ಬೆಂಗಳೂರು : ನಾವೆಲ್ಲರೂ ಸಿಎಂ ಪರ ನಿಲ್ಲಲು ಸರ್ವಾನುಮತದಿಂದ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಕ್ತಾಯದ ಬಳಿಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ-ಜೆಡಿಎಸ್ನಿಂದ ಸರ್ಕಾರ ಬೀಳಿಸುವ ಪ್ರಯತ್ನ ನಡೆದಿದೆ ಎಂದು ಮಾತು ಮುಂದುವರಿಸಿ… ನಾವು ರಾಜ್ಯಪಾಲರಿಗೆ ಸಂದೇಶ ಕೊಟ್ಟಿದ್ದೇವೆ.
ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ಕಾನೂನು ಪ್ರಕಾರವಾಗಿಲ್ಲ.ಅದನ್ನು ಹಿಂಪಡೆಯುವಂತೆ ಕಾನೂನು ಚೌಕಟ್ಟಿನಲ್ಲೇ ಕೇಳಿದ್ದೇವೆ.ಕಾನೂನು ಹೋರಾಟದಲ್ಲಿ ಅವರಿಗೆ ಮುಖಭಂಗವಾಗದಿರಲಿ ಅಂತಾ ಕಾನೂನು ಪ್ರಕಾರ ಕೋರಿದ್ದೇವೆ. ಪ್ರಾಸಿಕ್ಯೂಷನ್ ಗೆ ನೀಡಿರುವ ಅನುಮತಿ ಹಿಂಪಡೆದಿದ್ದಲ್ಲಿ ನಾವೂ ಸಹ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರೇ ನಮ್ಮ ನಾಯಕರಾಗಿದ್ದು, ಇಡೀ ಪಕ್ಷ ಹಾಗೂ ರಾಜ್ಯದ ಜನ ಸಿಎಂ ಪರ ಹೋರಾಟ ಮಾಡುತ್ತಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ನಮ್ಮ ಸರ್ಕಾರವು ಜನಪರ ಕೆಲಸ ಮಾಡುತ್ತಿದೆ. ಇದನ್ನು ಸಹಿಸದ ಬಿಜೆಪಿ-ಜೆಡಿಎಸ್ ನವರು ಸರ್ಕಾರ ಬೀಳಿಸುವ ಪ್ರಯತ್ನಿಸುತ್ತಿದ್ದು, ಅವರ ಕೆಲಸ ವಿಫಲವಾಗಲಿದೆ ಎಂದರು.
ರಾಜ್ಯಪಾಲರು ಸರಿಯಾದ ತನಿಖೆ ನಡೆಸದೇ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿರುವುದು ಖಂಡನೀಯ ಎಂದು ಸಭೆಯಲ್ಲಿ ನಿರ್ಧರಿಸಿದ್ದೇವೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದ್ದಲ್ಲದೇ, ರಾಜ್ಯಪಾಲರ ನಡೆಗೆ ಸರ್ವಾನುಪಾತದಿಂದ ಖಂಡನೆ ವ್ಯಕ್ತಪಡಿಸಿದ್ದೇವೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಹಿರಿಯ ಸಚಿವರಾದ ಆರ್.ವಿ.ದೇಶಪಾಂಟೆ, ಕೆ.ಹೆಚ್.ಮುನಿಯಪ್ಪ ಇತರರಿದ್ದರು.