ಹೊಸ ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮದ ವಿಚಾರ ಸಾಕಷ್ಟು ವಿವಾದಗಳಿಂದ ಕೂಡಿದೆ. ಒಂದು ಕಡೆ 19 ವಿರೋಧ ಪಕ್ಷಗಳು ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿದ್ರೆ, ಮತ್ತೊಂದು ಕಡೆ ಹೊಸ ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮಕ್ಕೆ ವ್ಯಾಪಕ ಬೆಂಬಲಗಳು ಕೂಡ ವ್ಯಕ್ತವಾಗ್ತಾ ಇದೆ.
ಇದರ ನಡುವೆ ಇನ್ನು ಕೆಲವೊಂದುಷ್ಟು ವಿರೋಧ ಪಕ್ಷಗಳು ನೂತನ ಸಂಸತ್ ಭವನದ ಉದ್ಘಾಟನೆಗೆ ಬೆಂಬಲ ವ್ಯಕ್ತಪಡಿಸಿದ್ದು ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಾ ಇದ್ದಾರೆ ಹೀಗಾಗಿ ಕೆಲವೊಂದು ವಿರೋಧ ಪಕ್ಷಗಳು ನೂತನ ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮಕ್ಕೆ ಭಾಗಿಯಾಗುವುದು ಖಚಿತವಾಗಿದೆ.
ಆದರೆ ಈಗಾಗಲೇ ಬಹಿಷ್ಕರಿಸಿರುವ ದೇಶದ ಪ್ರಮುಖ 19 ವಿರೋಧ ಪಕ್ಷಗಳು ನೂತನ ಸಂಸತ್ ಭವನದ ಉದ್ಘಾಟನೆಗೆ ಶಿಷ್ಟಾಚಾರ ಪಾಲನೆಯಾಗಿಲ್ಲ ಅದರಲ್ಲೂ ರಾಷ್ಟ್ರಪತಿಗಳಿಂದ ಸಂಸತ್ ಭವನದ ಉದ್ಘಾಟನೆಯಾಗಬೇಕು ಪ್ರಧಾನಿಗಳಿಂದ ಅಲ್ಲ ಪ್ರಧಾನಿಗಳು ನೂತನ ಸಂಸತ್ ಭವನವನ್ನ ಉದ್ಘಾಟನೆ ಮಾಡುವುದಾದರೆ ರಾಷ್ಟ್ರಪತಿ ಹುದ್ದೆಗೆ ಮಾಡುವ ಅಪಮಾನವಾಗಿರುತ್ತೆ ಹಾಗಾಗಿ ರಾಷ್ಟ್ರಪತಿವರಿಂದಲೇ ಉದ್ಘಾಟನೆ ಮಾಡಿಸುವುದು ಸೂಕ್ತ ಎಂಬ ಸಲಹೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದವು ಆದರೆ ಪ್ರಮುಖ ವಿರೋಧ ಪಕ್ಷಗಳ ಸಲಹೆಯನ್ನ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಿತ್ತು. ಇದೇ ಕಾರಣದಿಂದಾಗಿ ಇದೀಗ ಪ್ರಮುಖ ವಿರೋಧ ಪಕ್ಷಗಳು ನೂತನ ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮದಿಂದ ಹಿಂದೆ ಸೆರೆದಿವೆ ಇದು ಕೇಂದ್ರ ಸರ್ಕಾರವನ್ನ ಮುಜುಗರಕ್ಕೆ ಸಿಲುಕಿಸಿದೆ ಹೀಗಾಗಿ ಇದೀಗ ಕೇಂದ್ರದ ನಾಯಕರುಗಳು ಮಾಧ್ಯಮದ ಮುಂದೆ ಹೊಸ ಹೇಳಿಕೆಗಳನ್ನ ಕೊಡಲು ಮುಂದಾಗುತ್ತಿದ್ದಾರೆ.
ಇಂತಹ ನಾಯಕರಲ್ಲಿ ಇದೀಗ ವಿದೇಶಾಂಗ ಸಚಿವ ಜಯಶಂಕರ್ ವಿರೋಧ ಪಕ್ಷಗಳ ನಡೆಯನ್ನ ಟೀಕೆ ಮಾಡಿದ್ದು ನೂತನ ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮ ಪ್ರಜಾಪ್ರಭುತ್ವದ ಹಬ್ಬವಾಗಿದೆ, ರಾಜಕೀಯ ಮಾಡುವುದರಲ್ಲೂ ಇತಿಮಿತಿಗಳಿವೆ ಎಲ್ಲದರಲ್ಲೂ ಅಲ್ಲ, ನಾವೆಲ್ಲರೂ ಹೊಸ ಸಂಸತ್ ಭವನದ ಉದ್ಘಾಟನೆಯನ್ನು ಒಟ್ಟಾಗಿ ಸಂಭ್ರಮಿಸಬೇಕಿದೆ ಅಂತ ಹೇಳಿಕೆಯನ್ನು ನೀಡಿದ್ದಾರೆ. ಇದೀಗ ಜೈ ಶಂಕರ್ ಅವರ ಈ ಹೇಳಿಕೆಗೆ ವಿರೋಧ ಪಕ್ಷಗಳಿಂದ ಯಾವ ರೀತಿಯಾದ ಪ್ರತಿಕ್ರಿಯೆ ಬರಲಿದೆ ಅನ್ನೋದನ್ನ ಇನ್ನಷ್ಟೇ ಕಾದು ನೋಡಬೇಕಿದೆ