• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಹಲವು ಗಣ್ಯರ ಉಪಸ್ಥಿತಿಯಲ್ಲಿ ಅನಾವರಣವಾಯಿತು ಡಿ.ವಿ.ಜಿ ಅವರ “ಮಂಕುತಿಮ್ಮನ ಕಗ್ಗ” ಚಿತ್ರದ ಟ್ರೇಲರ್ .

ಪ್ರತಿಧ್ವನಿ by ಪ್ರತಿಧ್ವನಿ
April 22, 2025
in Top Story, ಸಿನಿಮಾ
0
ಹಲವು ಗಣ್ಯರ ಉಪಸ್ಥಿತಿಯಲ್ಲಿ ಅನಾವರಣವಾಯಿತು ಡಿ.ವಿ.ಜಿ ಅವರ “ಮಂಕುತಿಮ್ಮನ ಕಗ್ಗ” ಚಿತ್ರದ ಟ್ರೇಲರ್ .
Share on WhatsAppShare on FacebookShare on Telegram

ಮೇ ತಿಂಗಳಲ್ಲಿ ಡಿ.ವಿ.ಜಿ ಅವರ ಬಾಲ್ಯ ಕಥನಾ ಸಿನಿಮಾ ರೂಪದಲ್ಲಿ ತೆರೆಯ ಮೇಲೆ .

ADVERTISEMENT

ಹೆಸರಾಂತ ಸಾಹಿತಿ ಡಾ||ಡಿ.ವಿ.ಗುಂಡಪ್ಪ(ಡಿ.ವಿ.ಜಿ) ಅವರ ಜನಪ್ರಿಯ ಪದ್ಯ ಪುಸ್ತಕ “ಮಂಕುತಿಮ್ಮನ ಕಗ್ಗ”. ಕನ್ನಡದಲ್ಲಿ ಈಗಾಗಲೇ ಕೆಲವು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ರಾಜ ರವಿಶಂಕರ್ (ವಿ.ರವಿ), ಡಿ.ವಿ.ಜಿ ಅವರ “ಮಂಕುತಿಮ್ಮನ ಕಗ್ಗ”ವನ್ನು ಚಿತ್ರದ ಮೂಲಕ ತೆರೆಗೆ ತರುತ್ತಿದ್ದಾರೆ. ಎನ್ ಎ ಶಿವಕುಮಾರ್ ಅವರು ನಿರ್ಮಿಸಿರುವ ಹಾಗೂ ಮೀನಾ‌ ಶಿವಕುಮಾರ್ ಸಹ ನಿರ್ಮಾಣವಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಅದ್ದೂರಿಯಾಗಿ ಬಿಡುಗಡೆಯಾಯಿತು. ರಾಮೋಹಳ್ಳಿ ಶ್ರೀಗಳು ಸಾನಿಧ್ಯ ವಹಿಸಿದ್ದರು. ಸಾ.ರಾ.ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಉಪಾಧ್ಯಕ್ಷ ಶಿಲ್ಪ ಶ್ರೀನಿವಾಸ್, ಕಾರ್ಯದರ್ಶಿ ಪ್ರವೀಣ್ ಕುಮಾರ್, ನಿರ್ದೇಶಕ ಸಾಯಿಪ್ರಕಾಶ್, ನಿರ್ದೇಶಕಿ, ನಟಿ ರೂಪ ಅಯ್ಯರ್, ನಟ ಸುಂದರರಾಜ್, ಸಂಗೀತ ನಿರ್ದೇಶಕ ವಿ.ಮನೋಹರ್, ಸಂಗಮೇಶ್ ಉಪಾಸೆ, ನಿರ್ಮಲ ಸಿ ಎಲಿಗಾರ್, ಮಾಜಿ ಶಾಸಕ ಲಕ್ಷ್ಮೀನಾರಾಯಣ್ ಸೇರಿದಂತೆ ಅನೇಕ ಗಣ್ಯರು ಡಿ.ವಿ.ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಟ್ರೇಲರ್ ಅನಾವರಣ ಮಾಡಿದರು. ಆರಂಭದಲ್ಲಿ ಆದರ್ಶ್ ಅವರು “ಮಂಕುತಿಮ್ಮನ ಕಗ್ಗ”ದ ನಾಲ್ಕು ಪದ್ಯಗಳನ್ನು ಮನಮುಟ್ಟುವಂತೆ ಹಾಡಿದರು. ನಂತರ ಗಣ್ಯರು ಡಿ.ವಿ.ಜಿ ಅವರ ಬಾಲ್ಯವನ್ನು ಸಿನಿಮಾ ರೂಪಕ್ಕೆ ತಂದಿರುವ ನಿರ್ದೇಶಕ ಹಾಗೂ ನಿರ್ಮಾಪಕರ ಜೊತೆಗೆ ಚಿತ್ರತಂಡವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಅದಕ್ಕೂ ಮುನ್ನ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.

