ಶಿವಮೊಗ್ಗ: ಮಾ.20: ಆಜಾನ್ ಕುರಿತಾದ ಮಾಜಿ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿಕೆ ದಿನೇ ದಿನೇ ತಾರಕಕ್ಕೇರುತ್ತಿದೆ. ಮಾರ್ಚ್ 17ರಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದ ಮುಸ್ಲಿಂ ಸಂಘಟನೆ ಈಗ ಕೆಂಗಣ್ಣಿಗೆ ಗುರಿಯಾಗಿದೆ ಕಾರಣ ಅಂದು ಮೌಸಿನ್ ಎಂಬ ವ್ಯಕ್ತಿ ಜಿಲ್ಲಾಧಿಕಾರಿ ಕಚೇರಿ ಮೇಲೆ ಆಜಾನ್ ಕೂಗಿ ಚರ್ಚೆಗೆ ಗ್ರಾಸವಾಗಿದ್ದ. ಆತನ ಮೇಲೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆಧಾರದ ಮೇಲೆ ಸಾಮಾನ್ಯ ಪ್ರಕರಣ ದಾಖಲಿಸಿ ಸ್ಟೇಷನ್ ಬೇಲ್ ನೀಡಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ಭಜರಂಗದಳ ಶಿವಮೊಗ್ಗ ಘಟಕ, ಮುಖಂಡ ರಾಜೇಶ್ ಗೌಡ ನೇತೃತ್ವದಲ್ಲಿ ಜಿಲ್ಲಾಧಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಜೊತೆಗೆ ಬಾಟಲಿಯಲ್ಲಿ ತಂದ ಗೋಮೂತ್ರದಿಂದ ಆಜಾನ್ ಕೂಗಿದ ಸ್ಥಳವನ್ನ ಶುಚಿಗೊಳಿಸಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ರಾಜೇಶ್ ಗೌಡ, ಸಾಂವಿಧಾನಿಕ ಸ್ಥಳ ಜಿಲ್ಲಾಧಕಾರಿ ಕಚೇರಿ ಅಪವಿತ್ರ ಮಾಡಿಬಿಟ್ಟರು. ಹಿಂದೂ ಸಂಪ್ರದಾಯದಂತೆ ಗೋಮೂತ್ರದಿಂದ ಶುದ್ದಿ ಮಾಡಿದ್ದೇವೆ ಎಂದರು.
ಎಲ್ಲಾ ಸಾರ್ವಜನಿಕರಲ್ಲಿ ಹಾಗೂ ರಾಜ್ಯ ಸರ್ಕಾರಕ್ಕೆ ಶಿವಮೊಗ್ಗ ಜಿಲ್ಲಾಡಳಿತಕ್ಕೆ ತಿಳಿಸುವುದೇನೆಂದರೆ, ಮಾರ್ಚ್ 17ರಂದು ಮುಸ್ಲಿಂ ಸಂಘಟನೆ , SDPI ಜೊತೆ ಪ್ರತಿಭಟನೆ ಈಶ್ವರಪ್ಪ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಿದರು. ಮುಸ್ಲಿಂ ಸಮುದಾಯದ ನಾಯಕರು ಮತಾಂಧತೆ ಮೆರೆದಿದ್ದಾರೆ. ಯಾಕೆಂದರೆ ಸಂವಿಧಾನದ ಅವಿಭಾಜ್ಯ ಅಂಗ ಜಿಲ್ಲಾಧಿಕಾರಿ ಕಚೇರಿ. ದೇಶಕ್ಕೆ ಸಂಸತ್ತು ಹೇಗೋ ಹಾಗೆ ಜಿಲ್ಲೆಗೆ ಜಿಲ್ಲಾಧಿಕಾರಿ ಕಚೇರಿ. ಈ ಪವಿತ್ರ ಸ್ಥಳದಲ್ಲಿ ಪ್ರತಿಭಟನೆಗೆ ಪ್ರತಿಯೊಬ್ಬರಿಗೂ ಹಕ್ಕಿದೆ. ಆದರೆ ಮತಾಂಧತೆ ಮೆರೆಯುವಂತಹ ಹಕ್ಕು ಯಾರಿಗೂ ಇಲ್ಲ. ಅವರು ಎಲ್ಲಿ ಬೇಕೋ ಅಲ್ಲಿ ಕೂಗಿ ಹೋಗಲಿ, ಅವರ ಪ್ರಾರ್ಥನೆ ಎಲ್ಲಿ ಮಾಡಬೇಕು ಅಲ್ಲಿ ಮಾಡಲಿ, ರೋಡಲ್ಲಿ ಮಾಡ್ತಾರಾ ಮಾಡಲಿ, ಆದರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೂಕ್ತ ಅಲ್ಲ. ಇದನ್ನು ವಿಎಚ್ ಪಿ ಹಾಗೂ ಭಜರಂಗದಳ ತೀವ್ರವಾಗಿ ಖಂಡಿಸುತ್ತದೆ. ನಮ್ಮ ಸಂಘಟನೆಯಲ್ಲಿ ರಾಜ್ಯ ರಾಷ್ಟ್ರ ವ್ಯಾಪಿ ಗುರುತಿಸಿಕೊಂಡಿದೆ. ಪಿಎಫ್ ಐ ಸಂಘಟನೆಯ ಒಂದು ಅಂಗ ಈ ಎಸ್ ಡಿ ಪಿ ಎಫ್. ಪಿಎಫ್ ಐ ಬ್ಯಾನ್ ಆಗಿತ್ತು ಅದರ ಕೆಲಸಗಳು ಎಸ್ ಡಿಪಿ ಐ ಮೂಲಕ ನಡೆಯುತ್ತದೆ. ಇಂತಹ ಮತಾಂಧರನ್ನ ಸರ್ಕಾರ ನಿಯಂತ್ರಿಸಬೇಕು. ಹಿಂದೂ ಸಮಾಜ ಸುಮ್ಮನಾಗಿದೆ ಎಂದು ತಿಳಿಯಬಾರದು . ಇವರ ಹುಚ್ಚಾಟಗಳನ್ನ ನಾವು ಸಹಿಸೋದಿಲ್ಲ. ಹಾಗಾಗಿ ಜಿಲ್ಲಾಧಿಕಾರಿ ಕಚೇರಿಯನ್ನು ಪವಿತ್ರ ಗೋಮುತ್ರದಿಂದ ಶುದ್ಧೀಕರಿಸಿದ್ದೇವೆ.
ಜಾಗ ಪವಿತ್ರವಾಗಿದೆ, ಗೋಮೂತ್ರ ಹಾಕಬೇಕಾದರೆ ಪೊಲೀಸರು ಅಡ್ಡಿ ಮಾಡಿದರು, ಆದರೂ ನಾವು ಒಪ್ಪುವುದಿಲ್ಲ. ಗೋಮೂತ್ರ ಪವಿತ್ರವಾದದ್ದು ಹಾಗಾಗಿ ಇಲ್ಲಿ ಶುದ್ದಿ ಮಾಡುವ ಶಕ್ತಿ ಗೋಮುತ್ರಕ್ಕೆ ಇದೆ. ಕೆಎಸ್ ಈಶ್ವರಪ್ಪ ಹೇಳಿರುವುದು ಸತ್ಯ, ಅಜಾನ್ ನಿಯಂತ್ರಣ ಅನಿವಾರ್ಯ. ಈಶ್ವರಪ್ಪ ವಿರುದ್ಧ ಪ್ರತಿಭಟನೆ ಮಾಡುವುದಾದರೆ ಮಾಡಿ, ಆದರೆ ಈ ತರಹ ಉದ್ದಟನ ಮೆರೆಯುವುದನ್ನು ನಾವು ಸಹಿಸುವುದಿಲ್ಲ. ಯಾವುದಕ್ಕೂ ಇಂತಹ ಘಟನೆಗಳಿಗೆ ಆಸ್ಪದ ನೀಡುವುದಿಲ್ಲ ಎಂದು ಭಜರಂಗದಳ ಮುಖಂಡ ರಾಜೇಶ್ ಗೌಡ ಎಚ್ಚರಿಕೆ ನೀಡಿದರು.