ಕರೋನಾ ಪ್ರಕರಣ ಇಳಿಕೆಯಾಗಿದೆ ಅನ್ನುವುದು ಭ್ರಮೆ, ಭಾರತದ ಅಂಕಿಅಂಶಗಳು ವಿಶ್ವಾಸಾರ್ಹವಲ್ಲ – ತಜ್ಞರ ಕಳವಳ

ಕೋವಿಡ್‌ ಸೋಂಕುಗಳಲ್ಲಿ ಕಳೆದೊಂದು ತಿಂಗಳಿನಿಂದ ತತ್ತರಿಸಿರುವ ಭಾರತ ಕ್ರಮೇಣ ಸೋಂಕಿನ ತೀವ್ರತೆ ಇಳಿಯುತ್ತಿರುವುದಾಗಿ ವರದಿ ಮಾಡುತ್ತಿದೆ. ಅದಾಗ್ಯೂ, ಕೋವಿಡ್‌ ಸಂಬಂಧಿತ ದೈನಂದಿನ ಸಾವಿನ ಪ್ರಮಾಣ ಈಗಲೂ 4 ಸಾವಿರಕ್ಕೂ ಹೆಚ್ಚಿದೆ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಬಾರಿಗಿಂತಲೂ ವೇಗವಾಗಿ ಈ ಬಾರಿ ಹರಡುತ್ತಿರುವುದರಿಂದ ಭಾರತದ ಈ ಅಂಕಿಅಂಶಗಳು ವಿಶ್ವಾಸಾರ್ಹವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಕೋವಿಡ್‌ ಎರಡನೇ ಅಲೆಯ ವ್ಯಾಪಕ ಹರಡುವಿಕೆಯಿಂದ ದಿನವೊಂದಕ್ಕೆ 4 ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆದರೂ, ರೂಪಾಂತರಿ ಕರೋನಾ ತನ್ನ ಪೀಕ್‌ (ಶಿಖರ)ನ್ನು ತಲುಪಿದೆ ಎಂದು ಒಪ್ಪಿಕೊಳ್ಳಲು ತಜ್ಞರು ತಯಾರಾಗಿಲ್ಲ

ಭಾರತದಲ್ಲಿ ಹರಡುತ್ತಿರುವ B.1.617 ವೇರಿಯೆಂಟ್‌ ದೇಶದಲ್ಲೂ, ವಿದೇಶದಲ್ಲೂ ಆತಂಕಕ್ಕೆ ಕಾರಣವಾಗಿದೆ. ದೇಶದಲ್ಲಿ ಗರಿಷ್ಟ ಮಟ್ಟವನ್ನು ಅಂದರೆ ಪೀಕ್‌ ಲೆವಲನ್ನು ತಲುಪದ ಅನೇಕ ಪ್ರದೇಶಗಳಿವೆ. ಅಲ್ಲಿ ಈಗಲೂ ಸೋಂಕಿನ ಸಂಖ್ಯೆ ಗಣನೀಯ ವರ್ಧನೆಯಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್‌ ಹೇಳಿದ್ದಾರೆ.

ಹೆಚ್ಚಿನ ರಾಜ್ಯಗಳಲ್ಲಿ ಟೆಸ್ಟ್ ಅಸಮರ್ಪಕವಾಗಿದೆ. ಪಾಸಿಟಿವ್ ದರ ಏರುತ್ತಿರುವುದನ್ನು ನೋಡಿದಾಗ ನಾವು ಬೇಕಾದಷ್ಟು ಪರೀಕ್ಷೆ ನಡೆಸಿಲ್ಲ ಎಂಬುದಕ್ಕೆ ಸಾಕ್ಷಿಯೊದಗಿಸುತ್ತದೆ. ಹಲವಾರು ಪ್ರದೇಶಗಳಲ್ಲಿ ಇನ್ನೂ ಗರಿಷ್ಟ ಮಟ್ಟ ತಲುಪಿಲ್ಲ ಎಂದು ಸೌಮ್ಯಾ ತಿಳಿಸಿರುವುದಾಗಿ ದಿ ಹಿಂದೂ ವರದಿ ಮಾಡಿದೆ..

