• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬೆಳೆಯುತ್ತಲೇ ಇರುವ ನಕಲಿ ಬಂದೂಕು ಪ್ರಕರಣದ ಪಟ್ಟಿ

ಪ್ರತಿಧ್ವನಿ by ಪ್ರತಿಧ್ವನಿ
September 6, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಮಡಿಕೇರಿ, :ಜಿಲ್ಲೆಯ ಗಡಿಭಾಗದಲ್ಲಿ ನಕಲಿ ಬಂದೂಕು ತಯಾರಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದ ಬಳಿಕ ಇದೀಗ ಮಾರಾಟವಾಗಿರುವ ಬಂದೂಕು ಹಾಗೂ ಖರೀದಿ ಮಾಡಿರುವವರ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ಪ್ರಕರಣದ ಜಾಡು ಹಿಡಿದು ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಹಲವರನ್ನು ವಿಚಾರಣೆಗೆ ಒಳಪಡಿಸಿದ್ದು, ಈಗಾಗಲೇ ಆರು ಬಂದೂಕುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ADVERTISEMENT

ಜಿಲ್ಲೆಯ ಗಡಿಗ್ರಾಮ ಎಂದು ಹೇಳಲಾಗುವ ಸಣ್ಣಪುಲಿಕೋಟು ಗ್ರಾಮದಲ್ಲಿ ನಕಲಿ ಬಂದೂಕು ತಯಾರಿ ಮಾಡುವುದಲ್ಲದೆ ಅದನ್ನು ಕೊಡಗು ಮತ್ತು ಕೇರಳ ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಸುಳಿವರಿತ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದ ಭಾಗಮಂಡಲ ಠಾಣಾಧಿಕಾರಿ ಶೋಭಾ ಲಮಾಣಿ ಹಾಗೂ ತಂಡದವರು ಕಳೆದ ಆಗಸ್ಟ್ ೧೫ರಂದು ಎರಡು ನಕಲಿ ಬಂದೂಕು ಹಾಗೂ ಒಂದು ಪಿಸ್ತೂಲ್ ಸಹಿತ ನಾಲ್ವರನ್ನು ಬಂದಿಸಿದ್ದರು.

ಕಳೆದ ಹದಿನೈದು ವರ್ಷಗಳಿಂದ ಸಣ್ಣಪುಲಿಕೋಟಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿಕೊಂಡು ಕತ್ತಿ ತಯಾರಿ ಹಾಗೂ ದುರಸ್ತಿ ಮಾಡಿಕೊಂಡಿರುವ ಕೇರಳದ ಇಡುಕ್ಕಿ ಜಿಲ್ಲೆಯ ಸುರೇಶ್ ಎಂಬಾತ ಪ್ರಮುಖ ಆರೋಪಿಯಾಗಿದ್ದು, ಆತನಿಂದ ಬಂದೂಕು ಖರೀದಿಸಿದ್ದ ಇತರ ಮೂವರನ್ನು ಬಂದಿಸಲಾಗಿತ್ತು. ಮತ್ತೆ ನಾಲ್ಕು ಕೋವಿ ವಶಕ್ಕೆ..!ಅದಾದ ಬಳಿಕ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಮತ್ತೊಂದು ಕೋವಿ ಸಿಕ್ಕಿದೆ.ಕರಿಕೆ ಗ್ರಾಮದ ದಿನೇಶ ಎಂಬಾತ ಬಂದೂಕು ಖರೀದಿಸಿರುವ ಬಗ್ಗೆ ಸುಳಿವು ಸಿಕ್ಕ ಮೇರೆಗೆ ಆತನನ್ನು ಬಂದಿಸಿ ಕೋವಿ ವಶಪಡಿಸಿಕೊಂಡಿದ್ದರು. ಅದಲ್ಲದೆ ಕಟ್ಟೆಕೋಡಿ ಗ್ರಾಮದಲ್ಲಿ ಕಳ್ಳಬೇಟೆಗಾಗಿ ಬಳಸಲಾಗಿದ್ದ ಮೂರು ನಕಲಿ ಬಂದೂಕುಗಳನ್ನು ವಶಪಡಿಸಿ ಕೊಂಡಿದ್ದಾರೆ.ಈ ಬಂದೂಕುಗಳನ್ನು ಖರೀದಿ ಮಾಡಿದವರಾರು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಈ ನಿಟ್ಟಿನಲ್ಲಿ ಹಲವರನ್ನು ಪ್ರತಿನಿತ್ಯ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಗಮಂಡಲ ಪೊಲೀಸರು ತನಿಖೆ ಮುಂದುವರಿಸಿದ್ದು, ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸೆರೆಸಿಕ್ಕ ಆರೋಪಿಗಳು ನೀಡಿರುವ ಮಾಹಿತಿ ಆಧಾರದಲ್ಲಿ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ.ಕರಿಕೆ ಚೆತ್ತುಕಾಯ ನಿವಾಸಿ ರಾಮಚಂದ್ರ ಎಂಬವರ ಬಳಿ ಕೋವಿ ಇದೆ ಎಂಬ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅವರನ್ನು ಕರಿಕೆ ಉಪಠಾಣೆಗೆ ಕರೆಸಿ ವಿಚಾರಣೆ ಮಾಡಿರುವುದಾಗಿ ತಿಳಿದು ಬಂದಿದೆ.ಇದರೊಂದಿಗೆ ಪ್ರಮುಖ ಆರೋಪಿ ಸುರೇಶ್‌ನನ್ನು ಖರೀದಿದಾರರಿಗೆ ಪರಿಚಯ ಮಾಡಿಕೊಟ್ಟ ಆರೋಪದ ಮೇರೆಗೆ ಪ್ರಭಾಕರ್ ಹಾಗೂ ಗಣೇಶ್ ಎಂಬವರುಗಳನ್ನು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಮಾಡಿರುವುದಾಗಿ ತಿಳಿದು ಬಂದಿದೆ. ನಕಲಿ ಬಂದೂಕು ತಯಾರಿ ಹಾಗೂ ಮಾರಾಟ ಮಾಡಿರುವ ಪ್ರಕರಣದ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಗುತ್ತಿದ್ದು, ಪೊಲೀಸರು ತನಿಖೆಯಲ್ಲಿ ಮಗ್ನರಾಗಿದ್ದಾರೆ..!

