ಭೀಕರ ಅಪಘಾತ ಸಂಭವಿಸಿದ್ದು, ಮದುವೆ ಮನೆಗೆ ಹೊರಟಿದ್ದ ವರ ಬಲಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ಉತ್ತರ ಪ್ರದೇಶ(Uttar Pradesh)ದ ಝಾನ್ಸಿಯಲ್ಲಿ ನಡೆದಿದೆ. ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ. ಅಲ್ಲದೇ, ಘಟನೆಯಲ್ಲಿ ವರ ಸೇರಿದಂತೆ ನಾಲ್ಕು ಜನ ಸಾವನ್ನಪ್ಪಿದ್ದಾರೆ. ಕಾರಿನಲ್ಲಿ ಮದುವೆ ಮನೆಗೆ ವರ ಹೊರಟಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇನ್ನೇನು ಕೆಲವೇ ನಿಮಿಷಗಳಲ್ಲಿ ಸಪ್ತಪದಿ ತುಳಿಯಬೇಕಿದ್ದ ಪ್ರಕಾಶ್ ಇಹಲೋಕ ತ್ಯಜಿಸಿದ್ದಾರೆ.
ಇನ್ನೇನು ಕೇವಲ 10 ಕಿ.ಮೀ ಸಾಗಿದ್ದರೆ ವರನು ವಧುವಿನ ಮನೆ ಸೇರುತ್ತಿದ್ದ. ಆದರೆ, ಮದುವೆ ಮೆರವಣಿಗೆಯ ಹತ್ತಿರ ಹೋಗುವಾಗ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ. ಕಾರು ರಭಸವಾಗಿ ಡಿಕ್ಕಿಯಾಗುತ್ತಿದ್ದಂತೆ ಕಾರಿನ ಸಿಎನ್ಜಿ ಟ್ಯಾಂಕ್ಗೆ ಬೆಂಕಿ ತಗುಲಿ ಸ್ಫೋಟಗೊಂಡಿದೆ. ಕಾರಿನಲ್ಲಿ ಸಿಲುಕಿದ್ದ ಆಕಾಶ್ ಅಹಿರ್ವಾರ್ (25), ಅವರ ಸಹೋದರ ಆಶಿಶ್ (20), 7 ವರ್ಷದ ಸೋದರಳಿಯ ಮತ್ತು ಚಾಲಕ ಜೈಕರನ್ ಸುಟ್ಟು ಕರಕಲಾಗಿದ್ದಾರೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಅಪಘಾತ ನಡೆಯುತ್ತಿದ್ದಂತೆ ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.