ಬೆಂಗಳೂರಿನ ರಾಜರಾಜೇಶ್ವರ ನಗರ ಶಾಸಕ ಮುನಿರತ್ನ MLA Muniratna ಕಸ ವಿಲೇವಾರಿ ಗುತ್ತಿಗೆದಾರನಿಂದ ( contractor)ಲಂಚ a bribe)ಹಾಗೂ ಜೀವ ಬೆದರಿಕೆ (Life threatening)ಹಾಕಿದ ಕುರಿತು ಗುತ್ತಿಗೆದಾರ ಚಲುವರಾಜು ಸುದ್ದಿಗೋಷ್ಟಿ ನಡೆಸಿದ್ದಾರೆ.ಮಾಜಿ ಸಚಿವ ಮುನಿರತ್ನ Former Minister Muniratna ವಿರುದ್ದ ಆರೋಪ ಮಾಡಿರುವ ಗುತ್ತಿಗೆದಾರ ತೋಟಗಾರಿಕಾ Horticultural ಸಚಿವರಾಗಿದ್ದಾಗ ಕಮಿಷನ್ ಕೇಳಿದರು ಎಂದು ಆರೋಪ ಮಾಡಿದ್ದಾರೆ.
ನಾನು ಪೌರ ಕಾರ್ಮಿಕನಾಗಿ, ಲಾರಿ ಕ್ಲೀನರ್ ಆಗಿ, ಡ್ರೈವರ್ ಆಗಿ ಕೆಲಸ ಮಾಡಿದ್ದೇನೆ. ಈಗ ವಾರ್ಡ್ ಕಾಂಟ್ರಾಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಶಾಸಕ ಮುನಿರತ್ನ ಪಿಎ ವಿಜಿ ಕುಮಾರ್ ಫೋನ್ ಮಾಡಿದ್ರು. ನನಗೆ ತಿಳಿಯದೇ ಆರ್ಡರ್ ಮಾಡಿಸ್ತೀಯಾ? ಎಂದು ಶಾಸಕ ಮುನಿರತ್ನ ಆವಾಜ್ ಹಾಕಿದ್ರು. ಸಭೆ ಕರೆದು ಎಲ್ಲರ ಎದುರಲ್ಲೇ ನನ್ನ ಬೈದರು. ದುಡ್ಡು ಕೊಡ್ತಿಯಾ ಇಲ್ವಾ..? 36 ಲಕ್ಷ ಕೊಡು ಅಂದ್ರು. 15 ಲಕ್ಷ ಕೊಡ್ತೀನಿ ಎಂದಿದ್ದೆ, ಆದ್ರೆ ನನಗೆ ಅಷ್ಟು ಹಣ ಕೊಡಲಾಗಲಿಲ್ಲ. ಇದಕ್ಕೆ ಚೀಫ್ ಕಮಿಷಿನರ್ಗೆ ನನ್ನ ವಿರುದ್ಧ ಕೆಲಸ ಸರಿಯಾಗಿ ಮಾಡಲ್ಲ ಎಂದು ದೂರು ನೀಡಿದ್ದಾರೆ. ಇದಾದ ಮೇಲೆ ನನ್ನ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ರು ಎಂದು ಆರೋಪಿಸಿದ್ದಾರೆ.
ಶಾಸಕರು 20-30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ದುಡ್ಡು ಕೊಡು ಎಂದ್ರೆ ನಾನು ಎಲ್ಲಿಂದ ಕೊಡಲಿ..? ಮುನಿರತ್ನ ಆಪ್ತ ವಸಂತ್ ಕುಮಾರ್ ನನಗೆ ಜೀವ ಬೆದರಿಕೆ ಹಾಕಿದ್ದಾರೆ. ರೇಣುಕಾಸ್ವಾಮಿ ರೀತಿ ನಿನ್ನ ಕೊಲೆ ಮಾಡ್ತೀವಿ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಮುಂದೆ ನಾನು ಜೀವಂತವಾಗಿ ಇರ್ತಿನೋ ಇಲ್ವೋ ಗೊತ್ತಿಲ್ಲ. ನನ್ನ ಜಾತಿ ಬಳಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮೇ 18ರಂದು ಅಧಿಕಾರಿಗಳ ಸಭೆ ಕರೆದ ವೇಳೆ ಶಾಸಕ ಮುನಿರತ್ನ ನನಗೆ ಲಂಚದ ಬೇಡಿಕೆ ಇಟ್ಟಿದ್ದರು.ನಾನು ದುಡ್ಡು ಕೊಟ್ಟಿಲ್ಲ ಅಂತ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಅದರ ಆಡಿಯೋ ರಿಲೀಸ್ ಮಾಡುತ್ತಿದ್ದೇನೆ. ಇದೇ ರೀತಿ ನನಗೆ ಸಾಕಷ್ಟು ಬಾರಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಹಲ್ಲೆ ಮಾಡಿದ್ದಾರೆ. ಜೀವ ಬೆದರಿಕೆಯನ್ನೂ ಹಾಕಿದ್ದಾರೆ ಎಂದಿದ್ದಾರೆ.
ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ. ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಗಮನಕ್ಕೆ ತರ್ತೇನೆ.ದಾಖಲೆ ಇಲ್ಲದ ಕಾರಣ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿರಲಿಲ್ಲ. ಇದೀಗ ಪೊಲೀಸ್ ಠಾಣೆಗೂ ದೂರು ನೀಡ್ತೇನೆ.20 ಲಕ್ಷ ಹಣ ಇದುವರೆಗೂ ಕೊಟ್ಟಿದ್ದೇನೆ. ನಿನ್ನ ಹೆಂಡತಿ ಫೋಟೋ ತೋರಿಸು ಹೇಗಿದಾಳೆ ನೋಡ್ತಿನಿ ಎಂದೆಲ್ಲ ಅಸಹ್ಯವಾಗಿ ಮಾತಾಡಿದ್ದಾರೆ.ನನ್ನ ಜೀವಕ್ಕೆ ಅಪಾಯವಿದೆ. ಮುನಿರತ್ನ ಪ್ರಭಾವಶಾಲಿ ಶಕ್ತಿ ವ್ಯಕ್ತಿ, ಸಿಎಂ, ಹೋಮ್ ಮಿನಿಸ್ಟರ್, ಪೊಲೀಸ್ ಕಮಿಷನರ್ ಭೇಟಿ ಮಾಡಿ ದೂರು ಕೊಡ್ತೇನೆ. ರೇಣುಕಾಸ್ವಾಮಿಗೆ ಆದ ಗತಿ ನಿನಗೂ ಆಗುತ್ತೆ. ರೇಣುಕಾಸ್ವಾಮಿ ಕೊಂದಿದ್ದೂ ನಮ್ಮ ಕಡೆಯವರೇ.. ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.