ಓ.ಎಫ್.ಸಿ ಕೇಬಲ್ ವಿಚಾರವಾಗಿ ಲಕ್ಷ ಲಕ್ಷ ಡೀಲ್ ಡಿಮ್ಯಾಂಡ್ ಮಾಡಿದ ಹಾರೋಹಳ್ಳಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಯ ಲಂಚಾವತಾರ ಬಯಲು.
ಕಂಟ್ರಾಕ್ಟರ್ ಜೊತೆ ಅಧಿಕಾರಿಯ ಡೀಲ್, ರಹಸ್ಯ ಕ್ಯಾಮರಾದಲ್ಲಿ ಬಯಲು. ಶ್ವೇತಾಬಾಯಿ (Shwetha Bai) ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಕಂಟ್ರಾಕ್ಟರ್ ವಿಷ್ಣು ಎಂಬಾತನ ಜೊತೆಗೆ ಡೀಲ್ ಮಾತನಾಡಿದ ಮುಖ್ಯಾಧಿಕಾರಿ ಶ್ವೇತಾ ಬಾಯಿ.
ಎರಡು ಕಿಲೋಮೀಟರ್ ರಸ್ತೆಯಲ್ಲಿ ಓ.ಎಫ್.ಸಿ ಕೇಬಲ್ ಅಳವಡಿಕೆ ಕಾಮಗಾರಿ ಮುಖ್ಯಾಧಿಕಾರಿ ಶ್ವೇತಾಬಾಯಿ ಬಳಿ ಅನುಮತಿಗೆ ಬಂದಿದ್ದ ಕಂಟ್ರಾಕ್ಟರ್ ವಿಷ್ಣು, ಈ ವೇಳೆ ಎರಡು ಕಿಲೋಮೀಟರ್ ರಸ್ತೆಗೆ 4 ಲಕ್ಷ ಡಿಮ್ಯಾಂಡ್. ಕಂಟ್ರಾಕ್ಟರ್ 3 ಲಕ್ಷ ಕೊಡ್ತೀನಿ ಅಂದ್ರೆ ಒಪ್ಪದ ಮುಖ್ಯಾಧಿಕಾರಿ ಶ್ವೇತಾಬಾಯಿ. ಕೊನೆಗೆ 3.5 ಲಕ್ಷ ಕೊಡಿ ಎಂದು ಮುಖ್ಯಾಧಿಕಾರಿ ಶ್ವೇತಾಬಾಯಿ ಡಿಮ್ಯಾಂಡ್, ಈ ವಿಚಾರ ಎಲ್ಲೂ ಬಯಲಿಗೆ ಬರಬಾರದು ಎಂದ ಮುಖ್ಯಾಧಿಕಾರಿ. ಈ ಹಿಂದೆ ಚಂದಾಪುರದಲ್ಲಿ ಇದೇ ರೀತಿ ಓ.ಎಫ್.ಸಿ (OFC Cable) ಕೇಬಲ್ ವಿಚಾರವಾಗಿ ತರ್ಲೆ ಆಗಿತ್ತು, ಸೋಮಶೇಖರ್ ಆ ನನ್ ಮಗ ಎಲ್ಲಾ ಕಡೆ ಹೇಳಿಕೊಂಡು ಬಂದಿದ್ದ, ಅಷ್ಟು ಮಾತಾಡಿದ್ವಿ ಇಷ್ಟು ಕೊಟ್ವೀ ಅಂತ ಹೇಳಿದ್ದ.
1 ಲಕ್ಷ ಕೊಟ್ಟು (1Lakh) ಎಲ್ಲರಿಗೂ ಹೇಳಿಕೊಂಡು ಬಂದಿದ್ದ, ಆನೇಕಲ್ ಎಮ್ಎಲ್ಎ ಶಿವಣ್ಣಗೆ (Anekal MLA Shivanna) ಕೂಡ ಹೋಗಿ ಹೇಳಿದ್ದ, ಎಮ್ಎಲ್ಎ ಶಿವಣ್ಣ ದೊಡ್ಡ ಸಾಚ ತರಹ ನನ್ನ ಕರೆದು ಕೇಳಿದ್ರು ನಿಮಗೆ ಐದು ಕೊಟ್ಟಿದ್ದಾರಲ್ಲ ಅಂದೆ ಸುಮ್ಮನಾದ್ರು ಶಿವು ಗೊತ್ತ ನಿಮಗೆ, ಅವ್ನು ನನ್ನ ಶಿಷ್ಯನೇ ಏನಾದ್ರು ವ್ಯವಹಾರ ಇದ್ರೆ ಅವನೇ ಮಾಡಿಕೊಡ್ತಾ ಇದ್ದ..