ಪಶ್ಚಿಮ ಬಂಗಾಳದಲ್ಲಿ ಜಯಭೇರಿ ಬಾರಿಸಿದ್ದ ತೃಣಮೂಲ ಕಾಂಗ್ರೆಸ್ ಇಂದು ಆಂತರಿಕ ಕಲಹದಿಂದ ಗೊಂದಲದ ಸ್ಥಿತಿಯಲ್ಲಿದೆ. ಬಿಜೆಪಿ ವಿರುದ್ಧದ ಅಭೂತಪೂರ್ವ ಗೆಲುವಿನ ನಂತರ, ಟಿಎಂಸಿಯು ದೇಶಾದ್ಯಂತ ಪಕ್ಷವನ್ನು ವಿಸ್ತರಿಸುವ ದಿಟ್ಟ ಯೋಜನೆಯನ್ನು ಪ್ರಾರಂಭಿಸಿತು. ಆದರೆ, ಅದೀಗ ಎಡವುತ್ತಿರುವಂತೆ ಕಾಣುವುದು ಮಾತ್ರವಲ್ಲದೆ, ತನ್ನ ತವರಿನಲ್ಲಿ ಅಂದರೆ ಪಶ್ಚಿಮ ಬಂಗಾಳದಲ್ಲೇ ಪಕ್ಷದೊಳಗೆ ಬಿರುಕು ಬಿಟ್ಟಿದೆ
ಫೆಬ್ರವರಿ 8 ರಂದು, ಆನಂದಬಜಾರ್ ಪತ್ರಿಕೆಯು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜಕೀಯ ಸಲಹೆಗಾರ ಪ್ರಶಾಂತ್ ಕಿಶೋರ್ ಅವರ ಸಂಸ್ಥೆ I-PAC ನಡುವೆ ಎದ್ದ ಭಿನ್ನಾಭಿಪ್ರಾಯದ ಬಗ್ಗೆ ವರದಿ ಮಾಡಿದೆ. ಇದು ತುಂಬಾ ಗಂಭೀರವಾಗಿದ್ದು, I-PAC ಯನ್ನು ವಜಾ ಮಾಡಲು ಬ್ಯಾನರ್ಜಿ ಯೋಚಿಸುತ್ತಿದ್ದಾರೆ ಎಂದು ವರದಿ ಹೇಳಿದೆ. ಅದೇ ಸಮಯದಲ್ಲಿ, I-PAC ಅನ್ನು ಬಳಸಿಕೊಂಡು ತನ್ನ ವರ್ಚಸ್ಸು ಹೆಚ್ಚಿಸಲು ಮುಖ್ಯಮಂತ್ರಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಪ್ರಯತ್ನ ಪಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಮತಾ ಬ್ಯಾನರ್ಜಿ ಕಠಿಣ ನಿರ್ಧಾರ ಕೈಗೊಂಡಿದ್ದು, ತಮ್ಮ ಅಧ್ಯಕ್ಷ ಸ್ಥಾನವನ್ನು ಹೊರತುಪಡಿಸಿ ತೃಣಮೂಲ ಕಾಂಗ್ರೆಸ್ನ ಸಂಪೂರ್ಣ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ಅವರು ವಿಸರ್ಜಿಸಿದ್ದಾರೆ. ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಡಲಾಗಿದೆ.
ರಾಜಕೀಯ ಪಕ್ಷಗಳಲ್ಲಿ ಬಣ ಜಗಳ ಸಾಮಾನ್ಯ. ಬಾಹ್ಯ ರಾಜಕೀಯ ಸಮಾಲೋಚಕರು ಈ ಆಂತರಿಕ ಕಲಹಗಳಲ್ಲಿ ಭಾಗಿಯಾಗಿರುವುದು ಕಡಿಮೆ. ವಾಸ್ತವವಾಗಿ, ರಾಜಕೀಯ ಸಲಹೆಗಾರರ ಕಲ್ಪನೆಯು ಭಾರತೀಯ ರಾಜಕೀಯದಲ್ಲಿ ತುಂಬಾ ಹಳೆಯದ್ದೇನಲ್ಲ. ಆದರೆ ಸದ್ಯ ನಡೆಯುತ್ತಿರುವ ತೃಣಮೂಲ ಅಂತರ್ ಕಲಹವು, ಭಾರತೀಯ ರಾಜಕೀಯದಲ್ಲಿ ರಾಜಕೀಯ ಸಲಹೆಗಾರರು ಪ್ರಮುಖ ಜಾಗವನ್ನು ಆಕ್ರಮಿಸಿಕೊಂಡಿರುವುದನ್ನು ಸಾಬೀತಾಗಿದೆ. ಇದು ಭಾರತದ ಪ್ರಜಾಪ್ರಭುತ್ವಕ್ಕೆ ಎಷ್ಟು ಆರೋಗ್ಯಕರ ಎಂಬ ಪ್ರಶ್ನೆಯೂ ಈಗ ಉದ್ಭವವಾಗಿದೆ?
