ಲೋಕಸಭೆ ಚುನಾವಣೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸುಮಾರು $1,100 ಕೋಟಿ ಮೌಲ್ಯದ ನಗದು ಹಣ ಮತ್ತು ಚಿನ್ನ ವಶಪಡಿಸಿಕೊಂಡಿದ್ದಾರೆ. ಇದು 2019ರ ಚುನಾವಣೆಗಿಂತ 3 ಪಟ್ಟು ಅಧಿಕವಾಗಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ.
ಅಕ್ರಮವಾಗಿ ನಗದು, ಅಭರಣ ಪತ್ತೆ ಆಗಿರುವ ಪಟ್ಟಿಯಲ್ಲಿ ಕರ್ನಾಟಕ ಮತ್ತು ದೆಹಲಿ ಅಗ್ರ ಸ್ಥಾನ ಸಿಕ್ಕಿದೆ. ಈ ಎರಡು ರಾಜ್ಯಗಳಲ್ಲಿ 200 ಕೋಟಿ ಮೌಲ್ಯದ ನಗದು ಹಾಗು ಆಭರಣವನ್ನು ವಶಪಡಿಸಿಕೊಳ್ಳಲಾಗಿದೆ..
ಕರ್ನಾಟಕ, ದೆಹಲಿ ಹೊರತುಪಡಿಸಿದ್ರೆ ತಮಿಳುನಾಡಿನಲ್ಲಿ 150 ಕೋಟಿ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಒಡಿಶಾದಲ್ಲಿ ಸುಮಾರು 100 ಕೋಟಿ ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.