Tags: crimefake gun casesKarnataka Police Department
Previous Post

ಹಿಂದೂ ಜಾಗರಣ ವೇದಿಕೆ ಕಾರಿಗೆ ಢಿಕ್ಕಿ ಪಡಿಸಿ ಸುಳ್ಳು ದೂರು ದಾಖಲು; ಹಿಜಾವೇ ಪ್ರತಿಭಟನೆ

Next Post

ಸಿನಿಮಾ ಶೂಟಿಂಗ್ ಸೆಟ್​ನಲ್ಲಿ ಲೈಟ್ ಮ್ಯಾನ್ ಸಾವು; ನಿರ್ದೇಶಕ ಯೋಗರಾಜ್ ಭಟ್ ಮೇಲೆ ಎಫ್​ಐಆರ್ ದಾಖಲು!

Related Posts

ಮಿತ್ರ ಪಕ್ಷಗಳ ಟೀಕೆಗೆ ಮಣಿದ ಸಿಎಂ ವಿಜಯ್ : ವಿಶೇಷಾಧಿಕಾರಿ ನೇಮಕ ವಾಪಸ್‌
Top Story

ಮಿತ್ರ ಪಕ್ಷಗಳ ಟೀಕೆಗೆ ಮಣಿದ ಸಿಎಂ ವಿಜಯ್ : ವಿಶೇಷಾಧಿಕಾರಿ ನೇಮಕ ವಾಪಸ್‌

by ಪ್ರತಿಧ್ವನಿ
May 13, 2026
0

ಚೆನೈ : ನೂತನವಾಗಿ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವ ನಟ ಜೋಸೆಫ್‌ ವಿಜಯ್‌ ತಮ್ಮ ಮಿತ್ರಪಕ್ಷಗಳ ಮನವಿಗೆ ಸ್ಪಂದಿಸಿ, ತಮ್ಮ ಓಎಸ್‌ಡಿಯಾಗಿದ್ದ ಜ್ಯೋತಿಷ್ಯಿಯ ನೇಮಕವನ್ನು ವಾಪಸ್‌ ಪಡೆದಿದ್ದಾರೆ. ವಿಜಯ್‌ ಪ್ರಮಾಣ ವಚನ...

Read moreDetails
Breking:ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ

Breking:ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ

May 13, 2026
ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ಶಂಕೆ: ನಾಶಿಕ್‌ನಲ್ಲಿ ವಿದ್ಯಾರ್ಥಿಗಳ ಬಂಧನ, ದೊಡ್ಡ ಹಗರಣ ಬಯಲಾಗುವ ಸಾಧ್ಯತೆ!

ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ಶಂಕೆ: ನಾಶಿಕ್‌ನಲ್ಲಿ ವಿದ್ಯಾರ್ಥಿಗಳ ಬಂಧನ, ದೊಡ್ಡ ಹಗರಣ ಬಯಲಾಗುವ ಸಾಧ್ಯತೆ!

May 12, 2026
ಸಾರಿಗೆ ನೌಕರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಹಿ ಸುದ್ದಿ

ಸಾರಿಗೆ ನೌಕರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಹಿ ಸುದ್ದಿ

May 12, 2026
ಸಿಎಂ ಆದ ತಕ್ಷಣವೇ ವಿಜಯ್‌ರ ಮೊದಲ ಆದೇಶ: ದೇವಾಲಯ, ಶಾಲೆಗಳ ಬಳಿ ಈ ವಸ್ತು ಮಾರಾಟಕ್ಕೆ ಬ್ರೇಕ್!

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಚಲನ: ಶುಭೇಂದು ಅಧಿಕಾರಿಗೆ ಶಾಸಕನಿಂದ ಬಹಿರಂಗ ಬೆದರಿಕೆ!

May 12, 2026
Next Post
ಸಿನಿಮಾ ಶೂಟಿಂಗ್ ಸೆಟ್​ನಲ್ಲಿ ಲೈಟ್ ಮ್ಯಾನ್ ಸಾವು; ನಿರ್ದೇಶಕ ಯೋಗರಾಜ್ ಭಟ್ ಮೇಲೆ ಎಫ್​ಐಆರ್ ದಾಖಲು!

ಸಿನಿಮಾ ಶೂಟಿಂಗ್ ಸೆಟ್​ನಲ್ಲಿ ಲೈಟ್ ಮ್ಯಾನ್ ಸಾವು; ನಿರ್ದೇಶಕ ಯೋಗರಾಜ್ ಭಟ್ ಮೇಲೆ ಎಫ್​ಐಆರ್ ದಾಖಲು!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada