ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ಜನ ಕಾಳಜಿ ಹಾಗೆ ಆರೈಕೆಯನ್ನು ಮಾಡಿಕೊಳ್ಳುತ್ತಾರೆ. ಕೆಲವರು ಮನೆಯಲ್ಲಿ ಹೋಂ ರೆಮಿಡಿಸನ್ನ ಬಳಸ್ತಾರೆ. ಇನ್ನು ಕೆಲವರು ಸಲೂನ್ ಗೆ ಹೋಗಿ ಫೇಶಿಯಲ್, ಫೇಸ್ ಪ್ಯಾಕ್ ,ಸ್ಕ್ರಬ್ ಇವೆಲ್ಲವನ್ನು ಕೂಡ ಮಾಡಿಸಿಕೊಡುತ್ತಾರೆ.ಕಾರಣ ಮುಖದಲ್ಲಿರುವ ಕಲೆಗಳು ನಿವಾರಣೆಯಾಗುತ್ತದೆ,ಹೊಳಪು ಹೆಚ್ಚುತ್ತದೆ,ಇದೆಲ್ಲದರ ಜೊತೆಗೆ ನಾವು ಸೇವಿಸುವ ಆಹಾರ ಕೂಡ ತುಂಬಾನೆ ಮುಖ್ಯ..ಇದರಲ್ಲಿರುವ ಕೆಲವು ಪೋಷಕಾಂಶಗಳು ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ..ಹಾಗೂ ತಪ್ಪದೇ ಈ ತರಕಾರಿಯನ್ನು ಸೇವಿಸುವುದರಿಂದ ತ್ವಚೆಗೆ ಒಳ್ಳೆಯದು.
ಸೊಪ್ಪುಗಳು
ಹಸಿರು ಎಲೆಗಳು ಅಥವಾ ಸೊಪ್ಪುಗಳನ್ನು ಸೇವಿಸುವುದರಿಂದ ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಹಾಗೂ ಸ್ವತಂತ್ರ ರಾಡಿಕಲ್ಗಳ ವಿರುದ್ಧ ತ್ವಚೆಯನ್ನು ರಕ್ಷಿಸುತ್ತದೆ.
ಟೊಮ್ಯಾಟೋಸ್:
ಟೊಮ್ಯಾಟೋಸ್ ತಿನ್ನುವುದರಿಂದ ಲೈಕೋಪೀನ್, ಉತ್ಕರ್ಷಣ ನಿರೋಧಕ, ಸೂರ್ಯನ ಹಾನಿಯನ್ನು ಕಡಿಮೆ ಮಾಡುತ್ತದೆ. ಚರ್ಮಕ್ಕೆ ಒಳ್ಳೆಯದು.
ಕ್ಯಾರೆಟ್
ಬೀಟಾ ಕ್ಯಾರೋಟಿನ್ ಅಂಶ ಹೆಚ್ಚಿರುತ್ತದೆ. ವಿಟಮಿನ್ A ಸಮೃದ್ಧವಾಗಿರುವುದರಿಂದ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಹಾಗಾಗಿ ವಾರಕ್ಕೆ ಎರಡರಿಂದ ಮೂರು ಬಾರಿ ಕ್ಯಾರೆಟ್ ಜ್ಯೂಸ್ ಅಥವಾ ಹಸಿ ಕ್ಯಾರೆಟ್ ಅನ್ನ ತಿನ್ನುವಂತದ್ದು ಉತ್ತಮ.
ಸೌತೆಕಾಯಿ
ಸೌತಕಾಯನ್ನ ಫೇಸ್ ಪ್ಯಾಕ್ ಆಗಿ ಕೂಡ ಬಳಸ್ತಾರೆ. ಆದರೆ ಸೇವಿಸುವುದರಿಂದ ದೇಹದಲ್ಲಿ ನೀರಿನಂಶ ಹೆಚ್ಚಿಸುತ್ತದೆ. ಪಫಿನೆಸ್ ಅನ್ನು ಕಡಿಮೆ ಮಾಡುತ್ತದೆ.