• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕಾಫಿನಾಡಿನಲ್ಲಿ ಕಾಂಗ್ರೆಸ್​ಗೆ ವಲಸಿಗರಿಂದ ಹೆಚ್ಚಿದ ಸಂಕಷ್ಟ : ಮಿತಿಮೀರಿದ ಬಂಡಾಯದ ಕೂಗು

ಪ್ರತಿಧ್ವನಿ by ಪ್ರತಿಧ್ವನಿ
March 24, 2023
in ಕರ್ನಾಟಕ, ರಾಜಕೀಯ
0
ಕಾಫಿನಾಡಿನಲ್ಲಿ ಕಾಂಗ್ರೆಸ್​ಗೆ ವಲಸಿಗರಿಂದ ಹೆಚ್ಚಿದ ಸಂಕಷ್ಟ : ಮಿತಿಮೀರಿದ ಬಂಡಾಯದ ಕೂಗು
Share on WhatsAppShare on FacebookShare on Telegram

ಚಿಕ್ಕಮಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಟಿಕೆಟ್​ ಹಂಚಿಕೆಯ ಟೆನ್ಶನ್​ ಜೋರಾಗಿದೆ. ಇತ್ತ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್​ಗೆ ಟಿಕೆಟ್​ ಹಂಚಿಕೆ ಮಾಡೋದು ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಒಂದು ಕ್ಷೇತ್ರವನ್ನು ಹೊರತುಪಡಿಸಿ ಇನ್ನುಳಿದ ನಾಲ್ಕು ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್​ ನೀಡೋದು ಅನ್ನೋದೇ ಕಾಂಗ್ರೆಸ್​ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.

ADVERTISEMENT
ನಯನಾ ಮೋಟಮ್ಮ

ಚಿಕ್ಕಮಗಳೂರು ಕ್ಷೇತ್ರದಲ್ಲಿ ವಲಸಿಗ ಹಾಗೂ ಮೂಲ ಕಾಂಗ್ರೆಸ್ಸಿಗರ ನಡುವೆ ಫೈಟಿಂಗ್​ ಜೋರಾಗಿದೆ. ವಲಸಿಗರಿಗೆ ಟಿಕಟ್​ ನೀಡಿದರೆ ಮೂಲ ಕಾಂಗ್ರೆಸ್ಸಿಗರು ಸಾಮೂಹಿಕ ರಾಜೀನಾಮೆ ನೀಡುವ ಎಚ್ಚರಿಕೆ ನೀಡ್ತಿದ್ದಾರೆ. ಬಿಜೆಪಿ ನಾಯಕ ಸಿ.ಟಿ ರವಿಗೆ ಠಕ್ಕರ್​ ನೀಡುವ ಸಲುವಾಗಿ ಕಾಂಗ್ರೆಸ್​​ ಹೈಕಮಾಂಡ್​ ಲಿಂಗಾಯತ ಅಸ್ತ್ರ ಬಳಕೆ ಮಾಡಲು ಮುಂದಾಗಿತ್ತು. ಇದಕ್ಕಾಗಿ ವಲಸಿಗ ಲಿಂಗಾಯತ ನಾಯಕರಿಗೆ ಗಾಳ ಹಾಕಿತ್ತು.

ಜಿ.ಹೆಚ್​​ ಶ್ರೀನಿವಾಸ್​​


ಆದರೆ ಈ ಲಿಂಗಾಯತ ಅಸ್ತ್ರಕ್ಕೆ ಇದೀಗ ಮೂಲ ಕಾಂಗ್ರೆಸ್ಸಿಗರು ಅಡ್ಡಿಯಾಗಿದ್ದಾರೆ. ಮೂಡಿಗೆರೆ ಕ್ಷೇತ್ರದಲ್ಲಿ ಮಾಜಿ ಸಚಿವೆ ಮೋಟಮ್ಮ ಪುತ್ರಿಯ ವಿರುದ್ಧ ಇದೀಗ ಅಸಮಾಧಾನದ ಕೂಗು ಕೇಳಿ ಬರ್ತಿದೆ. ನಯನಾ ಮೋಟಮ್ಮರಿಗೆ ಪಕ್ಷದಿಂದ ಟಿಕೆಟ್​ ನೀಡಿದಲ್ಲಿ ಪಕ್ಷ ತೊರೆಯುವುದಾಗಿ ಮೂಲ ಕಾಂಗ್ರೆಸ್ಸಿಗರು ಎಚ್ಚರಿಕೆ ನೀಡಿದ್ದಾರೆ.

