ಮಂಗಳೂರು : ಕರಾವಳಿ ಅದರಲ್ಲೂ ವಿಶೇಷವಾಗಿ ತುಳುನಾಡಿನ ಭಾಗಗಳಲ್ಲಿ ದೈವ ನರ್ತನ, ಭೂತಕೋಲಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ. ಆದರೆ ಇಂದು ತುಳುನಾಡಿನಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದೈವ ನರ್ತಕರೊಬ್ಬರು ಸಾವನ್ನಪ್ಪಿದ ಘಟನೆಯು ದಕ್ಷಿಣ ಕನ್ನಡ ಜಿಲ್ಲೆ ಕಡಬ ಸಮೀಪದ ಎಡಮಂಗಲ ಗ್ರಾಮದಲ್ಲಿ ಸಂಭವಿಸಿದೆ.
ಈ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದ ಕಾಂತು ಅಜಿಲ ಮೂಲಂಗೀರಿ ಮೃತಪಟ್ಟ ದುರ್ದೈವಿ. ಕಾಂತು ಅಜಿಲ ಎಡಮಂಗಲದ ವಿವಿಧ ಭಾಗಗಳಲ್ಲಿ ದೈವಾರಾಧಕಾರಿ ಗ್ರಾಮದೈವಗಳ ಪರಿಚಾರಕಾರಿ ಹೆಸರುವಾಸಿಯಾಗಿದ್ದರು ಎನ್ನಲಾಗಿದೆ.

ಎಡಮಂಗಲದ ಇಡ್ಯಡ್ಕ ಎಂಬ ಗ್ರಾಮಕ್ಕೆ ಸಂಬಂಧಪಟ್ಟಂತೆ ನೇಮೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಲ್ಲಿ ಕಾಂತು ಅಜಿಲ ಮೂಲಂಗೀರಿ ದೈವ ನರ್ತನ ಮಾಡುತ್ತಿದ್ದರು. ದೈವ ನರ್ತನ ಮಾಡುತ್ತಿದ್ದಾಗಲೇ ಕಾಂತು ಅಜಿಲ ಮೂಲಂಗಿರಿ ಕುಸಿದುಬಿದ್ದಿದ್ದು ಅಲ್ಲೇ ಸಾವನ್ನಪ್ಪಿದ್ದಾರೆ. ಕುಸಿದು ಬಿದ್ದ ಕಾಂತುರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯ್ತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಾಂತು ಅಜಿಲ ಮೂಲಂಗಿರಿ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.