ಪ್ರಶಾಂತ್ ಕಿಶೋರ್ ಅವರು 2014 ರಲ್ಲಿ ಪ್ರಧಾನ ಮಂತ್ರಿ ಸ್ಥಾನಕ್ಕೆ ನರೇಂದ್ರ ಮೋದಿಯವರನ್ನು ಕುಳ್ಳಿರಿಸುವಲ್ಲಿ ಯಶಸ್ವಿ ಪ್ರಯತ್ನ ಮಾಡಿ ಭಾರತದ ರಾಜಕೀಯ ಕ್ಷೇತ್ರದಲ್ಲಿ ಪ್ರಾಮುಖ್ಯತೆಯನ್ನು ಪಡೆದರು. ಅಂದಿನಿಂದ, ಅವರು ಮತ್ತು ಅವರ I-PAC ತಂಡವು ಬಿಹಾರದಲ್ಲಿ ಜನತಾ ದಳ (ಯುನೈಟೆಡ್), ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್, ಮಹಾರಾಷ್ಟ್ರದಲ್ಲಿ ಶಿವ ಸೇನೆ, ಆಂಧ್ರಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಜೊತೆಗೆ ಕೆಲಸ ಮಾಡಿದ್ದಾರೆ.
ವಿಶ್ಲೇಷಣಾತ್ಮಕ ವಿಧಾನಗಳು, ಡೇಟಾ ಮತ್ತು ಬ್ರ್ಯಾಂಡಿಂಗ್ ಮೂಲಕ ಭಾರತದ ರಾಜಕೀಯವನ್ನು ಮೂಲಭೂತವಾಗಿ ಬದಲಾಯಿಸುವಲ್ಲಿ ಕಿಶೋರ್ ಬಲವಾದ ಪಾತ್ರವನ್ನು ವಹಿಸಿದ್ದಾರೆ ಎಂದು ಹೇಳುವುದು ಅತಿಶಯೋಕ್ತಿಯಲ್ಲ.
2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಬಲ ಪ್ರದರ್ಶನದ ನಂತರ ಅಭಿಷೇಕ್ ಬ್ಯಾನರ್ಜಿ ತಂದ I-PAC ತೃಣಮೂಲ ಕಾಂಗ್ರೆಸನ್ನು ಮಾತ್ರವಲ್ಲದೆ ಪಶ್ಚಿಮ ಬಂಗಾಳದ ಆಡಳಿತದ ಮೇಲೆ ಗಮನಾರ್ಹ ಪ್ರಮಾಣದ ಪ್ರಭಾವವನ್ನು ಬೀರಿದೆ.
ತೃಣಮೂಲ ಕಾಂಗ್ರೆಸ್ ಗೆಲುವಿನ ಕಡೆಗೆ ಎಳೆಯಲು ಸಹಾಯ ಮಾಡುವಲ್ಲಿ I-PAC ಯ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುವುದು ಕಷ್ಟ. ತಳಮಟ್ಟದ ಅಭಿಪ್ರಾಯಗಳನ್ನು ದತ್ತಾಂಶಗಳ ಮೂಲಕ ಪಕ್ಷದ ನಾಯಕತ್ವಕ್ಕೆ ಅರಿವು ಮೂಡಿಸಿತು.
