ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 9 ಎಂಬಿಬಿಎಸ್ ಡಾಕ್ಟರ್ಸ್, ಲ್ಯಾಬೋರೇಟರಿ ಟೆಕ್ನಿಷಿಯನ್ಸ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ಜೂನ್ 13ರಂದು ಈ ಹುದ್ದೆಗಳಿಗೆ ಸಂದರ್ಶನ ನಡೆಯುತ್ತಿದ್ದು ಆಯ್ಕೆಯಾದ ಅಭ್ಯರ್ಥಿಗಳಿಗೆ ಕೋಲಾರದಲ್ಲಿ ನೇಮಕಾತಿ ಸಿಗಲಿದೆ.
ಹುದ್ದೆಯ ವಿವರ
ಸಂಸ್ಥೆ ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಹುದ್ದೆ ಎಂಬಿಬಿಎಸ್ ಡಾಕ್ಟರ್ಸ್, ಲ್ಯಾಬೋರೇಟರಿ ಟೆಕ್ನಿಷಿಯನ್ಸ್
ಒಟ್ಟು ಹುದ್ದೆ 9
ವೇತನ ಮಾಸಿಕ ₹ 43,141
ಉದ್ಯೋಗದ ಸ್ಥಳ ಕೋಲಾರ
ವಿದ್ಯಾರ್ಹತೆ ಎಸ್ಎಸ್ಎಲ್ಸಿ, ಪಿಯುಸಿ, ಡಿಪ್ಲೊಮಾ
ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್ 13, 2023
ವಿದ್ಯಾರ್ಹತೆ:
ಎಂಬಿಬಿಎಸ್ ಡಾಕ್ಟರ್ಸ್- ಎಂಬಿಬಿಎಸ್
ಲ್ಯಾಬೋರೇಟರಿ ಟೆಕ್ನಿಷಿಯನ್ಸ್- ಎಸ್ಎಸ್ಎಲ್ಸಿ, ಪಿಯುಸಿ, ಡಿಪ್ಲೊಮಾ
ನರ್ಸಿಂಗ್ ಆಫೀಸರ್ಸ್- ಬಿ.ಎಸ್ಸಿ ನರ್ಸಿಂಗ್, ಜಿಎನ್ಎಂ ನರ್ಸಿಂಗ್
ಹುದ್ದೆಯ ಮಾಹಿತಿ:
ಎಂಬಿಬಿಎಸ್ ಡಾಕ್ಟರ್ಸ್- 5
ಲ್ಯಾಬೋರೇಟರಿ ಟೆಕ್ನಿಷಿಯನ್ಸ್-2
ನರ್ಸಿಂಗ್ ಆಫೀಸರ್ಸ್- 2