ಕೇಂದ್ರ ಸಚಿವ ಅಜಯ್ ಮಿಶ್ರಾ ರವರ ಪುತ್ರ ಆಶಿಶ್ ಮಿಶ್ರಾ ಭಾನುವಾರ ಪ್ರತಿಭಟನಾ ನಿರತ ರೈತರ ಗುಂಪಿನ ಮೇಲೆ ಕಾರು ಚಲಾಯಿಸಿದ ಪರಿಣಾಮ ಇಬ್ಬರು ರೈತರು ಮೃತಪಟ್ಟಿದ್ದು 8 ರೈತರು ಸಾವನಪ್ಪಿದು 8ಜನ ರೈತರಿಗೆ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಮೌರ್ಯ ಮುಖ್ಯ ಅತಿಥಿಯಾಗಿ ಟಿಕುನಿಯಾಗೆ ಆಗಮಿಸುತ್ತಿದ್ದರು ಇದಕ್ಕು ಮುನ್ನ ರೈತರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದವರ ಮೇಲೆ ಕಾರನ್ನು ಚಲಾಯಿಸಲಾಗಿದೆ.
ಈ ಕೃತ್ಯವನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಅಮಾನವೀಯ ಕೃತ್ಯವನ್ನು ನೋಡಿದ ಮೇಲಾದರು ಸುಮ್ಮನೆ ಇರುವವರು ಮೊದಲೇ ಸತ್ತು ಹೋಗಿದ್ದಾರೆ ಎಂದರ್ಥ. ಆದರೆ, ನಾವು ರೈತರ ಈ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ, ರೈತರ ಹೋರಾಟಕ್ಕೆ ಜಯವಾಗಲಿ ಎಂದು ಹೇಳಿದ್ದಾರೆ.