ಕೋಟಾ (ರಾಜಸ್ಥಾನ):ಮೂರು ಮೊಸಳೆಗಳು Three crocodiles)ಮಂಗಳವಾರ ನೀರಿನಿಂದ ಹೊರಬಂದು ರಾಜಸ್ಥಾನದ (Rajasthan)ಕೋಟಾ ಜಿಲ್ಲೆಯ ಗಲಾನಾ ಗ್ರಾಮ, ಬೋರ್ಖೇಡಾ ಮತ್ತು ಮೊರ್ಫಾ ಗ್ರಾಮಕ್ಕೆ ಪ್ರವೇಶಿಸಿವೆ. ಅರಣ್ಯ ಇಲಾಖೆಯು Forest Department )ಎರಡು ಮೊಸಳೆಗಳನ್ನು ಹೊಲ ಮತ್ತು ಮನೆಯೊಂದರಲ್ಲಿ ರಕ್ಷಿಸಿದೆ Protected)ಆದರೆ ನೀರು ತುಂಬಿದ ಜಮೀನಿಗೆ ನುಗ್ಗಿದ ದಾರಿ ತಪ್ಪಿದ ಮೂರನೆಯದನ್ನು ಹಲವಾರು ಪ್ರಯತ್ನಗಳ ಹೊರತಾಗಿಯೂ ರಕ್ಷಿಸಲು ಸಾಧ್ಯವಾಗಲಿಲ್ಲ.ಮೊದಲ ಘಟನೆಯಲ್ಲಿ, ಜಿಲ್ಲೆಯ ಸಂಗೋಡ್ ರಸ್ತೆಯ ಗಾಲನಾ ಗ್ರಾಮದ ಟೋಲ್ ಪ್ಲಾಜಾ ಬಳಿಯ ಹೊಲದಲ್ಲಿ ಸುಮಾರು 200 ಕೆಜಿ ತೂಕದ 12 ಅಡಿ ಉದ್ದದ ಮೊಸಳೆ ಕಾಣಿಸಿಕೊಂಡಿದೆ. ಗಾಬರಿಗೊಂಡ ನಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ತಂಡವು ಸ್ಥಳಕ್ಕೆ ಧಾವಿಸಿ ರಕ್ಷಿಸಿದೆ.
ಮೊಸಳೆಯನ್ನು ಗದ್ದೆಯಿಂದ ರಸ್ತೆಗೆ ತರುವುದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಷ್ಟದ ಕೆಲಸವಾಗಿತ್ತು. ಅದನ್ನು ಹಗ್ಗಗಳಿಂದ ಕೋಲುಗಳಿಗೆ ಕಟ್ಟಿ ನಂತರ ಸ್ಥಳೀಯರ ಸಹಾಯದಿಂದ ಸುಮಾರು 400 ಮೀಟರ್ ರಸ್ತೆಗೆ ಸಾಗಿಸಲಾಯಿತು. ನಂತರ, ದಿಯೋಲಿ ಅರಬ್ನಲ್ಲಿರುವ ನಾಗರ್ ಫಾರೆಸ್ಟ್ನ ಮೊಸಳೆ ವ್ಯೂಪಾಯಿಂಟ್ನಲ್ಲಿ ಬಿಡುಗಡೆ ಮಾಡಲಾಯಿತು.
ಎರಡನೇ ಘಟನೆಯಲ್ಲಿ, ಆರು ಅಡಿ ಉದ್ದದ ಮೊಸಳೆ ಕೋಟಾದ ಬೋರ್ಖೇಡಾದ ಪೊಲೀಸ್ ಠಾಣೆ ಬಳಿಯ ಖಾಲಿ ಜಾಗಕ್ಕೆ ನುಗ್ಗಿತ್ತು. ಅರಣ್ಯ ತಂಡ ಸ್ಥಳಕ್ಕೆ ಧಾವಿಸಿದರೂ ಪ್ಲಾಟ್ನಲ್ಲಿ ಎರಡು ಅಡಿಗೂ ಹೆಚ್ಚು ಆಳದ ನೀರು ಇರುವುದರಿಂದ ಮತ್ತು ದಟ್ಟವಾದ ಪೊದೆಗಳಿಂದ ಆವೃತವಾಗಿರುವ ಕಾರಣ ಅದನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.ಮೊನ್ನೆ ಮಂಗಳವಾರ ಬೆಳಗ್ಗೆ ಜಿಲ್ಲೆಯ ಮೋರ್ಪಾ ಗ್ರಾಮದ ರೈತರೊಬ್ಬರ ಮನೆಯಿಂದ ಸುಮಾರು 200 ಕೆಜಿ ತೂಕದ 12 ಅಡಿ ಉದ್ದದ ಮೊಸಳೆಯನ್ನು ರಕ್ಷಿಸಲಾಗಿತ್ತು.