• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದಲಿತರ ಸಭೆ ನಿಲ್ಲಿಸೋಕೆ ಆಗಲ್ಲ.. ನಿಲ್ಲಿಸಿದ್ರೆ ಕೇಳೋದು ಇಲ್ಲ – ಡಾಕ್ಟರ್‌

ಕೃಷ್ಣ ಮಣಿ by ಕೃಷ್ಣ ಮಣಿ
January 9, 2025
in Top Story, ಅಂಕಣ, ಇದೀಗ, ಕರ್ನಾಟಕ, ರಾಜಕೀಯ, ವಿಶೇಷ, ಶೋಧ
0
Share on WhatsAppShare on FacebookShare on Telegram

ಬುಧವಾರ ನಿಗದಿಯಾಗಿದ್ದ ಡಿನ್ನರ್ ಮೀಟಿಂಗ್‌ಗೆ ಬ್ರೇಕ್ ಹಾಕಿದ ವಿಚಾರವಾಗಿ ಡಾ ಹೆಚ್.ಸಿ ಮಹದೇವಪ್ಪ ಮಾತನಾಡಿದ್ದು, ಯಾರೂ ದಲಿತರ ಸಮಸ್ಯೆ ಚರ್ಚೆಗೆ ಬ್ರೇಕ್ ಮಾಡಲು ಆಗಲ್ಲ, ನಮ್ಮನ್ನು ನಿಲ್ಲಿಸುವುದಕ್ಕೂ ಆಗಲ್ಲ, ನಿಲ್ಲಿಸಿದರೆ ಕೇಳುವುದೂ ಇಲ್ಲ ಎಂದು ಗರಂ ಆಗಿದ್ದಾರೆ. ನನ್ನ ನೋಡಿದರೆ ನಾವು ಬೇಜಾರದಂತೆ ಕಾಣತ್ತಾ..? ಎಂದು ಪ್ರಶ್ನಿಸಿರುವ ಸಚಿವರು, ಸಭೆ ರದ್ದಾಗಿಲ್ಲ, ಮುಂದೆ ಹಾಕಿದ್ದೇವೆ ಅಷ್ಟೇ ಎಂದಿದ್ದಾರೆ. ಸಭೆ ಮುಂದೂಡಿಕೆ ಮಾಡಿದ್ದಕ್ಕೆ ಬೇಜಾರಾಗುವುದು ಯಾಕೆ..? ಅಂತಾನೂ ತಿಳಿಸಿದ್ದಾರೆ.

ADVERTISEMENT

ದಲಿತರ ಸಮಸ್ಯೆಗಳ ಬಗ್ಗೆ ನಿರಂತರ ಚರ್ಚೆ ಆಗಬೇಕು. ಇಂದೂ ಚರ್ಚೆ ಮಾಡ್ತೇವೆ, ಮುಂದೆಯೂ ಚರ್ಚೆ ಮಾಡ್ತೇವೆ. ರಣದೀಪ್‌ ಸಿಂಗ್‌ ಸುರ್ಜೆವಾಲಾ ಸಭೆ ಮಾಡಬೇಡಿ ಅಂದಿಲ್ವಲ್ಲ..? ಎಂದಿದ್ದು, ಸುರ್ಜೆವಾಲಾ ಕೂಡ ಬಂದು ವಿವರವಾಗಿ ಸಭೆಯಲ್ಲಿ ಭಾಗಿಯಾಗಿ ಮಾಹಿತಿ ಪಡೆಯಬಹುದು. ದಲಿತ ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಎಲ್ಲರೂ ಸ್ವತಂತ್ರರು ಅಲ್ವಾ..? ಹಸ್ತದ ಗುರುತು ಎಲ್ಲರಿಗೂ ಗೊತ್ತು, ಕಾಣದ ಕೈಯಿ ಯಾವುದೂ ಇಲ್ಲ. ಇದರಲ್ಲಿ ರಾಜಕೀಯ ಹುಡುಕುವುದು ಏನಿದೆ..? ಎಂದಿದ್ದಾರೆ.

ಒಳ್ಳೆಯ ಉದ್ದೇಶದಿಂದಲೇ ಸಭೆ ಸೇರುವ ನಿರ್ಧಾರ ಆಗಿತ್ತು. ನನ್ನ ಪ್ರಕಾರ ಯಾವುದೇ ಗೊಂದಲವಿಲ್ಲ, ನಾವೆಲ್ಲ ಬಹಳ ಸ್ಪಷ್ಟವಾಗಿದ್ದೇವೆ. ಯಾವ ಹಸ್ತವೂ ಇದರಲ್ಲಿ ಕೆಲಸ ಮಾಡಿಲ್ಲ. ಸಭೆ ಮುಂದೂಡಿದ್ದಾರೆ, ಮುಂದೆ ಸಭೆ ಮಾಡುತ್ತೇವೆ. ರಾಜಣ್ಣ ಯಾವ ಉದ್ದೇಶದಿಂದ ಹೇಳಿದರೋ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗದ ಪರ ಇದೆ, ದಲಿತರ ಪರ ಇದೆ. ಇದರಲ್ಲಿ ತಪ್ಪು ಹುಡುಕುವುದು ಏನೂ ಕಾಣುತ್ತಿಲ್ಲ. ದಲಿತರ ಸಮಸ್ಯೆ ಬಗ್ಗೆ ಚರ್ಚೆ ಮಾಡಬೇಡ ಅಂತ ಹೇಳುವುದು ಯಾರು..? ಹಾಗೆ ಹೇಳುವುದಕ್ಕೆ ಆಗುವುದಿಲ್ಲ. ಯಾರೂ ಸಭೆ ಮಾಡಬೇಡಿ ಎಂದಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

