
ಬೀದರ್: ಡ್ಯೂಟಿ ಗೆ ತಡವಾಗಿ ಬಂದಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಕರ್ತವ್ಯ ನಿರತ ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ನಡೆಸಿದ್ದ ಪೊಲೀಸ್ ಪೇದೆಯನ್ನ ಅಮಾನತು ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.

ಇದೇ ಭಾನುವಾರದಂದು ಗ್ರಾಮ ಲೆಕ್ಕಾಧಿಕಾರಿ ಪರೀಕ್ಷಾ ಹಿನ್ನಲೆ ಭದ್ರತೆಗಾಗಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು.
ಆದ್ರೆ 7:30ಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕಿದ್ದ ಪೇದೆ, 9:15ಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹೀಗೆ PC ತಡವಾಗಿ ಕರ್ತವ್ಯಕ್ಕೆ ಹಾಜರಾಗಿದ್ದನ್ನು ಗಮನಿಸಿದ ಪಿಎಸ್‌ಐ ಮಲ್ಲಮ್ಮ, ಏಕೆ ತಡವಾಗಿ ಬಂದೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಹಾರಿಕೆಯ ಉತ್ತರ ನೀಡಿದ ಪೇದೆ ಬೇಕಿದ್ದರೆ ರಜೆ ಎಂದು ಬರೆದುಕೊಳ್ಳಿ ಅಂದಿದ್ದಾನಂತೆ.
ಇದಾದ ಬಳಿಕ ಉಪಾಹಾರ ಸೇವಿಸುವ ಸಂದರ್ಭದಲ್ಲಿ ಮತ್ತೆ ಬಂದು ತಕರಾರು ತೆಗೆದ ಪೇದೆ, ಬೇರೆ ಶೂಗಳನ್ನು ಯಾಕೆ ಧರಿಸಿದ್ದೀರಿ, ನಾನು ಮೇಲಾಧಿಕಾರಿಗಳಿಗೆ ದೂರು ನೀಡುತ್ತೇನೆ ಎಂದು PSI ವಿಡಿಯೋ ಮಾಡಿಕೊಳ್ಳಲು ಮುಂದಾಗಿದ್ದಾನೆ. ಆಗ PSI ಪೇದೆಯ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದಾಗ ಜಗಳ ತಾರಕಕ್ಕೇರಿ PC ಮಹಿಳಾ ಪಿಎಸ್ ಐ ತಲೆಯನ್ನು ಗೋಡೆಗೆ ಗುದ್ದಿ ಹಲ್ಲೆ ಮಾಡಿದ್ದ. ಸದ್ಯ ಪೇದೆಯನ್ನ ಅಮಾನತು ಮಾಡಲಾಗಿದೆ.









