ್ದಾರೆ .
ಕಳೆದೊಂದು ವಾರದಿಂದ ಪ್ರವಾಸಿಗರಿಗೆ ನಾಗರಹೊಳೆ ಸಫಾರಿ ಕಬಿನಿ ಹಿನ್ನೀರಿನಲ್ಲಿ ದರ್ಶನ ನೀಡುತ್ತಿರುವ ಹುಲಿಗಳು.ಜಿಂಕೆ ಬೇಟೆಯಾಡಿ ಮರಿ ಹುಲಿಗಳಿಗೆ ಆಹಾರ ಸಬರಾಜು ಮಾಡುತ್ತಿರುವ ತಾಯಿ ಹುಲಿ.ಮರಿಗಳಿಗೆ ಬೇಟೆಯಾಡುವ ವಿದ್ಯೆ ಕಲಿಸಿ ಅರಣ್ಯ ಪ್ರದೇಶದ ಪರಿಚಯ ಮಾಡುತ್ತಿರುವ ತಾಯಿ ಹುಲಿ.ಪ್ರವಾಸಿಗರ ವಾಹನ ಕಂಡು ಕಾಡಿನ ಮರಗಳ ಮರೆಯಿಂದ ಹೊರ ಬರಲು ಭಯ ಪಡುತ್ತಿರುವ ಮರಿ ಹುಲಿಗಳು.ಮರಿ ಹುಲಿಗಳ ಭಯದ ಸ್ಥಿತಿ ಅರಿತು ಭಯಪಡಬೇಡಿ ನಾನಿದ್ದೀನಿ ಬನ್ನಿ ಎಂದು ಧೈರ್ಯದ ಸಂದೇಶ ನೀಡುತ್ತಿರುವ ತಾಯಿ ಹುಲಿ. ತಾಯಿಯ ಸಂದೇಶ ಗಮನಿಸಿ ಆಗಾಗ ಪೊದೆಯಿಂದ ಹೊರ ಬಂದರೂ ಬಯಲು ಪ್ರದೇಶಕ್ಕೆ ಬರಲು ಭಯಪಟ್ಟು ಮತ್ತೆ ಮತ್ತೆ ಪೊದೆ ಸೇರಿಕೊಳ್ಳುತ್ತಿರುವ ಮರಿ ಹುಲಿಗಳು.ಅಪರೂಪದ ಸನ್ನಿವೇಶವನ್ನು ಕಣ್ತುಂಬಿಕೊಂಡು ಪ್ರವಾಸಿಗರು ಸಂತಸಪಟ್ಟಿದ್ದಾರೆ.