• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸಲೀಂ ಅವರ ಹೇಳಿಕೆ ತಿರುಚುವುದು ಬೇಡ, ಡಿ.ಕೆ.ಶಿವಕುಮಾರ್‌ ಭ್ರಷ್ಟರಲ್ಲ: ವಿ.ಎಸ್.ಉಗ್ರಪ್ಪ

ಪ್ರತಿಧ್ವನಿ by ಪ್ರತಿಧ್ವನಿ
October 13, 2021
in ಕರ್ನಾಟಕ, ರಾಜಕೀಯ
0
ಸಲೀಂ ಅವರ ಹೇಳಿಕೆ ತಿರುಚುವುದು ಬೇಡ, ಡಿ.ಕೆ.ಶಿವಕುಮಾರ್‌ ಭ್ರಷ್ಟರಲ್ಲ: ವಿ.ಎಸ್.ಉಗ್ರಪ್ಪ
Share on WhatsAppShare on FacebookShare on Telegram

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಸೇರಿದಂತೆ ಎಲ್ಲ ನಾಯಕರು ಒಗ್ಗಟ್ಟಿನಿಂದ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಇದರಲ್ಲಿ ರಾಜಕಾರ ಮಾಡುತ್ತಿಲ್ಲ. ಕೆಲವು ಮಾಧ್ಯಮಗಳು ಬಿಂಬಿಸುವ ರೀತಿ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಸ್ಪಷ್ಟಪಡಿಸಿದ್ದಾರೆ.

ADVERTISEMENT

ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರನ್ನು 3-4 ದಶಕಗಳಿಂದ ಬಲ್ಲೆ. ಅವರು ಕ್ರಿಯಾಶೀಲ, ರಾಜ್ಯದ ಬಗ್ಗೆ ಬದ್ಧತೆ ಇರುವ ರಾಜಕಾರಣಿ. ರೈತಪರ ಕುಟುಂಬದಲ್ಲಿ ಹುಟ್ಟಿ, ಜನಪರ ಹಾಗೂ ಅಭಿವೃದ್ಧಿ ಪರ ಕೆಲಸ ಮಾಡುವ ನಾಯಕ. ಅದಕ್ಕೆ ಉದಾಹರಣೆ ತುಮಕೂರಿನ ಪಾವಗಡದ ಸೋಲಾರ್ ಕೇಂದ್ರದಲ್ಲಿ ಜಮೀನು ಖರೀದಿ ಮಾಡದೇ ಜಮೀನನ್ನು ಲೀಸ್ ಮೂಲಕ ತೆಗೆದುಕೊಂಡಿರುವುದೇ ಶಿವಕುಮಾರ್ ಅವರ ಜನಪರ ಹಾಗೂ ಅಭಿವೃದ್ಧಿ ಕೆಲಸಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.

