ಮಂಡ್ಯ:ಮಾ.20: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಸಿಕ್ತಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯದ ಕೊಪ್ಪದಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ಸಿದ್ದರಾಮಯ್ಯ ಅವರಿಗೆ ನೂರು ಕ್ಷೇತ್ರವಿದೆ, ಆದ್ರೆ ಕೆಲವರಿಗೆ ಒಂದೆರೆಡು ಕ್ಷೇತ್ರವಿರುತ್ತೆ. ಹೈಕಮಾಂಡ್ ನಿಮ್ಮ ತೀರ್ಮಾನ ನಿಮಗೆ ಬಿಟ್ಟಿದ್ದು ಅಂತ ಹೇಳಿದೆ. ನೀವು ಎಲ್ಲಾದರು ನಿಲ್ಲಬಹುದು ಎಂದಿದೆ. ಬಾದಾಮಿಯಲ್ಲಿಯೂ ಶೇ. 100% ಗೆಲ್ಲುವ ರಿಪೋರ್ಟ್ ಬಂದಿದೆ. ಬಾದಾಮಿ ಜನರು ಬಹಳಷ್ಟು ಒತ್ತಾಯ ಮಾಡುತ್ತಿರುವುದರಿಂದ ಯೋಚನೆ ಮಾಡಿ ಎಂದಿದ್ದಾರೆ. ಮೈಸೂರು-ಚಾಮರಾಜನಗರ ಜನ ವರುಣಾಕ್ಕೆ ಬನ್ನಿ ಅಂತಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಜನ ಕೋಲಾರಕ್ಕೆ ಬನ್ನಿ ಅಂತಿದ್ದಾರೆ. ಹೀಗಾಗಿ ನಮ್ಮ ಹೈಕಮಾಂಡ್ ನೀವೇ ಸೂಕ್ತ ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದೆ.
ಅಪೇಕ್ಷೆಪಡುವ ಜನರ ಬೇಸರ ಪಡಿಸ್ಬೇಡಿ ಎನ್ನುವ ಸಲಹೆ ಕೊಟ್ಟಿದೆ. ಅವರಿಗೆ ಕ್ಷೇತ್ರ ಇಲ್ಲ ಅಂತಲ್ಲ. ಅವರ ಬಗ್ಗೆ ಯಾರು ಮಾತನಾಡಬಾರದು. ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡಿದವರಿಗೆಲ್ಲ ಉತ್ತರ ಕೊಡಲು ಆಗಲ್ಲ ಎಂದು ಹೇಳಿದರು. ಮುಂದುವರೆದು ಮಾತನಾಡಿದ ಚಲುವರಾಯಸ್ವಾಮಿ, ವರ್ತೂರು ಪ್ರಕಾಶ್ ಮತ್ತು ಸಿದ್ದರಾಮಯ್ಯ ಹೋಲಿಕೆ ಮಾಡೋದು ಸರಿಯಲ್ಲ. ಪ್ರಚಾರಕ್ಕಾಗಿ ವರ್ತೂರು, ಸಿ.ಟಿ.ರವಿ, ಅಶ್ವತ್ ನಾರಾಯಣ್ ಅಂತಹವರು ಕ್ಷುಲ್ಲಕ ಹೇಳಿಕೆ ನೀಡುತ್ತಿದ್ದಾರೆ. ಇವರೆಲ್ಲರೂ ಪ್ರಜಾಪ್ರಭುತ್ವದಲ್ಲಿ ತಲೆತಗ್ಗಿಸುವ ರೀತಿ ಇದ್ದಾರೆ. ಇಂತಹವರ ಬಗ್ಗೆ ಮಾತನಾಡಲು ನನಗೆ ಅಸಹ್ಯ ಆಗುತ್ತೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ .ಕೆ.ಶಿವಕುಮಾರ ಅವರ ಓಟ ತಡೆಯಲು ಬಿಜೆಪಿಗೆ ಆಗ್ತಿಲ್ಲ. ಅದಕ್ಕೆ ಅವರಿವರ ಕೈಯಲ್ಲಿ ಇಲ್ಲಸಲ್ಲದ ಹೇಳಿಕೆ ಕೊಡಿಸುತ್ತಿದ್ದಾರೆ. ಅದರಿಂದ ನಮ್ಮ ಪಕ್ಷ, ಕಾರ್ಯಕರ್ತರು ಕುಗ್ಗಲ್ಲ. ಸಾರ್ವಜನಿಕರಿಗೆ ಸತ್ಯ ಗೊತ್ತಿದೆ ಎಂದು ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ..
ಸಿದ್ದರಾಮಯ್ಯ ಒಂದೆ ಕ್ಷೇತ್ರದಲ್ಲಿ ನಿಲ್ಲುತ್ತಾರೆ ಎಂಬ ಮಾಹಿತಿ ಇದೆ. ಆದ್ರೆ ಎಲ್ಲಿ ನಿಲ್ತಾರೆ ಎನ್ನೋದನ್ನ ಯುಗಾದಿ ಮುಗಿದ ಬಳಿಕ ತಿಳಿಸುತ್ತಾರೆ. ಕೋಲಾರದಲ್ಲಿಯೂ ಗೆಲ್ತಾರೆ ಎನ್ನುವ ರಿಪೋರ್ಟ್ ಇದೆ. ಬಾದಾಮಿಯಲ್ಲಿ ಕಳೆದ ಬಾರಿಗಿಂತ ಉತ್ತಮ ಫಲಿತಾಂಶ ಬರುವ ರಿಪೋರ್ಟ್ ಇದೆ. ಇದೆ ನಿಮ್ಮ ಕೊನೆ ಚುನಾವಣೆ ಆದರೆ ವರುಣಾದಿಂದಲೇ ಮಾಡಿ ಅಂತ ಕ್ಷೇತ್ರದ ಜನರ ಹೇಳ್ತಿದ್ದಾರೆ. ಹೀಗಾಗಿ ಅವರಿಗೆ ಗೊಂದಲ ಇದೆ. ಚಾಮುಂಡೇಶ್ವರಿಯಿಂದಲು ಸ್ಪರ್ಧಿಸಿ ಗೆಲ್ಲಿಸುತ್ತೇವೆ ಅಂತಿದ್ದಾರೆ. ಈ ಬಗ್ಗೆ ಅವಬಳಿ, ನನ್ನ ಬಳಿ ಮತ್ತು ನಮ್ಮ ಪಕ್ಷದ ಲೀಡರ್ ಹತ್ತಿರ ಕೂಡ ಮಾತಾಡಿದ್ದಾರೆ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ರು.