ಇದಲ್ಲದೆ, 2014 ರಲ್ಲಿ ಮೋದಿಯವರಂತೆ, I-PAC ಮಮತಾ ಅವರ ವೈಯಕ್ತಿಕ ಇಮೇಜ್ ಅನ್ನು ಬಂಗಾಳದಲ್ಲಿ ಮತ್ತೆ ಹೊಸದಾಗಿ ಕಟ್ಟಿತು. ಮತದಾರರಿಗೆ ಬ್ಯಾನರ್ಜಿ ಮತ್ತು ಸರ್ಕಾರದ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಗಳನ್ನು ನೇರವಾಗಿ ಸಂಪರ್ಕಿಸುವ ಮೂಲಕ ಕಿಶೋರ್ ಅದನ್ನು ಹೆಚ್ಚು ಆಧುನಿಕ ಭಾಷಾವೈಶಿಷ್ಟ್ಯಕ್ಕೆ ಮರುಹೊಂದಿಸುವಲ್ಲಿ ಯಶಸ್ವಿಯಾದರು. ಮೋದಿಯವರಂತೆಯೇ, ಕಲ್ಯಾಣ ಮತ್ತು ಅಭಿವೃದ್ಧಿಯನ್ನು ಮಮತಾ ಬ್ಯಾನರ್ಜಿಯವರ ವೈಯಕ್ತಿಕ ಖಾತೆಗೆ ಸೇರಿಸಿ ಅವರ ವರ್ಚಸ್ಸನ್ನು ಹೆಚ್ಚು ಮಾಡಲಾಯಿತು.
I-PAC ಯ ಸಾಮಾಜಿಕ ಮಾಧ್ಯಮವನ್ನು ಪತ್ರಕರ್ತರಿಗೆ ಸಂವಹನಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಂಡಿತು. 2021 ರಲ್ಲಿ ಬಿಜೆಪಿಗಿಂತ ಉತ್ತಮವಾದ PR ತಂತ್ರವನ್ನು ಟಿಎಂಸಿಗೆ ಬಳಸಲಾಯಿತು.
2021 ರ ಚುನಾವಣಾ ಫಲಿತಾಂಶಗಳ ಮೂಲಕವೇ I-PAC ನ ಸಲಹೆಯು ಯಶಸ್ವಿಯಾಗಿದೆ ಎಂದು ನಿರ್ಣಯಿಸಬಹುದು. I-PAC ಸಲಹೆ ಪಾಲಿಸಿ ತೃಣಮೂಲ ಕಾಂಗ್ರೆಸ್ ಬಿಜೆಪಿಯನ್ನು ಅಳಿಸಿಹಾಕಿತು. ಆದಾಗ್ಯೂ, ಇದೀಗ ತೃಣಮೂಲ ಕಾಂಗ್ರೆಸ್‌ನಲ್ಲಿನ ಆಂತರಿಕ ಕಲಹದಲ್ಲಿ I-PAC ದೊಡ್ಡ ಪಾಲನ್ನೇ ಹೊಂದಿದೆ.

ಆ ಮೂಲಕ I-PAC ಆಸಕ್ತಿರಹಿತ ರಾಜಕೀಯ ಸಲಹೆಗಾರನಲ್ಲ ಎಂಬುದು ಸಾಬೀತಾಗಿದೆ. ಪಕ್ಷದ ಹಿರಿಯ ಮುಖಂಡರ ವಿರುದ್ಧ ಅಭಿಷೇಕ್ ಬ್ಯಾನರ್ಜಿ ಅವರ ಒತ್ತಡದಲ್ಲಿ ಸಿಲುಕಿಸಿದ್ದರಕ್ಕಿ I-PAC ಪ್ರಮುಖ ಅಸ್ತ್ರವಾಗಿದೆ ಎಂದು ಮೂಲಗಳು ಸೂಚಿಸುತ್ತವೆ. ಕಳೆದ ಕೆಲವು ವಾರಗಳಲ್ಲಿ ತೃಣಮೂಲ ಕಾಂಗ್ರೆಸ್ನ ಹಿರಿಯ ಸದಸ್ಯರು I-PAC ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಭಾರತೀಯ ರಾಜಕೀಯದ ಪರಿಚಯವಿರುವ ಯಾರಿಗಾದರೂ, ತಮ್ಮ ಹಿಂಬಾಲಕರು ಟಿಕೆಟ್ಗಳನ್ನು ಪಡೆಯುವುದರಲ್ಲಿ ಹಿರಿಯ ರಾಜಕೀಯ ನಾಯಕನ ಪಾತ್ರಗಳು ಗೊತ್ತಿರುತ್ತದೆ. ಹೊಸ ನೇತಾಗಳನ್ನು ಹುಟ್ಟು ಹಾಕುವುದು ಹಿರಿಯ ನಾಯಕರು ರಾಜಕೀಯದಲ್ಲಿ ನೆಲೆಗಳನ್ನು ನಿರ್ಮಿಸುವ ಮತ್ತು ನಿರ್ವಹಿಸುವ ಪ್ರಮುಖ ವಿಧಾನವಾಗಿದೆ. ಆದರೆ, I-PAC ಈ ಕಾರ್ಯವನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿರುವ ಬಗ್ಗೆ ಎದ್ದಿರುವ ಆರೋಪಗಳು ಸಾಕಷ್ಟು ಗಮನಾರ್ಹವಾಗಿದೆ.