ಕೆಪಿಸಿಸಿ ಮಾಧ್ಯಮ ವಿಭಾಗದ ಸಹ ಸಂಚಾಲಕ ಸಲೀಂ ಅವರು ನಾನು ಪತ್ರಿಕಾಗೋಷ್ಠಿಗೆ ಆಗಮಿಸಿದಾಗ ನನ್ನ ಕಿವಿಯಲ್ಲಿ ಜನ ಹೀಗೆ ಮಾತನಾಡುತ್ತಿದ್ದಾರೆ. ಈ ಮಧ್ಯೆ ನೀರಾವರಿ ಇಲಾಖೆ ಹಗರಣ ವಿಚಾರವಾಗಿ ಬಿಜೆಪಿ ಅವರು ನಮ್ಮ ಪಕ್ಷದ ನಾಯಕರ ವಿರುದ್ಧ ಗೂಬೆ ಕೂರಿಸಲು ಈ ರೀತಿ ಆರೋಪ ಮಾಡಿದ್ದಾರೆ ಎಂದು ಹೇಳಿದರು. ನಾನು ಅದನ್ನು ಅಲ್ಲಿಗೆ ನಿಲ್ಲಿಸಿ ಪತ್ರಿಕಾಗೋಷ್ಠಿ ನಡೆಸಿದೆ. ಅದನ್ನು ಮಾಧ್ಯಮಗಳು ಬೇರೆ ರೀತಿ ಬಿಂಬಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಅವರು ಉತ್ತಮ ಆಡಳಿತಗಾರ, ಜನಪರ ಚಿಂತನೆಯುಳ್ಳ ನಾಯಕ. ಅವರು ಸಂಪಾದಿಸಿರುವ ಹಣ ರಾಜಕಾರಣದಿಂದ ಅಲ್ಲ. ಅವರು ತಮ್ಮ ವ್ಯಾಪಾರ ವ್ಯವಹಾರಗಳಿಂದ ಸಂಪಾದನೆ ಮಾಡಿದ್ದಾರೆ ಅವರು ಎಂದಿಗೂ ಪರ್ಸೆಂಟೇಜ್ ರಾಜಕಾರಣ ಮಾಡಿಲ್ಲ ಎಂದು ಹೇಳಿದ್ದಾರೆ.

ನೀರಾವರಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ಆಯನೂರು ಉಮೇಶ್ ಅವರು ನನ್ನ ಜಿಲ್ಲೆಯವರು ನಮ್ಮ ನಾಯಕರ ಮೇಲೆ ಆರೋಪ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಲು ಮುಂದಾಗಿದ್ದರು.

ನಮ್ಮ ಪಕ್ಷದ ಅಧ್ಯಕ್ಷರಾಗಲಿ, ನಾಯಕರಾಗಲಿ ಅಧಿಕಾರದಲ್ಲಿದ್ದಾಗ ಪರ್ಸೆಂಟೇಜ್ ಪಡೆಯುವ ಸಂಸ್ಕೃತಿ ಬೆಳೆಸಿಲ್ಲ. ಹೀಗಾಗಿ ಆ ಪಿಸುಗುಟಿದ ಮಾತು ವೈಭವೀಕರಣ ಮಾಡಿ ಬಿಂಬಿಸುವ ಕೆಲಸ ಮಾಧ್ಯಮ ಮೌಲ್ಯಗಳಿಗೆ ಸಮಂಜಸವಲ್ಲ ಎಂದು ಹೇಳಿದ್ದಾರೆ.

ಕಮಿಷನ್, ಭ್ರಷ್ಟಾಚಾರದಿಂದ ಕಾಂಗ್ರೆಸ್ ಗೆ ದೂರ; ಅದರಲ್ಲೂ ಪಕ್ಷದ ಅಧ್ಯಕ್ಷರು ಇನ್ನೂ ದೂರ.

ಮೋದಿ ಅವರು ಕಳೆದ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಕಮಿಷನ್ ರಾಮಯ್ಯ ಎಂದಾಗ 100 ಕೋಟಿ ಮಾನಹಾನಿ ಕೇಸ್ ಹಾಕಿದಾಗ ಅದಕ್ಕೆ ಮೋದಿ ಅವರು ಉತ್ತರ ನೀಡಲಿಲ್ಲ. ಭ್ರಷ್ಟಾಚಾರ ಗಂಗೋತ್ರಿ ಹರಿಸುತ್ತಿರುವುದು ಬಿಜೆಪಿ ನಾಯಕರು ಎಂದು ಆರೋಪಿಸಿದ್ದಾರೆ.

