ಒಬ್ಬ ವ್ಯಕ್ತಿಯನ್ನು ಹನಿಟ್ರ್ಯಾಪ್ (Honey trap) ಯಾರಿಂದಲೂ ಮಾಡಲು ಆಗುವುದಿಲ್ಲ ಅಥವಾ ಮಾಡಿಸಲು ಆಗುವುದಿಲ್ಲ. ನಾವು ಮಾಡುವ ತಪ್ಪಿಗೆ ನಾವೇ ಜವಾಬ್ದಾರರು ಹೊರತು ಯಾರೋ ಮಾಡಿಸಿದ್ದಾರೆ ಎನ್ನುವುದು ತಪ್ಪು ಎಂದು ಕಾರವಾರದಲ್ಲಿ ಸಚಿವ ಮಂಕಾಳ ವೈದ್ಯ (Mankala Vaidya) ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮೀನುಗಾರಿಕೆ ಬಂದರು ಸಚಿವ ಮಂಕಾಳ ವೈದ್ಯ ಈ ಬಗ್ಗೆ ಮಾತನಾಡಿದ್ದು,ಯಾರನ್ನಾದರು ಕರೆದುಕೊಂಡು ಹೋಗಿ ಟ್ರ್ಯಾಪ್ ಮಾಡಲು ಸಾದ್ಯವೇ..? ನಮ್ಮ ತಪ್ಪನ್ನ ನಾವು ಒಪ್ಪಿಕೊಳ್ಳಬೇಕಲ್ಲ ಎಂದಿದ್ದಾರೆ.

ನಾವು ಮಾತನಾಡುವ ಮೊದಲು ಯೋಚನೆ ಮಾಡಿ ಮಾತನಾಡಬೇಕಿತ್ತು. ಹನಿಟ್ರ್ಯಾಪ್ ಆಗಿದೆ ಅಂತಾದ್ರೆ ಯಾರು ಆಗಿದ್ದಾರೋ ಅವರಷ್ಟು ತಪ್ಪು ಯಾರು ಮಾಡಿಲ್ಲ ಏಂದಾಗುತ್ತದೆ.ಯತ್ನಾಳ್ ಹಿರಿಯ ಶಾಸಕರು, ಯಾರೇ ಚೀಟಿ ಕೊಟ್ಟರು ಅವರಿಗೆ ಬುದ್ದಿ ಇಲ್ಲವಾ ಎಂದು ಟೀಕಿಸಿದ್ದಾರೆ.
ಇವೆಲ್ಲಾ ಡ್ರಾಮ, ಅವರ ಮೇಲೆ ಇವರು ಇವರ ಮೇಲೆ ಹಾಕುತ್ತಿದ್ದಾರೆ.ಚೀಟಿ ಕೊಡುವ ಮುಂಚೆ ಅವರಿಗೆ ಗೊತ್ತಿರಲಿಲ್ಲವೇ..? ಅವರದ್ದೆ ಪಕ್ಷದ ಹಲವರು ಸ್ಟೇ ತಂದಿದ್ದಾರೆ ಯಾಕೆ..?ಅದು ಹನಿ ಟ್ರ್ಯಾಪ್ ಅಲ್ಲವೇ ? ಸದನದಲ್ಲಿ ಈ ವಿಚಾರ ಮಾತನಾಡಬಾರದಿತ್ತು.
ಈ ವಿಚಾರ ಮಾದ್ಯಮದವರು, ಸಚಿವರು, ಎಲ್ಲರೂ ಬಿಡಬೇಕು, ಆಗ ಮಾತ್ರ ನಮಗೆ ಸಮಾಜದಲ್ಲಿ ಗೌರವ ಇರುತ್ತದೆ ಎಂದಿದ್ದಾರೆ.