ಪರೀಕ್ಷೆ ನಡೆಸಿದ ಪ್ರಕಾರ ರಾಷ್ಟ್ರೀಯ ಪಾಸಿಟಿವ್ ದರ  ಶೇಕಡಾ 20ರಷ್ಟಿದ್ದು, ಇದು ಗರಿಷ್ಠ ಮಟ್ಟದಲ್ಲಿದೆ. ಇದು ಇದಕ್ಕಿಂತಲೂ ಕೆಟ್ಟ ಸಮಯ ಎದುರಾಗುವ ಸಾಧ್ಯತೆಯ ಸೂಚನೆಯನ್ನು ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.

ಅನೇಕ ರಾಜ್ಯಗಳಲ್ಲಿ ಕೋವಿಡ್‌ ಪರೀಕ್ಷೆ ಅಸಮರ್ಪಕವಾಗಿದೆ. ನಾವು ಅಗತ್ಯ ರೀತಿಯಲ್ಲಿ ಪರೀಕ್ಷೆ ನಡೆಸುತ್ತಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಕರೋನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ ಅನ್ನುವುದು ಭ್ರಮೆ!

ಭಾರತದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ ಎನ್ನುವುದು ಒಂದು ಭ್ರಮೆ ಎಂದು ಯುನೈಟೆಡ್‌ ಸ್ಟೇಟ್ಸ್‌ ವೈದ್ಯಕೀಯ ಪ್ರಾಧ್ಯಾಪಕ ಎಸ್‌ ವಿನ್ಸೆಂಟ್‌ ರಾಜ್‌ಕುಮಾರ್‌ ಹೇಳಿದ್ದಾರೆ.

ಮೊದಲನೆಯದಾಗಿ, ಸೀಮಿತ ಪರೀಕ್ಷೆಯ ಕಾರಣದಿಂದಾಗಿ, ಒಟ್ಟು ಪ್ರಕರಣಗಳ ಸಂಖ್ಯೆ ಬಹಳ ಕಡಿಮೆ ಅಂದಾಜಿಸಲಾಗಿದೆ. ಎರಡನೆಯದಾಗಿ, ಧೃಡೀಕರಿಸಿದ ಪ್ರಕರಣಗಳು ನಗರ ಪ್ರದೇಶಗಳ ಅಂಕಿಅಂಶವನ್ನೇ ನೀಡಬಹುದು ಹೊರತು, ಗ್ರಾಮೀಣ ಪ್ರದೇಶಗಳ ನಿರ್ದಿಷ್ಟ ಪ್ರಕರಣಗಳ ಅಂದಾಜನ್ನು ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಚಂಡಮಾರುತ ಒಡ್ಡಿದ ಸವಾಲು

ಇನ್ನು ಅರಬ್ಬೀ ಸಮುದ್ರದ ಕಿನಾರೆಯಲ್ಲಿ ಅಬ್ಬರಿಸುತ್ತಿರುವ ಚಂಡಮಾರುತ ಕೂಡಾ ಕರೋನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಹಿನ್ನೆಡೆಯಾಗುವ ಸಾಧ್ಯತೆ ಇದೆ. ಕೋವಿಡ್‌ ತೀವ್ವಾಗಿ ಅಪ್ಪಳಿಸಿರುವ ಮಹಾರಾಷ್ಟ್ರ, ಗುಜರಾತ್‌ ಭಾಗದಲ್ಲಿ ಲಕ್ಷಾಂತರ ಮಂದಿಯನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಇದರಿಂ ಕೋವಿಡ್‌ ಪರೀಕ್ಷೆಗೂ, ಕೋವಿಡ್‌ ವ್ಯಾಕ್ಸಿನೇಷನ್‌ಗೂ ತೀವ್ರ ಹಿನ್ನಡೆಯಾಗಿದೆ.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...