ಇಡಿ ಹಾಗೂ ಆದಾಯ ತೆರಿಗೆ ಅಧಿಕಾರಿಗಳು ರಾಜ್ಯದಲ್ಲಿ ದಾಳಿ ನಡೆಸಿದ ನಂತರ ನಾವು ಆಗ್ರಹಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿ 750 ಕೋಟಿ ಲೆಕ್ಕದ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ. ಇದು ಯಾರ ಆಡಳಿತದಲ್ಲಿ ನಡೆದಿದೆ? ಇದಕ್ಕೆ ಹೊಣೆ ಯಾರು? ಈ ಬಗ್ಗೆ ಮೋದಿ, ಬಿಜೆಪಿ ಅವರು ಮಾತನಾಡುತ್ತಿಲ್ಲ ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಭ್ರಷ್ಟಾಚಾರ ಯಾರೇ ಮಾಡಿದರೂ ತಪ್ಪೇ, ಯಡಿಯೂರಪ್ಪ ಮಾಡಿದರೂ ತಪ್ಪೇ, ಪ್ರಧಾನಿ ಮಾಡಿದರೂ ತಪ್ಪೇ.ನಮ್ಮ ಪಕ್ಷದವರು ಮಾಡಿದರೂ ತಪ್ಪೇ. ಭ್ರಷ್ಟಾಚಾರ ಮುಕ್ತ ರಾಜ್ಯ ಕಟ್ಟಲು ಕಾಂಗ್ರೆಸ್ ಬದ್ಧ. ಅದರಲ್ಲೂ ಡಿ.ಕೆ ಶಿವಕುಮಾರ್ ಅವರು ಬದ್ಧ. ಅವರು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ನಿನ್ನೆ ಸಲೀಂ ಅವರ ಹೇಳಿಕೆ ತಿರುಚುವುದು ಬೇಡ ಎಂದು ವಿನಂತಿಸಿದ್ದಾರೆ.

Tags: BJPCongress PartyCovid 19D K ShivakumarUgrappaVS Ugrappaಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಕೋವಿಡ್ ನಿವಾರಣೆಗೆ ದೇವರ ಮೊರೆ ಹೋದ ರಾಜ್ಯ ಸರ್ಕಾರ – ವಿಜಯದಶಮಿಯಂದು ವಿಶೇಷ ಪೂಜೆಗೆ ಸಿದ್ದತೆ!

Next Post

ಕನ್ನಡ ಕಡೆಗಣಸಿದ ಎರಡು ಆರೋಗ್ಯ ಸಂಸ್ಥೆಗಳಿಗೆ ಕರವೇ ಎಚ್ಚರಿಕೆ : ತಪ್ಪನ್ನು ಒಪ್ಪಿಕೊಂಡು‌‌ ಕ್ಷಮೆ ಯಾಚಿಸಿದ ನಿರ್ದೇಶಕರು

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

ರಾಜಕೀಯದ ಬಗ್ಗೆ ಮುಂದಿನ ದಿನಗಳಲ್ಲಿ ಮೌನ: ಸಮಯ ಬಂದಾಗ ತಾನಾಗಿಯೇ ಸ್ಪಷ್ಟವಾಗುತ್ತದೆ – ಡಿಸಿಎಂ ಡಿ.ಕೆ. ಶಿವಕುಮಾರ್

April 26, 2026
ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

April 26, 2026
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
Next Post
ಕನ್ನಡ ಕಡೆಗಣಸಿದ ಎರಡು ಆರೋಗ್ಯ ಸಂಸ್ಥೆಗಳಿಗೆ ಕರವೇ ಎಚ್ಚರಿಕೆ : ತಪ್ಪನ್ನು ಒಪ್ಪಿಕೊಂಡು‌‌ ಕ್ಷಮೆ ಯಾಚಿಸಿದ ನಿರ್ದೇಶಕರು

ಕನ್ನಡ ಕಡೆಗಣಸಿದ ಎರಡು ಆರೋಗ್ಯ ಸಂಸ್ಥೆಗಳಿಗೆ ಕರವೇ ಎಚ್ಚರಿಕೆ : ತಪ್ಪನ್ನು ಒಪ್ಪಿಕೊಂಡು‌‌ ಕ್ಷಮೆ ಯಾಚಿಸಿದ ನಿರ್ದೇಶಕರು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada