ಇಂದು ಹನಿಟ್ರ್ಯಾಪ್ (Honey trap) ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಕೆ ಎನ್ ರಾಜಣ್ಣ (KN Rajanna) ಮತ್ತೊಂದು ಸ್ಫೋಟಕ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ.ಈ ಬಗ್ಗೆ ಇಂದು ತಮಕೂರಿನಲ್ಲಿ ಈ ಬಗ್ಗೆ ಮಾತನಾಡಿದ ರಾಜಣ್ಣ, ತಮ್ಮನ್ನು ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ (Blue jeans) ತೊಟ್ಟ ಹುಡುಗಿ ಬಂದಿದ್ದಳು ಎಂದಿದ್ದಾರೆ.

ಈ ರೀತಿ ಒಂದಲ್ಲ..ಸುಮಾರು ಎರಡು ಬಾರಿ ಹುಡುಗಿಯರು ಬಂದಿದ್ದರು.ಆದ್ರೆ ಪ್ರತಿ ಬಾರಿಯೂ ಬೇರೆ ಬೇರೆ ಹುಡುಗಿಯರು ಬಂದಿದ್ದರು.ಮೊದಲಿಗೆ ತಾನೊಬ್ಬ ಲಾಯರ್ ಎಂದು ಆಕೆ ಹೇಳಿಕೊಂಡಿರಲಿಲ್ಲ ಎಂದು ಸ್ಫೋಟಕ ಮಾಹಿತಿ ಹೊರಗೆಡವಿದ್ದಾರೆ.

ಇನ್ನು 2ನೇ ಬಾರಿ ಬಂದ ಯುವತಿ ಕೂಡ ತಾನು ಓರ್ವ ಹೈಕೋರ್ಟ್ ಲಾಯರ್ ಅಂತ ಹೇಳಿಕೊಂಡು ನನ್ನ ಬಳಿಗೆ ಬಂದಿದ್ದಳು.ಇದು ನನ್ನ ಗಮನಕ್ಕೆ ಬಂದಿತ್ತು. ಈ ಬಗ್ಗೆ ಗೃಹ ಸಚಿವರಿಗೆ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ.