ಈ ಚಿತ್ರದಲ್ಲಿ‌‌ ಡಿ.ವಿ.ಜಿ ಅವರ ಬಾಲ್ಯದ ದಿನಗಳ ಬಗ್ಗೆ ತೋರಿಸಲಾಗಿದೆ.‌ ಬಾಲ್ಯದಲ್ಲಿ ಡಿ.ವಿ.ಜಿ ಅವರ ಮೇಲೆ ಅತ್ಯಂತ ಪ್ರಭಾವ ಬೀರಿದ್ದು ಅವರ ಸೋದರಮಾವ ತಿಮ್ಮಣ್ಣ ಮೇಷ್ಟ್ರು. ಸೋದರಮಾವ ಹಾಗೂ ಸೋದರಳಿಯನ ಬಾಂಧವ್ಯವನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ತಿಮ್ಮಣ್ಣ ಮೇಷ್ಟ್ರು ಪಾತ್ರದಲ್ಲಿ ಹಿರಿಯ ನಟ ರಾಮಕೃಷ್ಣ, ಸೋಮಿ (ಡಿ.ವಿ.ಜಿ) ಅವರ ಪಾತ್ರದಲ್ಲಿ ಮಾಸ್ಟರ್ ರಣವೀರ್, ಅಲಮೇಲು ಪಾತ್ರದಲ್ಲಿ ಭವ್ಯಶ್ರೀ ರೈ, ವೆಂಕರಮಣಯ್ಯ ಪಾತ್ರದಲ್ಲಿ ರವಿನಾರಾಯಣ್ ಹಾಗೂ ಅಜ್ಜಿಯ ಪಾತ್ರದಲ್ಲಿ ಲಕ್ಷ್ಮೀ ನಾಡಗೌಡ ಅಭಿನಯಿಸಿದ್ದಾರೆ. ಸಾಯಿಪ್ರಕಾಶ್, ನರಸೇಗೌಡ, ಶ್ರೀನಿವಾಸ್ ಕೆಮ್ತೂರ್‌ ಮುಂತಾದವರು ತಾರಾಬಳಗದಲ್ಲಿದ್ದಾರೆ. ನನಗೆ ಹಾಗೂ ನಿರ್ಮಾಪಕರಿಗೆ ಈ ಚಿತ್ರ ಮಾಡಬೇಕೆನಿಸಿದಾಗ‌ ಗೋಖುಲೆ‌ ಇನ್ಸ್ಟಿಟ್ಯೂಟ್ ಅವರ ಬಳಿ “ಮಂಕುತಿಮ್ಮನ ಕಗ್ಗ”ವನ್ನು ಸಿನಿಮಾ ಮಾಡುತ್ತೇವೆ ಎಂದು ಕೇಳಿದಾಗ ಸಂತೋಷದಿಂದ ಒಪ್ಪಿಗೆ ನೀಡಿದರು. ಈಗ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಮೇ ಎರಡನೇ ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ರಾಜ ರವಿಶಂಕರ್ ತಿಳಿಸಿದರು.

ಹಲವು ವರ್ಷಗಳಿಂದ ಪ್ರಸಾದನ ಕಲಾವಿದನಾಗಿ ಕನ್ನಡ ಚಿತ್ರರಂಗದಲ್ಲಿದ್ದೇನೆ. ಇಪ್ಪತ್ತು ವರ್ಷಗಳ ಹಿಂದೆ ” ಅವಳೆ ನನ್ನ ಗೆಳತಿ” ಚಿತ್ರ ನಿರ್ಮಾಣ ಮಾಡಿದ್ದೆ. ಇದು ಎರಡನೇ ಚಿತ್ರ. ಡಿ.ವಿ.ಜಿ ಅವರ ಚಿತ್ರ ಮಾಡಿರುವುದಕ್ಕೆ ಹೆಮ್ಮೆ ಇದೆ ಎಂದು ನಿರ್ಮಾಪಕ ಶಿವಕುಮಾರ್ ತಿಳಿಸಿದರು.

ತಿಮ್ಮಣ್ಣ ಮೇಷ್ಟ್ರು ಪಾತ್ರ ಮಾಡಿರುವುದು ಬಹಳ ಖುಷಿಯಾಗಿದೆ ಎಂದರು ಹಿರಿಯ ನಟ ರಾಮಕೃಷ್ಣ. ಚಿತ್ರದಲ್ಲಿ ನಟಿಸಿರುವ ಭವ್ಯಶ್ರೀ ರೈ, ರವಿನಾರಾಯಾಣ್, ಓಂ ಸಾಯಿಪ್ರಕಾಶ್, ಮಾಸ್ಟರ್ ರಣವೀರ್ ಹಾಗೂ ಸಂಗೀತ ನಿರ್ದೇಶಕ ಎ.ಟಿ.ರವೀಶ್ ಮುಂತಾದವರು “ಮಂಕುತಿಮ್ಮನ ಕಗ್ಗ” ಚಿತ್ರದ ಕುರಿತು ಮಾತನಾಡಿದರು.

Tags: benefits of sandalwood essential oilbest sandalwood fragrancesbest sandalwood perfumesred sandalwoodred sandalwood treered sandalwood usessandalwoodsandalwood essential oilsandalwood essential oil benefitssandalwood farmingsandalwood farming in indiasandalwood fragrancessandalwood isandalwood oilsandalwood oil benefitssandalwood seedsandalwood treesandalwood tree farmingswy sandalwoodtop 5 sandalwood
Previous Post

ರಾಯಚೂರಿನಲ್ಲಿ ರಾಜಕೀಯ ಯಾತ್ರೆ ಮಾಡುವ ಮುನ್ನ – ಏಮ್ಸ್‌ ಮಂಜೂರು ಮಾಡಿಸುವ ಬದ್ದತೆ ತೋರಿಸಿ

Next Post

ಈ ವಾರ ತೆರೆಗೆ ಬಳ್ಳಾರಿ ಭಾಗದ ಪ್ರೇಮ ಕಥಾನಕ “ಅಮರ ಪ್ರೇಮಿ ಅರುಣ್”

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post
ಈ ವಾರ ತೆರೆಗೆ ಬಳ್ಳಾರಿ ಭಾಗದ ಪ್ರೇಮ ಕಥಾನಕ “ಅಮರ ಪ್ರೇಮಿ ಅರುಣ್”

ಈ ವಾರ ತೆರೆಗೆ ಬಳ್ಳಾರಿ ಭಾಗದ ಪ್ರೇಮ ಕಥಾನಕ "ಅಮರ ಪ್ರೇಮಿ ಅರುಣ್"

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada