ಇಸ್ರೇಲ್‌ vs ಫೆಲಸ್ತೀನ್: ಯಥಾಸ್ಥಿತಿ ಕಾಪಾಡುವಂತೆ ಭಾರತ ಆಗ್ರಹ

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ವಿಷಮ ಪರಿಸ್ಥಿತಿ ಕುರಿತಂತೆ ಭಾರತ ತನ್ನ ಹೇಳಿಕೆಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯಲ್ಲಿ ದಾಖಲಿಸಿದೆ.

ಎರಡೂ ದೇಶಗಳು ಯತಾಸ್ಥಿತಿಯನ್ನು ಕಾಪಾಡಬೇಕೆಂದು ಒತ್ತಾಯಿಸಿರುವ ಭಾರತ, ಪರಸ್ಪರ ರಾಕೆಟ್‌ ದಾಳಿಯನ್ನು ಖಂಡಿಸಿದೆ.

ಇಸ್ರೇಲ್‌ ಮತ್ತು ಫೆಲಸ್ತೀನ್‌ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನುನ ಶಮನಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಭಾರತದ ಖಾಯಂ ಪ್ರತಿನಿಧಿ ಟಿ ಎಸ್‌ ರವಿಮೂರ್ತಿ ಆಗ್ರಹಿಸಿದ್ದಾರೆ.

ಎಲ್ಲಾ ರೀತಿಯ ಹಿಂಸೆಯನ್ನು ಭಾರತ ವಿರೋಧಿಸುತ್ತದೆ. ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆ ಸುವ್ಯವಸ್ಥೆಯನ್ನು ಹದಗೆಡಿಸುತ್ತಿದೆ. ಗಾಝಾದಿಂದ ನಡೆಯುತ್ತಿರುವ ರಾಕೆಟ್‌ ದಾಳಿ ಹಾಗೂ ಇಸ್ರೇಲ್‌ನಿಂದ ನಡೆಯುತ್ತಿರುವ ದಾಳಿಯನ್ನೂ ನಾವು ಖಂಡಿಸುತ್ತೇವೆ. ಇಸ್ರೇಲ್‌ ಮತ್ತು ಪೆಲೆಸ್ತೀನ್‌ ಮಾತುಕತೆ ಮುಂದುವರೆಸುತ್ತದೆ. ಭಾರತ ಫೆಲೆಸ್ತೀನ್‌ನ ನ್ಯಾಯಬದ್ಧ ಉದ್ದೇಶವನ್ನು ಬೆಂಬಲಿಸುತ್ತದೆ ಎಂದು ಅವರು ಹೇಳಿದ್ದಾರೆ.

ಉದ್ವಿಗ್ನತೆಯ ಶಮನಕ್ಕೆ ಉಭಯಪಕ್ಷಗಳು ಯತ್ನಿಸಬೇಕು ಹಾಗೂಈಗಿರುವ ಯಥಾಸ್ಥಿತಿಯನ್ನು ಕಾಪಾಡಬೇಕು. ಲಕ್ಷಾಂತರ ಭಾರತೀಯರ ಹೃದಯದಲ್ಲಿ ಜೆರುಸಲೆಂಗೆ ವಿಶೇಷ ಸ್ಥಾನವಿದೆ. ಜೆರುಸಲೆಂನಲ್ಲಿ ಶಾಂತಿ ಕಾಪಾಡಬೇಕು ಎಂದು ತಿರುಮೂರ್ತಿ ಹೇಳಿದ್ದಾರೆ.

ತಮ್ಮ ಭಾಷಣದಲ್ಲಿ ಈ ಹಿಂಸಾಚಾರದಲ್ಲಿ ಮಡಿದ ಭಾರತೀಯ ಮೂಲದ ಸೌಮ್ಯ ಸಂತೋಷ್‌ ಸೇರಿದಂತೆ ಉಂಟಾದ ಅನೇಕ ಸಂಕಟಗಳ ಕುರಿತು ಪ್ರಸ್ತಾಪಿಸಿದ ತಿರುಮೂರ್ತಿ, ಎರಡು-ರಾಜ್ಯಗಳ ಪರಿಹಾರಕ್ಕೆ ಭಾರತದ ಅಚಲವಾದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

“ಈ ಘಟನೆಗಳು ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯನ್ ನಡುವಿನ ಸಂವಾದವನ್ನು ತಕ್ಷಣ ಪುನರಾರಂಭಿಸುವ ಅಗತ್ಯವನ್ನು ಮತ್ತೊಮ್ಮೆ ಒತ್ತಿ ಹೇಳಿದೆ. ಉಭಯ ಪಕ್ಷಗಳ ನಡುವೆ ನೇರ ಮತ್ತು ಅರ್ಥಪೂರ್ಣವಾದ ಮಾತುಕತೆಗಳ ಅನುಪಸ್ಥಿತಿಯು ಪಕ್ಷಗಳ ನಡುವಿನ ವಿಶ್ವಾಸದ ಕೊರತೆಯನ್ನು ವಿಸ್ತರಿಸುತ್ತಿದೆ ಎಂದು ಅವರು ಹೇಳಿದ್ದಾರೆ.

“ವೆಸ್ಟ್ ಬ್ಯಾಂಕ್ ಮತ್ತು ಗಾಜಾದ ಇತರ ಭಾಗಗಳಿಗೆ ಹಿಂಸಾಚಾರ ಹರಡುವ ಬಗ್ಗೆ ನಾವು ಆತಂಕ ವ್ಯಕ್ತಪಡಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.

ದೀರ್ಘಕಾಲಿನ ಸಂಘರ್ಷದ ಇತಿಹಾಸವಿರುವ ಪ್ಯಾಲೆಸ್ತೇನ್‌ ನೆಲದಲ್ಲಿ ಕಳೆದ ಕೆಲವು ದಿನಗಳಿಂದ ವ್ಯಾಪಕ ಹಿಂಸಾಚಾರ ನಡೆಯುತ್ತಿದೆ.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...