• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ʻಗುರುದೇವ್‌ ಹೊಯ್ಸಳʼನಾದ ಡಾಲಿ… ನಟ ರಾಕ್ಷಸನ ಆಕ್ಟಿಂಗ್‌ಗೆ ಫ್ಯಾನ್ಸ್‌ ಫಿದಾ..!

Any Mind by Any Mind
March 30, 2023
in ಸಿನಿಮಾ
0
ʻಗುರುದೇವ್‌ ಹೊಯ್ಸಳʼನಾದ ಡಾಲಿ… ನಟ ರಾಕ್ಷಸನ ಆಕ್ಟಿಂಗ್‌ಗೆ ಫ್ಯಾನ್ಸ್‌ ಫಿದಾ..!
Share on WhatsAppShare on FacebookShare on Telegram

ʻಹೊಯ್ಸಳʼ ಅಂತಾನೇ ಖ್ಯಾತಿ ಪಡೆದಿರೋ ʻಗುರುದೇವ್‌,ʼ ಖಾಕಿ ತೊಟ್ಟಿರುವ ಖಡಕ್‌ ಪೊಲೀಸ್‌ ಅಧಿಕಾರಿ. ಎಲ್ರಿಗೂ ಮೂಗಿನ ಮೇಲೆ ಕೋಪ ಇದ್ರೆ, ಈತನಿಗೆ ನಾಲಿಗೆ ತುದಿಯಲ್ಲೇ ಕೋಪ. ಎದುರಾಳಿಗೆ ಮಾತಲ್ಲೇ ಪಂಚ್‌ ಕೊಡೋ ಸೂಪರ್‌ ಕಾಪ್‌.. ಏನೇ ಬಂದ್ರೂ, ಯಾರೇ ಎದುರಾದ್ರೂ ಮುನ್ನುಗ್ಗುವ ಸಿಂಗಲ್‌ ಪಡೆಯೇ ʻಗುರುದೇವ್‌ ಹೊಯ್ಸಳʼ. ಕರ್ತವ್ಯ ಅಂತ ಬಂದ್ರೆ ಪ್ರಾಣ ಬೇಕಾದ್ರೂ ಪಣಕ್ಕಿಡುವ ನಾಯಕ.

ADVERTISEMENT

ಮರಳು ಮಾಫಿಯಾ ದಂಧೆಯನ್ನ ಬಯಲಿಗೆಳೆದು, ಪ್ರತಿಕೋದ್ಯಮ ಅಂದ್ರೆ ಏನು ಅಂತ ಮಾಧ್ಯಮದವರಿಗೆ ತಿಳಿಸಿಕೊಡುವ ಗುರುದೇವ್‌, ನಾವು ಅನಾಥರು ಅಂತ ಹೇಳ್ಕೊಂಡು ಬಂದ ಪ್ರೇಮಿಗಳಿಗೆ ಮದುವೆ ಮಾಡಿಸಿ ಸಂಕಷ್ಟದಲ್ಲಿ ಸಿಲುಕಿಕೊಳ್ತಾನೆ.  ತನ್ನ ಮಗಳನ್ನ ಬೇರೆ ಜಾತಿ ಯುವಕನಿಗೆ ಕೊಟ್ಟು ಮದುವೆ ಮಾಡಿಸಿದ ಅನ್ನೋ ಕಾರಣಕ್ಕೆ, ಗುರುದೇವ್‌ ಮೇಲೆ ದ್ವೇಷ ಕಟ್ಟಿಕೊಳ್ಳುವ ಖಳನಾಯಕ.. ತಾನು ಪ್ರೀತಿಸಿದ ಹುಡುಗಿಯನ್ನ ಬೇರೊಬ್ಬನಿಗೆ ಮದುವೆ ಮಾಡಿಸಿದ ಅಂತ ಖಾಕಿಯನ್ನೇ ಎದುರುಹಾಕಿಕೊಳ್ಳುವ ಮತ್ತೊಬ್ಬ ಖಳನಾಯಕ.. ತಾನೇ ನಿಂತು ಮದುವೆ ಮಾಡಿಸಿದ ಯುವತಿ ಸಂಕಷ್ಟದಲ್ಲಿದ್ದಾಳೆ ಅಂತ ಗೊತ್ತಾದಾಗ, ಆಕೆಯ ಹುಡುಕ್ಕಾಟಕ್ಕಿಳಿಯೋ ಗುರುದೇವ್‌ಗೆ ಎದುರಾಗ್ತಾನೆ ಬಲಿ.

ಜಾತಿಗೆ ಹೆದರಿ ಊರು ಬಿಟ್ಟು, ಊರೂರು ಅಲೆದು ಬದುಕು ಕಟ್ಟಿಕೊಳ್ಳಬೇಕು ಅಂದುಕೊಂಡಿದ್ದ ಪ್ರೇಮಿಗಳಿಗೆ ಭರವಸೆ ನೀಡುವ ಗುರುದೇವ್‌, ಅವರನ್ನ ಕಾಪಾಡುವುದಲ್ಲಿ ವಿಫಲನಾಗುತ್ತಾನೆ. ಜಾತಿಗೋಸ್ಕರ ಹೆತ್ತ ಮಗಳನ್ನ ಬೇಕಾದ್ರೂ ತುಳಿದು ಸಾಯಿಸುವ ಖಳನಾಯಕನಿಗೆ ತಕ್ಕ ಪಾಠ ಕಲಿಸುತ್ತಾನೆ ಗುರುದೇವ್‌. ಮತ್ತೊಂದೆಡೆ ಪ್ರಾಣಿಗಳನ್ನ ಅಟ್ಟಾಡಿಸಿಕೊಂಡು ಬೇಟೆಯಾಡುವ ಬಲಿ, ತನ್ನ ಪ್ರಾಣ ಸ್ನೇಹಿತನನ್ನ ಕೊಂದಿದ್ದಕ್ಕೆ ಗುರುದೇವ್‌ನನ್ನು ಬೇಟೆಯಾಡಲು ಹೊಂಚು ಹಾಕುತ್ತಿರ್ತಾನೆ. ಪೊಲೀಸ್‌ ಅಂದ್ರೆ ಸಿಎಂ ಅನ್ನೋ ಕಾಮನ್‌ ಮ್ಯಾನ್‌ನಿಂದ ಹಿಡಿದು, ಸಿಎಂ ಅನ್ನೋ ಚೀಫ್‌ ಮಿನಿಸ್ಟರ್‌ವರೆಗೂ ಬೇಕೇ ಬೇಕು ಅಂತ ಪೊಲೀಸರ ಪ್ರಾಮುಖ್ಯತೆಯನ್ನ ತಿಳಿಸಿಕೊಡುವ ಗುರುದೇವ್‌, ಕೋರ್ಟ್‌ನಲ್ಲಿ ನ್ಯಾಯ ಸಿಗದೇ ಇದ್ರೂ, ಬಡವರಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗುತ್ತಾನೆ..

ಇದು ಗುರುದೇವ್‌ ಹೊಯ್ಸಳ ಚಿತ್ರದ ಸಾರಾಂಶ.. ಡಾಲಿ ಧನಂಜಯ್‌ ಖಂಡಿತವಾಗಿಯೂ ನಟರಾಕ್ಷಸನೇ ಅನ್ನೋದಕ್ಕೆ ʻಗುರುದೇವ್‌ ಹೊಯ್ಸಳʼ ಸಿನಿಮಾ ಸಾಕ್ಷಿ. ತಮ್ಮ ಮ್ಯಾನರಿಸಂ, ಪಂಚ್‌ ಡೈಲಾಗ್‌ಗಳಿಂದಲೇ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳೋ ಧನಂಜಯ್‌, ಆಕ್ಷನ್‌, ಫೈಟ್‌ ಮೂಲಕ ಮತ್ತಷ್ಟು ಗಮನ ಸೆಳೆದಿದ್ದಾರೆ. ಇನ್ನು ಚಿತ್ರದಲ್ಲಿ ಬರುವ ನಾಯಕಿಯ ಪಾತ್ರ ಕಡಿಮೆ ಅನಿಸಿದ್ರೂ, ನಾಯಕನಿಗೆ ಮಡದಿಯಾಗಿ ಕೊಟ್ಟಿರುವ ಪಾತ್ರವನ್ನ ಅಚ್ಚುಕಟ್ಟಾಗಿ ಮಾಡಿದ್ದಾರೆ ನಟಿ ಅಮೃತಾ ಅಯ್ಯಂಗಾರ್‌.

ʻಗುರುದೇವ್‌ ಹೊಯ್ಸಳʼ ಸಿನಿಮಾದಲ್ಲಿ ಮೂವರು ಖಳನಾಯಕರಿದ್ದರೂ ನೆನಪಿನಲ್ಲಿ ಉಳಿದುಕೊಳ್ಳುವುದು ʻಬಲಿʼ ಎಂಬ ಪಾತ್ರ. ಬಲಿ ಪಾತ್ರದಲ್ಲಿ ನಟ ನವೀನ್‌ ಕಾಣಿಸಿಕೊಂಡಿದ್ದು, ಉತ್ತಮ ನಟನೆಯ ಮೂಲಕ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ತೆರೆಗೆ ಬಂದಿರುವ ಮತ್ತೊಂದು ಅದ್ಭುತ ಸಿನಿಮಾ ʻಗುರುದೇವ್‌ ಹೊಯ್ಸಳʼ ಅಂದ್ರೆ ತಪ್ಪಾಗಲಿಕ್ಕಿಲ್ಲ.. ಎಲ್ಲರೂ ಥಿಯೇಟರ್‌ನಲ್ಲೇ ಹೋಗಿ ಸಿನಿಮಾ ನೋಡಿ.. ಕನ್ನಡ ಚಿತ್ರರಂಗವನ್ನ ಬೆಳೆಸಿ..  

Tags: #sandalwood #kannadafilmindustry #kannada #cinema #gurudevhoysala #dollydhananjay #amrutaayangar #newfilm #review #pratidhvani #pratidhvanidigital #pratidhvaninews
Previous Post

ಜೆಡಿಎಸ್ ಶಾಸಕ ಡಿಸಿ ಗೌರಿ ಶಂಕರ್ ಆಯ್ಕೆ ಅಸಿಂಧು ; ಹೈಕೋರ್ಟ್‌

Next Post

ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದ ದೈವ ನರ್ತಕ ಸಾವು

Related Posts

ವಿಮಾನ ಪ್ರಯಾಣದ ಭಯ ಬಿಚ್ಚಿಟ್ಟ ಆಮೀರ್ ಖಾನ್: “ನನಗೆ ಏನಾದರೂ ಆದ್ರೆ ….
ಸಿನಿಮಾ

ವಿಮಾನ ಪ್ರಯಾಣದ ಭಯ ಬಿಚ್ಚಿಟ್ಟ ಆಮೀರ್ ಖಾನ್: “ನನಗೆ ಏನಾದರೂ ಆದ್ರೆ ….

by ಪ್ರತಿಧ್ವನಿ
May 2, 2026
0

ಬಾಲಿವುಡ್ ನಟ ಆಮೀರ್ ಖಾನ್ ಇತ್ತೀಚೆಗೆ ತಮ್ಮ ವೈಯಕ್ತಿಕ ಭಯದ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದಾರೆ. ಮೊದಲಿನಂತೆ ಅವರ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ ಎಂಬ...

Read moreDetails
ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

May 1, 2026
ಡಾಲಿ ಧನಂಜಯ್ ಮನೆಗೆ ಹೊಸ ಸಂತಸದ ಸುದ್ದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್

ಡಾಲಿ ಧನಂಜಯ್ ಮನೆಗೆ ಹೊಸ ಸಂತಸದ ಸುದ್ದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್

April 29, 2026
‘ಟಾಕ್ಸಿಕ್’ ಮತ್ತೆ ಮುಂದೂಡಿಕೆ: ಜೂನ್ 4 ರಿಲೀಸ್ ರದ್ದು! ಕಾರಣವೇನು?

‘ಟಾಕ್ಸಿಕ್’ ಮತ್ತೆ ಮುಂದೂಡಿಕೆ: ಜೂನ್ 4 ರಿಲೀಸ್ ರದ್ದು! ಕಾರಣವೇನು?

April 29, 2026
ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

ಕಿಚ್ಚ ಸುದೀಪ್ ಗರಂ: ‘ಸೆರಗ ಸರ್ಸೆ’ ವಿವಾದಕ್ಕೆ ತಣ್ಣನೆಯ ಸಂದೇಶ

April 28, 2026
Next Post
ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದ ದೈವ ನರ್ತಕ ಸಾವು

ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದ ದೈವ ನರ್ತಕ ಸಾವು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada