ನಾಲ್ಕು ಜಿಲ್ಲೆ ಹಾಗೂ ಮೂರು ರಾಜ್ಯಗಳ ರೈತರ ಜೀವನಾಡಿ ತುಂಗಾಭದ್ರ ಜಲಾಶಯದ ಒಡಲಲ್ಲಿ ನೀರು ಬತ್ತಿದೆ. ಇದರಿಂದ ಕುಡಿಯುವ ಹಾಗೂ ರೈತರ ಬೆಳೆಗೆ ನೀರು ಹರಿಸಲು ಸಮಸ್ಯೆ ತಲೆದೂರಿದ್ದು, ಅನಧಿಕೃತವಾಗಿ ಕಾರ್ಖಾನೆಗಳಿಗೆ ಸರಬರಾಜು ಆಗುತ್ತಿದ್ದ ನೀರಿಗೆ ಒಂದಡೆ ಕಡಿವಾಣ ಹಾಕಿದ್ರೆ, ಇನ್ನೊಂದಡೆ ಕಾರ್ಖಾನೆಗಳಿಗೆ ನೀರು ಸರಬರಾಜು ಬಂದ್ ಮಾಡಿದ್ದು, ರೈತರಿಗೆ ನೀರು ಹರಿಸಲಾಗುತ್ತಿದೆ.
ಕೊಪ್ಪಳ, ರಾಯಚೂರು, ಹೊಸಪೇಟೆ, ಬಳ್ಳಾರಿ ಜಿಲ್ಲೆ ಹಾಗೂ ಆಂಧ್ರ, ತೆಲಂಗಾಣ ರಾಜ್ಯಗಳ ಜೀವನಾಡಿ ಕೊಪ್ಪಳದ ಮುನಿರಾಬಾದ್ ನ ತುಂಗಾಭದ್ರ ಜಲಾಶಯದಲ್ಲಿ ಬಿಸಿಲಿನ ತಾಪಕ್ಕೆ ನೀರು ಬತ್ತಿದೆ. ಇನ್ನೊಂದಡೆ ಸುಮಾರು 30 ಟಿಎಂಸಿ ಹೂಳು ತುಂಬಿರುವುದರಿಂದ ನೀರಿ ಪ್ರಮಾಣ ಕೂಡ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇದರಿಂದ ಪ್ರತಿವರ್ಷ ಬೇಸಿಗೆಯಲ್ಲಿ ರೈತರ ಎರಡನೇ ಬೆಳೆಗೆ ನೀರಿನ ಸಮಸ್ಯೆ ತಲೆದೂರುತ್ತದೆ. ಇನ್ನೊಂದಡೆ ಕಾರ್ಖಾನೆಗಳಿಗೆ ಅನಧಿಕೃತವಾಗಿ ನೀರು ಸರಬರಾಜಿನಿಂದಲೂ ನೀರಿನ ಸಮಸ್ಯೆಯಗುತ್ತಿತ್ತು. ಹಾಗಾಗಿ ರೈತರ ಹಿತದೃಷ್ಟಿಯಿಂದ ಟಿಬಿ ಡ್ಯಾಂ ಅಧಿಕಾರಿಗಳು ಕಾರ್ಖಾನೆಗಳಿಗೆ ನೀರು ಸರಬರಾಜು ಕಡಿತಗೊಳಿಸಿ, ರೈತರ ಬೆಳೆಗೆ ನೀರು ಹರಿಸುತ್ತಿದ್ದಾರೆ. ಇದರಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ನೀರಿನ ಸಮಸ್ಯೆ ಎದುರಾಗಿದೆ.

ರೈತರಿಗೆ ಅನುಕೂಲವಾಗಲಿ ಎಂದು ಮೂರು ತಿಂಗಳಿನಿಂದ ಕಾರ್ಖಾನೆಗಳಿಗೆ ನೀರು ಸರಬರಾಜು ಮಾಡುತ್ತಿಲ್ಲ. ಈ ಹಿನ್ನೆಲೆ 50% ಆದ್ರೂ ನೀರು ಸರಬರಾಜು ಮಾಡಲು ಕಾರ್ಖಾನೆಗಳು ಟಿಬಿ ಡ್ಯಾಂ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ. ಕಾರಣ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಕೆಲ ಹಳ್ಳಿಗೆ ಕಾರ್ಖಾನೆಗಳಿಂದ ಕುಡಿಯುವ ನೀರು ಸರಬರಾಜು ಆಗುತ್ತಿರುವ ಹಿನ್ನೆಲೆ ಕಾರ್ಖಾನೆಯ ಆಡಳಿತ ಮಂಡಳಿ ನೀರು ಬಿಡಲು ಟಿಬಿ ಡ್ಯಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಆದರೆ ಟಿಬಿ ಡ್ಯಾಂ ಅಧೀಕ್ಷಕ ಅಭಿಯಂತರ ಎಲ್.ಬಸವರಾಜ್ ಮಾತ್ರ ರೈತರ ಬೆಳೆಗೆ ನೀರಿನ ಸಮಸ್ಯೆ ಇರುವುದರಿಂದ ಕಾರ್ಖಾನೆಗಳಿಗೆ ನೀರು ಹರಿಸಲು ಸಮಸ್ಯೆಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.