ದಾವಣಗೆರೆ : ಪುತ್ರರಿಗಾಗಿ ಟಿಕೆಟ್ಗೆ ಬೇಡಿಕೆ ಇಡುವ ಬಿಜೆಪಿ ನಾಯಕರ ಮುಂದೆ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್ಎ ರವೀಂದ್ರನಾಥ್ ಚುನಾವಣೆಗೆ ನಿವೃತ್ತಿ ಘೋಷಣೆ ಮಾಡಿರೋದು ಮಾತ್ರವಲ್ಲದೇ ಕುಟುಂಬದಲ್ಲಿ ಯಾರಿಗೂ ಟಿಕೆಟ್ಗಾಗಿ ಡಿಮ್ಯಾಂಡ್ ಮಾಡದೇ ಇರುವ ಮೂಲಕ ಮಾದರಿ ಎನಿಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಬೆಂಬಲಿಗರ ಒತ್ತಾಯದ ನಡುವೆಯೂ ಚುನಾವಣಾ ಕಣದಿಂದ ನಿವೃತ್ತಿ ಪಡೆಡಿದ್ದಾರೆ.

ಎಸ್.ಎ ರಂಗನಾಥ್ ಮಕ್ಕಳು ರಾಜಕೀಯದಲ್ಲಿ ಬೆಳೆಯುತ್ತಿದ್ದಾರೆ. ಮನಸ್ಸು ಮಾಡಿದರೆ ರವೀಂದ್ರನಾಥ್ ಕೂಡ ಮಕ್ಕಳಿಗೆ ಟಿಕೆಟ್ ಬೇಕೆಂದು ಲಾಬಿ ನಡೆಸಬಹುದಿತ್ತು. ರವೀಂದ್ರನಾಥ್ ಪುತ್ರ ಎಸ್ಆರ್ ಬಸವರಾಜ್ ಗ್ರಾಮಪಂಚಾಯ್ತಿ ಸದಸ್ಯರಾಗಿದ್ದರೆ ಓರ್ವ ಪುತ್ರಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಹಾಗೂ ಇನ್ನೋರ್ವ ಪುತ್ರಿ ಹಾಲಿ ಮಹಾನಗರ ಪಾಲಿಗೆ ಸದಸ್ಯೆ ಆಗಿದ್ದಾರೆ.
ದಾವಣಗೆರೆ ಉತ್ತರ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುತ್ತಿಲ್ಲ . ಈ ಕ್ಷೇತ್ರದಿಂದ ಪಕ್ಷವು ಯಾರಿಗೇ ಟಿಕೆಟ್ ನೀಡಿದವರು ಅವರ ಪರವಾಗಿ ನಾನು ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳುವ ಮೂಲಕ ಎಸ್ಎ ರವೀಂದ್ರನಾಥ್ ಪಕ್ಷನಿಷ್ಠೆ ಮೆರೆದಿದ್ದಾರೆ.