ವೈಎಸ್​ವಿ ದತ್ತಾ


ಇತ್ತ ತರಿಕೇರೆ ಕ್ಷೇತ್ರದಲ್ಲಿ ಮಾಜಿ ಶಾಸಕ ಶ್ರೀನಿವಾಸ್​ಗೆ ಟಿಕೆಟ್​ ನೀಡದಂತೆ ಕೂಗು ಕೇಳಿ ಬರ್ತಿದೆ. ಕಳೆದ ಬಾರಿ ಕಾಂಗ್ರೆಸ್​​ನಿಂದ ಟಿಕೆಟ್​​ ಸಿಗದ ಹಿನ್ನೆಲೆಯಲ್ಲಿ ಶ್ರೀನಿವಾಸ್​ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಶ್ರೀನಿವಾಸ್​ ವಿರುದ್ಧ ಅಸಮಾಧಾನ ಇದ್ದರಿಂದ ಅವರು ಶಾಸಕರಾಗಿದ್ದರೂ ಸಹ ಕಾಂಗ್ರೆಸ್​ ಟಿಕೆಟ್​ ನೀಡಿರಲಿಲ್ಲ.


ತರೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ 13 ಮಂದಿ ಟಿಕೆಟ್​ ಆಕಾಂಕ್ಷಿಗಳಿದ್ದು ಯಾರಿಗೆ ಟಿಕೆಟ್​ ನೀಡಿದ್ರೂ ಬಂಡಾಯ ಫಿಕ್ಸ್​ ಆಗಿದೆ. ಕುರುಬ ವಿರೋಧಿ , ಪಕ್ಷ ವಿರೋಧಿ ಎಂದು ಸಿದ್ದರಾಮಯ್ಯ ಆಪ್ತರಾಗಿರುವ ಶ್ರೀನಿವಾಸ್​​ ವಿರುದ್ಧ ತರೀಕೆರೆ ಕಾಂಗ್ರೆಸ್​ ಕಾರ್ಯಕರ್ತರು ಆಕ್ರೋಶ ಹೊರಹಾಕ್ತಿದ್ದಾರೆ.


ಕಡೂರು ಕ್ಷೇತ್ರದಲ್ಲಿಯೂ ವಲಸೆ ಹಾಗೂ ಮೂಲ ಕಾರ್ಯಕರ್ತರ ನಡುವೆ ಕಿರಿಕ್​ ಜೋರಾಗಿದೆ. ವೈ.ಎಸ್​ ವಿ ದತ್ತಾರಿಗೆ ಟಿಕೆಟ್​ ನೀಡಿದರೆ ಬಂಡಾಯ ಏಳುತ್ತೇವೆ ಎಂದು ಮೂಲ ಕಾಂಗ್ರೆಸ್ಸಿಗರು ಹೇಳ್ತಿದ್ದಾರೆ. ಶೃಂಗೇರಿ ವಿಧಾನಸಭಾ ಕ್ಷೇತ್ರ ಒಂದನ್ನು ಹೊರತುಪಡಿಸಿ ಇನ್ನುಳಿದಂತೆ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್​​ನಿಂದ ಬಂಡಾಯದ ಕೂಗು ಹೆಚ್ಚಾಗಿದೆ.

