
ಜನಗಣತಿ ಜೊತೆಗೆ ಜಾತಿಗಣತಿ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿರೋದು ಬಹಳ ಉತ್ತಮ ನಿರ್ಧಾರ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಮೋದಿ ಸರ್ಕಾರ ಮಹತ್ವದ ನಿರ್ಧಾರ ತೆಗೆದು ಕೊಂಡಿದೆ. ನಿನ್ನೆಯ ಕ್ಯಾಬಿನೆಟ್ ನಂತರ ಜಾತಿ ಗಣತಿ ಘೋಷಣೆ ಮಾಡಿದ್ದಾರೆ. 1931 ನಂತರ ದೇಶದಲ್ಲಿ ಜಾತಿಗಣತಿ ಆಗಿರಲಿಲ್ಲ. ದೇಶದ ಪ್ರತಿಯೊಬ್ಬರಿಗೂ ನ್ಯಾಯ ಸಿಗಬೇಕು ಎನ್ನವುದು ಮೋದಿಯವರ ಉದ್ದೇಶ. ಜನಗಣತಿ ಜೊತೆ ಜಾತಿಗಣತಿ ಮಾಡುವ ನಿರ್ಧಾರವನ್ನ ದೇಶದಾದ್ಯಂತ ಸ್ವಾಗತ ಮಾಡಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ಅಷ್ಟೊಂದು ವರ್ಷ ಆಡಳಿತ ಮಾಡಿದ್ರೂ ಈ ನಿರ್ಣಯ ತೆಗೆದುಕೊಂಡಿರಲಿಲ್ಲ. ರಾಜ್ಯದ ಜಾತಿಗಣತಿ ವಿಚಾರವಾಗಿ ಸಿಎಂ ಇನ್ನೂ ನಿರ್ಣಯ ತೆಗೆದುಕೊಂಡಿಲ್ಲ. ಸಮಾಜದ ಮೇಲೆ ವಿಷ ಬೀಜ ಬಿತ್ತಲು ಈ ಕುತಂತ್ರ ಮಾಡಿದ್ರು ಅಷ್ಟೆ. ಜಾತಿಗಣತಿಯನ್ನ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರಲಿಲ್ಲ. ಸಮಾಜದ ನಡುವೆ ಕಂದಕ ಸೃಷ್ಟಿ ಮಾಡುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡಿತ್ತು. ಪ್ರಧಾನಮಂತ್ರಿಗಳು ಘೋಷಣೆ ಮಾಡಿದ್ದಾರೆ ಎಂದರೆ, ಹಿಂದುಳಿದ ಸಮಾಜಕ್ಕೆ ನ್ಯಾಯ ಕೊಡಬೇಕು ಎನ್ನುವ ನಿರ್ಧಾರ ಇದು.

ಕಾಂಗ್ರೆಸ್ ಜಾತಿಗಣತಿ ವಿಚಾರದಲ್ಲಿ ಏನ್ ಬೊಬ್ಬೆ ಹೊಡಿತಿದೆ. ಕಾಂತರಾಜು ವರದಿಯ ಮೂಲ ಪ್ರತಿಯೇ ಇಲ್ಲದಿದ್ದಾಗ, ಜಯಪ್ರಕಾಶ್ ಹೆಗಡೆ ಯಾವ ಅದಾರದ ಮೇಲೆ ರಿಪೊರ್ಟ್ ಕೊಟ್ಟಿದ್ದಾರೆ. ಅವರೇ ಪತ್ರ ಬರೆದು ಮೂಲ ಪ್ರತಿ ಇಲ್ಲ ಎಂದಿದ್ದರು. ಈಗ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದು ಕೊಂಡಿದ್ದರಿಂದ, ಕೇಂದ್ರಕ್ಕೆ ಸಹಕಾರವನ್ನ ರಾಜ್ಯ ಸರ್ಕಾರ ಕೊಡಬೇಕು ಎಂದಿದ್ದಾರೆ. ಇನ್ನು ಪಾಕ್ ವಿರುದ್ಧ ಯುದ್ದದ ವಿಚಾರವಾಗಿ ಮಾತನಾಡಿ, ಕೆಲವರು ಪ್ರಚಾರದ ಹುಚ್ಚಿಗಾಗಿ ಬೇರೆ ಬೇರೆ ಹೇಳಿಕೆ ಕೊಡ್ತಿದ್ದಾರೆ. ಪಹಲ್ಗಾಮ್ ಘಟನೆ ಬಗ್ಗೆ ಪ್ರತಿಯೊಬ್ಬ ಭಾರತೀಯರು ಒಂದಾಗಿದ್ದಾರೆ. ದುಷ್ಟರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದಯಕೊಳ್ಳಬೇಕೆನ್ನೋದು ಜನರ ಅಪೇಕ್ಷೆ ಎಂದಿದ್ದಾರೆ.
ಪಾಕಿಸ್ತಾನ್ ಜಿಂದಾಬಾದ್ ಹೇಳಿದ್ದಕ್ಕೆ ಮಂಗಳೂರಲ್ಲಿ ಗುಂಪು ಹತ್ಯೆ ನಡೆದಿರುವ ವಿಚಾರವಾಗಿ ಮಾತನಾಡಿ, ವಿಧಾನ ಸೌಧದಲ್ಲಿ ಜಿಂದಾಬಾದ್ ಘೋಷಣೆ ಕೂಗಿರೋರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗಕೈಗೊಂಡಿದ್ದರೆ, ಈ ರೀತಿಯ ಘಟನೆ ನಡೆಯುತ್ತಿರಲಿಲ್ಲ. ರಾಜ್ಯ ಸರ್ಕಾರದ ಮುಸ್ಲಿಂ ಓಲೈಕೆಯಿಂದ ಇದು ನಡೆಯುತ್ತಿದೆ. ಈಗಾಗಲಾದರೂ ಎಚ್ಚೆತ್ತು ಕೊಳ್ಳಬೇಕು.. ಮಲ್ಲಿಕಾರ್ಜುನ್ ಖರ್ಗೆ ಹೇಳಿದ ಮೇಲೆ ಕೆಲವರಿಗೆ ಬುದ್ಧಿ ಬಂದಿದೆ. ಭಾರತದ ಪರವಾಗಿ ಹಿಂದೂಗಳ ಪರವಾಗಿ ಮಾತಾಡ್ತಿದ್ದಾರೆ. ಒಂದೊಳ್ಳೆ ಬೆಳವಣಿಗೆ ನಾವು ನೊಡ್ತಿದ್ದೇವೆ ಎಂದಿದ್ದಾರೆ.