ಯಾವುದೇ ಪ್ರಜಾಸತ್ತಾತ್ಮಕ ಹೊಣೆಗಾರಿಕೆಯಿಲ್ಲದ ಖಾಸಗಿ ಸಂಸ್ಥೆಯು ಪಕ್ಷದಲ್ಲಿ ಮತ್ತು ಆಡಳಿತದಲ್ಲಿ ಇಂತಹ ಪ್ರಮುಖ ಪಾತ್ರವನ್ನು ವಹಿಸುವುದು ಅಸಾಮಾನ್ಯವಾಗಿದೆ.
ಒಟ್ಟಾರೆ, I-PAC ಯ ಕೆಲಸವು ತೃಣಮೂಲ ಪಕ್ಷದ ಕಾರ್ಯಾಂಗವನ್ನು ದುರ್ಬಲಗೊಳಿಸಿದೆ. ಜಿಲ್ಲಾ ಮಟ್ಟದ ನಾಯಕರು, ಹಿರಿಯ ಮಂತ್ರಿಗಳು ಹಾಗೂ ಪಕ್ಷದ ಹೈಕಮಾಂಡ್ ಅನ್ನೂ ಮೀರಿ ಈ ಸಂಸ್ಥೆ ನೇರವಾಗಿ ಮತದಾರರ ಮತ್ತು ತಳಮಟ್ಟದ ಡೇಟಾವನ್ನು ಪ್ರವೇಶಿಸಬಹುದಾಗಿದೆ. ಹಾಗಾಗಿಯೇ, ರಾಜಕೀಯ ಸಲಹೆಗಾರರ ಯುಗವು ʼಭಾರತದಲ್ಲಿ ವ್ಯಕ್ತಿತ್ವ ಆರಾಧನೆಯ ರಾಜಕೀಯದ ಬೆಳವಣಿಗೆಯ ಯುಗವಾಗಿದೆʼ ಎಂಬುದು ಕಾಕತಾಳೀಯವಲ್ಲ. ಏಕೆಂದರೆ ಇದು ಪಕ್ಷದ ಕಾರ್ಯಾಂಗದ ಬೆಂಬಲವಿಲ್ಲದೆ ಒಬ್ಬ ನಾಯಕನಿಗೆ ರಾಜ್ಯದಲ್ಲಿ ಪ್ರಭಾವ ಬೀರಲು ಅನುವು ಮಾಡಿಕೊಡುತ್ತದೆ.
ಸಲಹೆಗಾರರು ರಾಜಕೀಯದಲ್ಲಿ ಪಕ್ಷದ ಸಿದ್ಧಾಂತದ ಪಾತ್ರವನ್ನು ತೀವ್ರವಾಗಿ ಹಾನಿಗೊಳಿಸುತ್ತಾರೆ. ಜನರು ಏನು ಬಯಸುತ್ತಾರೆ ಎಂಬುದನ್ನು ಅಳೆಯುವ ಮೂಲಕ ರಾಜಕೀಯ ಬದಲಾವಣೆಯನ್ನು ತರದೆ ಚುನಾವಣೆಗಳನ್ನು ಗೆಲ್ಲುವುದು ಕೇವಲ ತಾಂತ್ರಿಕ ಕಸರತ್ತು ಆಗಿದ್ದರೆ, ಅದುವೇ ಸ್ವತಃ ಅವರ ಅಂತ್ಯವಾಗುತ್ತದೆ. ಉದಾಹರಣೆಗೆ, 2014 ರಲ್ಲಿ, I-PAC ಸಲಹೆ ಪ್ರಕಾರ ಹಿಂದುತ್ವವನ್ನು ಕಡಿಮೆ ಮಾತನಾಡಿ ಬಿಜೆಪಿಯು ಚುನಾವಣೆ ಎದುರಿಸಿತು, ಅಧಿಕಾರಕ್ಕೆ ಬಂದ ನಂತರವೇ ಅದು ಹಿಂದುತ್ವವನ್ನು ಜಾರಿಗೆ ತರುವ ಪ್ರಯತ್ನದಲ್ಲಿದೆ. ಇನ್ನು, 2021 ರಲ್ಲಿ, ತೃಣಮೂಲ ಕಾಂಗ್ರೆಸ್ ಬಂಗಾಳಿ ರಾಷ್ಟ್ರೀಯತೆಗೆ ಹಠಾತ್ತನೆ ತಿರುಗಿತು – ಆದರೆ ಅದರ ಗೆಲುವಿನ ನಂತರ ಅದನ್ನು ಎಲ್ಲೂ ಉಲ್ಲೇಖಿಸಲಾಗುತ್ತಿಲ್ಲ.
ಪಕ್ಷಗಳು ದುರ್ಬಲವಾಗಿರುವುದರಿಂದ ಭಾರತೀಯ ರಾಜಕೀಯದಲ್ಲಿ ಸಲಹೆಗಾರರು ಮಾತ್ರ ಅಂತಹ ದೊಡ್ಡ ಪಾತ್ರವನ್ನು ವಹಿಸಲು ಸಮರ್ಥರಾಗಿದ್ದಾರೆ. ಭಾರತದ ಪಕ್ಷಗಳು ಸಾಮಾನ್ಯವಾಗಿ ಏಕ ವ್ಯಕ್ತಿ ಅಥವಾ ಒಂದೇ ಕುಟುಂಬದವರ ನೇತೃತ್ವದಲ್ಲಿರುತ್ತದೆ.
ತೃಣಮೂಲ ಕಾಂಗ್ರೆಸ್ ಸಚಿವರೊಬ್ಬರ ಆರೋಪದ ಪ್ರಕಾರ, I-PAC ಸಚಿವರ ಟ್ವಿಟರ್ ಹ್ಯಾಂಡಲ್‌ನಿಂದ ಅಭಿಷೇಕ್ ಬಾನರ್ಜಿ ಪರವಾಗಿ ಪೋಸ್ಟ್ ಹಾಕುತ್ತಿದೆ. ರಾಜಕೀಯ ಪಕ್ಷಗಳ ಸಾಮಾಜಿಕ ಜಾಲತಾಣ ಖಾತೆಗಳ ಜುಟ್ಟು ಇಂತಹ ರಾಜಕೀಯ ಸಮಾಲೋಚಕರ ಕೈಯಲ್ಲಿರುವುದು ತಿಳಿದೇ ಇದೆಯಲ್ಲ. ಯಾರು ಏನು ಯಾವಾಗ ಪೋಸ್ಟ್ ಮಾಡಬೇಕು ಎಂದು ಇವರುಗಳೇ ನಿರ್ಧರಿಸುತ್ತಿದ್ದಾರೆ. ಇದು ಪಕ್ಷದೊಳಗಿನ ಆಂತರಿಕ ಪ್ರಜಾಪ್ರಭುತ್ವಕ್ಕೆ ತೀವ್ರ ಹೊಡೆತ ನೀಡುತ್ತಿದೆ.
ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಗಳು ಪ್ರಜಾಪ್ರಭುತ್ವದ ನಿರ್ಣಾಯಕ ಭಾಗವಾಗಿದೆ. ಆದರೆ ಮತದಾರರೊಂದಿಗೆ ತೊಡಗಿಸಿಕೊಳ್ಳುವುದು ನಿರಂತರ ಪ್ರಕ್ರಿಯೆಯ ಅಗತ್ಯವಿದೆ. ಪಕ್ಷಗಳು ಮತ್ತು ಶಾಸಕರಂತಹ ಸ್ಥಳೀಯ ಪ್ರಜಾಸತ್ತಾತ್ಮಕ ಅಂಗಗಳು ಆ ಪ್ರಕ್ರಿಯೆಯನ್ನು ಸಾಧ್ಯವಾಗಿಸುತ್ತದೆ, ಜನರು ಮತ್ತು ಸರ್ಕಾರದ ನಡುವೆ ಶಾಶ್ವತ ಸಂವಹನವಾಗಿ ಕಾರ್ಯನಿರ್ವಹಿಸುತ್ತದೆ. ರಾಜಕೀಯ ಸಲಹೆಗಾರರು ಆ ವಿಧಾನಗಳನ್ನು ದುರ್ಬಲಗೊಳಿಸಿದರೆ, ಭಾರತೀಯ ಪ್ರಜಾಪ್ರಭುತ್ವಕ್ಕೆ ಅದಕ್ಕಿಂತ ಕೆಟ್ಟ ಸುದ್ದಿ ಇನ್ನೇನಿದೆ?.