Tags: Chikmagalurmigrant Congress leadersoriginal Congressmen
Previous Post

‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಬೇಕು’ : ಮುಸ್ಲಿಂ ವ್ಯಕ್ತಿಯ ವಿಡಿಯೋ ವೈರಲ್​

Next Post

ಬಾದಾಮಿ ಕ್ಷೇತ್ರದತ್ತ ಸಿದ್ದರಾಮಯ್ಯ ಪ್ರವಾಸ : ಬಾದಾಮಿ ಜನತೆಯಲ್ಲಿ ಚಿಗುರೊಡೆದ ಉತ್ಸಾಹ

Related Posts

“ಮುಂದಿನ 8 ವರ್ಷ ಡಿಕೆಶಿಯನ್ನು ಅಲ್ಲಾಡಿಸಲು ಆಗಲ್ಲ”: ರಾಜಗುರು ದ್ವಾರಕನಾಥ್ ಗುರೂಜಿ ಭವಿಷ್ಯ ವೈರಲ್! 
ಕರ್ನಾಟಕ

ರಾಜೀನಾಮೆ ಬಳಿಕ ಸಿದ್ದರಾಮಯ್ಯ ಭಾವುಕ ವಿದಾಯ ಭಾಷಣ: ಮಾತಾಡಿದ್ದೇನು

by ಪ್ರತಿಧ್ವನಿ
May 28, 2026
0

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ಅನುಪಸ್ಥಿತಿಯಲ್ಲಿ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ಕಾರ್ಯದರ್ಶಿಗೆ ಸಲ್ಲಿಸಿದ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಭಾವುಕ ವಿದಾಯ ಭಾಷಣ ಮಾಡಿದರು. ತಮ್ಮ...

Read moreDetails
“ಮುಂದಿನ 8 ವರ್ಷ ಡಿಕೆಶಿಯನ್ನು ಅಲ್ಲಾಡಿಸಲು ಆಗಲ್ಲ”: ರಾಜಗುರು ದ್ವಾರಕನಾಥ್ ಗುರೂಜಿ ಭವಿಷ್ಯ ವೈರಲ್! 

“ಮುಂದಿನ 8 ವರ್ಷ ಡಿಕೆಶಿಯನ್ನು ಅಲ್ಲಾಡಿಸಲು ಆಗಲ್ಲ”: ರಾಜಗುರು ದ್ವಾರಕನಾಥ್ ಗುರೂಜಿ ಭವಿಷ್ಯ ವೈರಲ್! 

May 28, 2026
ಕರ್ನಾಟಕ ರಾಜಕೀಯದಲ್ಲಿ ಮಹಾಪಲ್ಲಟ: ಸಿದ್ದರಾಮಯ್ಯ ರಾಜೀನಾಮೆ, ಡಿಕೆ ಶಿವಕುಮಾರ್ ನೂತನ ಸಿಎಂ?

ಕರ್ನಾಟಕ ರಾಜಕೀಯದಲ್ಲಿ ಮಹಾಪಲ್ಲಟ: ಸಿದ್ದರಾಮಯ್ಯ ರಾಜೀನಾಮೆ, ಡಿಕೆ ಶಿವಕುಮಾರ್ ನೂತನ ಸಿಎಂ?

May 28, 2026
ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

ಮಧ್ಯಾಹ್ನ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ: ಡಿಕೆಶಿ ಮುಂದಿನ ಸಿಎಂ ಬಹುತೇಕ ಖಚಿತ?

May 28, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ರಾಜ್ಯಸಭೆ ಸ್ಥಾನಕ್ಕೆ ಸಿದ್ದರಾಮಯ್ಯ ನಿರಾಸಕ್ತಿ? ರಾಜ್ಯ ರಾಜಕೀಯದಲ್ಲೇ ಮುಂದುವರಿಯಲು ಸಿಎಂ ಮನಸ್ಸು!

May 28, 2026
Next Post
ಬಾದಾಮಿ ಕ್ಷೇತ್ರದತ್ತ ಸಿದ್ದರಾಮಯ್ಯ ಪ್ರವಾಸ : ಬಾದಾಮಿ ಜನತೆಯಲ್ಲಿ ಚಿಗುರೊಡೆದ ಉತ್ಸಾಹ

ಬಾದಾಮಿ ಕ್ಷೇತ್ರದತ್ತ ಸಿದ್ದರಾಮಯ್ಯ ಪ್ರವಾಸ : ಬಾದಾಮಿ ಜನತೆಯಲ್ಲಿ ಚಿಗುರೊಡೆದ ಉತ್ಸಾಹ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada