ರಾಜ್ಯ ಕಾಂಗ್ರೆಸ್ ಸರ್ಕಾರ ಬಿಜೆಪಿ ವಿರುದ್ಧ ಹಲವು ಆರೋಪಗಳನ್ನ ಕಳೆದ ಹಲವು ದಿನಗಳಿಂದ ಮಾಡಿಕೊಂಡು ಬರುತ್ತಿದೆ. ಈಗ ಬಿಜೆಪಿ ಮತ್ತು SDPI ಕುರಿತು ಕಾಂಗ್ರೆಸ್ ವಿಡಿಯೋ ತುಣುಕೊಂದನ್ನ ಬಳಸಿಕೊಂಡು ಸ್ಪೋಟಕ ಹಾಗೂ ಅಚ್ಚರಿಯ ಟ್ವಿಟ್ ಮಾಡಿದೆ, ಇದು ಸಾಮಾಜಿಕ ಜಾಲತಾಣದಲ್ಲಿ ಎಡ-ಬಲ ಪಂತದ ನಡುವೆ ಹಲವು ಚರ್ಚೆಯನ್ನ ಹುಟ್ಟು ಹಾಕಿದೆ.
ಕಾಂಗ್ರೆಸ್ ತನ್ನ ಟ್ವಿಟ್ನಲ್ಲಿ “ಬಿಜೆಪಿ ಹಾಗೂ SDPI ನಡುವಿನ ಚಡ್ಡಿ ದೋಸ್ತಿ ತುಂಬಾ ಹಿಂದಿನಿಂದಲೂ ಇದೆ, ಬಿಜೆಪಿ SDPI ಗೆ ಫಂಡಿಂಗ್ ಮಾಡುತ್ತಿದೆ ಎಂಬುದನ್ನು ಹಿಂದೂ ಮುಖಂಡ ಸತ್ಯಜಿತ್ ಸೂರತ್ಕಲ್ ತುಂಬಾ ಹಿಂದೆಯೇ ಬಹಿರಂಗಪಡಿಸಿದ್ದರು, ಈಗ ತಲಪಾಡಿ ಗ್ರಾ.ಪಂ ಅಧ್ಯಕ್ಷರ ಆಯ್ಕೆಯಲ್ಲಿ ಅವರ ಹೇಳಿಕೆಗೆ ಪುಷ್ಟಿ ಸಿಕ್ಕಿದೆ. ಎಲ್ಲಾ ಬಗೆಯ ಮತೀಯವಾದಿಗಳ ಹಿಂದೆ ಬಿಜೆಪಿಯೇ ಇದೆ ಎಂಬುದಕ್ಕೆ ಇದೇ ಸಾಕ್ಷಿ. ಎದುರಿಗೆ ಪಾಕಿಸ್ಥಾನಕ್ಕೆ ಕೈ ತೋರಿ, ಹಿಂಬದಿಯಲ್ಲಿ ಪಾಕಿಸ್ತಾನಕ್ಕೆ ಹೋಗಿ ಗಿಫ್ಟ್ ಕೊಟ್ಟು ಬರುವ ತಮ್ಮ ಗುರುವಿನ ದಾರಿಯಲ್ಲೇ @BJP4Karnataka ಸಾಗುತ್ತಿದೆ.” ಎಂದು ಬರೆದುಕೊಂಡಿದೆ.
ಈಗ ಈ ಟ್ವಿಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಕೆ,ಜೆ ಹಳ್ಳಿ, ಡಿ.ಜೆ ಹಳ್ಳಿಯ ವಿಚಾರದಲ್ಲೂ ಬಿಜೆಪಿಯ ಕೈವಾಡ ಇರಬಹುದು ಎಂದು ಹಲವರು ವಿಚಿತ್ರವಾದ ಆರೋಪಗಳನ್ನ ಮಾಡುತ್ತಿದ್ದಾರೆ. ಸದ್ಯಕ್ಕೆ ಇದೀಗ ಕಾಂಗ್ರೆಸ್ ಟ್ವಿಟ್ ಬಿಜೆಪಿ ನಾಯಕರನ್ನ ಮುಜುಗರಕ್ಕೆ ಸಿಲುಕಿಸಿರೋದಂತು ಸುಳ್ಳಲ್ಲ. ಹಾಗಾಗಿ ಈ ವಿಚಾರದ ಕುರಿತು ಮುಂದಿನ ದಿನಗಳಲ್ಲಿ ಬಿಜೆಪಿ ಯಾವ ರೀತಿಯಾದ ಪ್ರತಿಕ್ರಿಯೆಯನ್ನ ಕೊಡುತ್ತೆ ಅಂತ ಕಾದು ನೋಡ ಬೇಕಾಗಿದೆ.