Omar Abdullah: ದೆಹಲಿ ಚುನಾವಣೆಗೂ ನಮಗೂ ಯಾವುದೇ ಸಂಬಂಧವಿಲ್ಲ..! #J&K #cm #omarabdullah #india

ಮನುಷ್ಯ ಸಂಘ ಜೀವಿ, ಸಂಘ ಆದ ಮೇಲೆ ಚರ್ಚೆ ಮಾಡಲೇಬೇಕಲ್ಲ. ಯಾರೂ ದಲಿತರ ಸಮಸ್ಯೆ ಚರ್ಚೆಗೆ ಬ್ರೇಕ್ ಮಾಡಲು ಆಗಲ್ಲ, ನಿಲ್ಲಿಸುವುದಕ್ಕೂ ಆಗಲ್ಲ, ನಿಲ್ಲಿಸಿದರೆ ಕೇಳುವುದೂ ಇಲ್ಲ. ಕಾಂಗ್ರೆಸ್ ಶಕ್ತಿಯೇ ದಲಿತರು, ಹಾಗಿದ್ದಾಗ ಯಾರೂ ಅಡ್ಡಿ ಮಾಡಲು ಬರುವುದಿಲ್ಲ. ಕಾಂಗ್ರೆಸ್ ಚಿತ್ರದುರ್ಗದಲ್ಲಿ ದಲಿತ ಸಮಾವೇಶ ಮಾಡಿದ್ದರಿಂದಲೇ 135-136 ಸ್ಥಾನ ಬರುವುದಕ್ಕೆ ಸಾಧ್ಯವಾಯಿತು. ದಲಿತರೇ ಕಾಂಗ್ರೆಸ್‌ನ ಬೇಸ್ ಆಗಿರುವಾಗ ಹೈಕಮಾಂಡ್ ಯಾಕೆ ಸಭೆ ಮಾಡಬೇಡಿ ಅಂತ ಹೇಳ್ತಾರೆ. ಇದೆಲ್ಲ ಮೂರ್ಖತನ ಅಷ್ಟೆ ಎಂದಿದ್ದಾರೆ.

Tags: District In-charge Minister HC Mahadevappadr hc mahadevappaH C MahadevappaHC mahadevappahc mahadevappa and siddaramaiahhc mahadevappa daughterhc mahadevappa familyhc mahadevappa fanshc mahadevappa interviewhc mahadevappa latest newshc mahadevappa ministerhc mahadevappa newshc mahadevappa on siddaramaiahhc mahadevappa sonhc mahadevappa speechhc mahadevappa todayhc mahadevappa today newsMahadevappaMinister HC Mahadevappasiddaramaiah vs hc mahadevappa
Previous Post

ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ:

Next Post

ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಿಗೆ ಕೇಂದ್ರ ಅನ್ಯಾಯ: ಡಿಸಿಎಂ ಡಿ.ಕೆ. ಶಿವಕುಮಾರ್

Related Posts

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!
Top Story

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

by ಪ್ರತಿಧ್ವನಿ
May 24, 2026
0

ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ನಬಿನ್‌ ಕರ್ನಾಟಕ ರಾಜ್ಯ ಪ್ರವಾಸದಲ್ಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಅಲೆಯ ಎದುರು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಸಂಘಟನೆಯ ದೃಷ್ಟಿಯಿಂದಲೂ...

Read moreDetails
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

‘ಸಿಜೆಪಿ’ ಪೇಜ್ ಹ್ಯಾಕ್‌? ‘ಕಾಕ್ರೋಚ್ ಜನತಾ ಪಕ್ಷ’ ಅಭಿಜಿತ್ ದಿಪ್ಕೆ ಹೇಳಿದ್ದೇನು? 

May 23, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

ಮುಂಗಾರು ಅಬ್ಬರ: ರಾಜ್ಯಾದ್ಯಂತ ಭಾರೀ ಮಳೆ, ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಎಚ್ಚರಿಕೆ

May 23, 2026
Next Post

ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಿಗೆ ಕೇಂದ್ರ ಅನ್ಯಾಯ: ಡಿಸಿಎಂ ಡಿ.ಕೆ. ಶಿವಕುಮಾರ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada