• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

“ವಿದ್ಯಾವಂತರೇ ಜಾತಿ ವ್ಯವಸ್ಥೆ, ಮೌಢ್ಯ ಬೆಳೆಸುವುದು ದುರದೃಷ್ಟಕರ” — ಸಿದ್ದರಾಮಯ್ಯ

ಪ್ರತಿಧ್ವನಿ by ಪ್ರತಿಧ್ವನಿ
August 26, 2026
in Uncategorized
0
“ವಿದ್ಯಾವಂತರೇ ಜಾತಿ ವ್ಯವಸ್ಥೆ, ಮೌಢ್ಯ ಬೆಳೆಸುವುದು ದುರದೃಷ್ಟಕರ” — ಸಿದ್ದರಾಮಯ್ಯ
Share on WhatsAppShare on FacebookShare on Telegram

ಬೆಂಗಳೂರು: ವಿದ್ಯಾವಂತರಲ್ಲೇ ಜಾತಿ ವ್ಯವಸ್ಥೆ ಹಾಗೂ ಮೌಢ್ಯ ಮುಂದುವರಿಯುತ್ತಿರುವುದು ದುರದೃಷ್ಟಕರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಶೂದ್ರ ಸೇವಾ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ವ್ಯವಸ್ಥೆಯ ಮೂಲಕ ಯಾರನ್ನೂ ಕೀಳಾಗಿ ಕಾಣಬಾರದು ಎಂದು ಹೇಳಿದರು.

ADVERTISEMENT

ಚತುವರ್ಣ ವ್ಯವಸ್ಥೆಯನ್ನು ಮನುವಾದಿಗಳು ಉದ್ದೇಶಪೂರ್ವಕವಾಗಿ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕಾದರೆ ಸಮಾನತೆಯ ಸಮಾಜ ನಿರ್ಮಾಣವಾಗಬೇಕು ಎಂದರು.ಶೂದ್ರ ವರ್ಗದವರು ಹಲವು ವರ್ಷಗಳ ಕಾಲ ಶಿಕ್ಷಣ ಮತ್ತು ಅವಕಾಶಗಳಿಂದ ವಂಚಿತರಾಗಿದ್ದರು. ಇಂತಹ ಸಂದರ್ಭದಲ್ಲಿ ಮೇಲ್ವರ್ಗದವರೊಂದಿಗೆ ಸ್ಪರ್ಧಿಸುವುದು ಸುಲಭವಾಗಿರಲಿಲ್ಲ. ಅಕ್ಷರ ವಂಚಿತರು ಹಾಗೂ ಶಿಕ್ಷಣ ಪಡೆದವರ ನಡುವಿನ ಅಂತರದಿಂದಾಗಿ ಸಾಮಾಜಿಕ ಅಸಮಾನತೆ ಮತ್ತಷ್ಟು ಹೆಚ್ಚಾಯಿತು ಎಂದು ಹೇಳಿದರು.

ನಮ್ಮಲ್ಲಿನ ಭಿನ್ನಾಭಿಪ್ರಾಯಗಳ ಪರಿಣಾಮ ಬ್ರಿಟಿಷರು ದೇಶವನ್ನು ಆಳುವಂತಾಯಿತು. ಹೀಗಾಗಿ ಎಲ್ಲ ವರ್ಗದವರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದಾಗಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.ಅಸಮಾನತೆ ನಿವಾರಿಸಿ ಸಮಸಮಾಜ ನಿರ್ಮಿಸುವುದು ಸಂವಿಧಾನದ ಆಶಯವಾಗಿದೆ. ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಚಿಂತನೆಯೂ ಸಮಾನತೆಯ ಸಮಾಜ ನಿರ್ಮಾಣದತ್ತವೇ ಇತ್ತು ಎಂದು ಅವರು ಹೇಳಿದರು.

ಪಟ್ಟಭದ್ರ ಹಿತಾಸಕ್ತಿಗಳು ಸಮಾಜದ ಎಲ್ಲ ವರ್ಗಗಳು ಒಂದಾಗುವುದನ್ನು ತಡೆಯುತ್ತಿವೆ. ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕಾದರೆ ವಿದ್ಯಾವಂತರು ವೈಜ್ಞಾನಿಕವಾಗಿ ಚಿಂತಿಸುವುದನ್ನು ಕಲಿಯಬೇಕು ಎಂದರು.ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಬಂದರೂ ಅದು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

DK Shivakumar Meeting : ಬೆಂಗಳೂರು ಗ್ರಾಮಾಂತರ ಬೆಂಗಳೂರು ದಕ್ಷಿಣ ಜಿಲ್ಲೆಗಳ ಪಕ್ಷದ ಶಾಸಕರ ಜೊತೆ ಸಿಎಂ ಸಭೆ..!

ವಿದ್ಯಾವಂತರಲ್ಲೂ ಬಹುಪಾಲು ಮಂದಿ ಈಗಲೂ ಮೌಢ್ಯ ಹಾಗೂ ಕಂದಾಚಾರಗಳನ್ನು ಪಾಲಿಸುತ್ತಿರುವುದು ಇದಕ್ಕೆ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.ಇಂದಿನ ಪೀಳಿಗೆ ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವ ಬೆಳೆಸಿಕೊಳ್ಳದಿದ್ದರೆ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಜಾತಿ ವ್ಯವಸ್ಥೆಯೂ ನಿರ್ಮೂಲನೆಯಾಗುವುದಿಲ್ಲ ಎಂದು ಎಚ್ಚರಿಸಿದರು.

ಸರ್ಕಾರದ ಗ್ಯಾರಂಟಿ ಯೋಜನೆಗಳು ಸಾಮಾಜಿಕ ಅಸಮಾನತೆ ನಿವಾರಣೆಗೆ ಸಹಕಾರಿಯಾಗಿವೆ. ವ್ಯವಸ್ಥೆಯ ಬದಲಾವಣೆಗೆ ಎಲ್ಲರ ಪ್ರಯತ್ನ ಅಗತ್ಯವಾಗಿದ್ದು, ಅದಕ್ಕೆ ಸಮಯ ಬೇಕಾಗುತ್ತದೆ. ಸರಿಯಾದ ಮಾರ್ಗದಲ್ಲಿ ನಿರಂತರ ಪ್ರಯತ್ನ ಮಾಡಿದರೆ ಯಶಸ್ಸು ಸಿಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.ಕಾರ್ಯಕ್ರಮದಲ್ಲಿ ಶೂದ್ರ ಸೇವಾ ಸಂಘದ ಅಧ್ಯಕ್ಷ ಹಾಗೂ ಶೂದ್ರ ಪತ್ರಿಕೆಯ ಸಂಪಾದಕ ರಾಮೇಗೌಡ, ಸಂಚಾಲಕ ಮುರಳೀಧರ ಹಾಲಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Previous Post

ಶಿವಗಂಗೆ ಬೆಟ್ಟದಲ್ಲಿ ಅದ್ವೈತ್ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್! ಬಯಲಾಯಿತು ಹಲವು ಮಾಹಿತಿ

Next Post

ಆನ್‌ಲೈನ್ ತರಕಾರಿಗಳನ್ನು ತಾಜಾ ತೋರಿಸಲು ಕೆಮಿಕಲ್ ಸ್ಪ್ರೇ?; ಪರಿಶೀಲನೆ ಬಳಿಕ ಕಠಿಣ ಕ್ರಮ: ಯು.ಟಿ. ಖಾದರ್

Related Posts

ನೇಪಾಳದಲ್ಲಿ ಭೀಕರ ಪ್ರವಾಹ: 160 ಮಂದಿ ಸಾ**, 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ
Uncategorized

ನೇಪಾಳದಲ್ಲಿ ಭೀಕರ ಪ್ರವಾಹ: 160 ಮಂದಿ ಸಾ**, 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

by ಪ್ರತಿಧ್ವನಿ
August 27, 2026
0

ನವದೆಹಲಿ: ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹ ದೇಶವನ್ನು ಬೆಚ್ಚಿಬೀಳಿಸಿದೆ. ಕೆಲವೇ ಗಂಟೆಗಳಲ್ಲಿ ಪ್ರವಾಹದ ರಭಸಕ್ಕೆ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಭಾರೀ ಪ್ರಮಾಣದ ಹಾನಿ ಸಂಭವಿಸಿದೆ. ರಸುವಾ...

Read moreDetails
ಇದು ಕನ್ನಡದ ರಂಗಸ್ಥಳ! ಕುತೂಹಲ ಮೂಡಿಸಿದ ಟೀಸರ್

ಇದು ಕನ್ನಡದ ರಂಗಸ್ಥಳ! ಕುತೂಹಲ ಮೂಡಿಸಿದ ಟೀಸರ್

August 22, 2026
ಬಿಗ್‌ಬಾಸ್‌ ಬಳಿಕ ವರ್ತೂರು ಸಂತೋಷ್‌ ಎರಡನೇ ಮದುವೆ; ‘ಲವ್‌ ಕಮ್‌ ಅರೇಂಜ್ಡ್‌ ಮ್ಯಾರೇಜ್‌’! ಹುಡುಗಿ ಯಾರು ?

ಬಿಗ್‌ಬಾಸ್‌ ಬಳಿಕ ವರ್ತೂರು ಸಂತೋಷ್‌ ಎರಡನೇ ಮದುವೆ; ‘ಲವ್‌ ಕಮ್‌ ಅರೇಂಜ್ಡ್‌ ಮ್ಯಾರೇಜ್‌’! ಹುಡುಗಿ ಯಾರು ?

August 20, 2026
ʻಪ್ರೇಮದ ಊರಲಿʼ ಸಿನಿಮಾ ಹಾಡು ರಿಲೀಸ್‌ ಆಯ್ತು…

ʻಪ್ರೇಮದ ಊರಲಿʼ ಸಿನಿಮಾ ಹಾಡು ರಿಲೀಸ್‌ ಆಯ್ತು…

August 20, 2026

ಮೋದಿ ಭೇಟಿ ಮಾಡಿದ ಮಹಾ ಸಿಎಂ

August 17, 2026
Next Post
ಆನ್‌ಲೈನ್ ತರಕಾರಿಗಳನ್ನು ತಾಜಾ ತೋರಿಸಲು ಕೆಮಿಕಲ್ ಸ್ಪ್ರೇ?; ಪರಿಶೀಲನೆ ಬಳಿಕ ಕಠಿಣ ಕ್ರಮ: ಯು.ಟಿ. ಖಾದರ್

ಆನ್‌ಲೈನ್ ತರಕಾರಿಗಳನ್ನು ತಾಜಾ ತೋರಿಸಲು ಕೆಮಿಕಲ್ ಸ್ಪ್ರೇ?; ಪರಿಶೀಲನೆ ಬಳಿಕ ಕಠಿಣ ಕ್ರಮ: ಯು.ಟಿ. ಖಾದರ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada