• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಯೋಗಿ ನಾಡಲ್ಲಿ ಕಾಲ್ತುಳಿ.. ಶತಕ ದಾಟಿದ ಸತ್ತವರ ಸಂಖ್ಯೆ.. ಕಾರಣ ಏನು..?

Krishna Mani by Krishna Mani
July 3, 2024
in Top Story, ಇದೀಗ, ದೇಶ
0
ಯೋಗಿ ನಾಡಲ್ಲಿ ಕಾಲ್ತುಳಿ.. ಶತಕ ದಾಟಿದ ಸತ್ತವರ ಸಂಖ್ಯೆ.. ಕಾರಣ ಏನು..?
Share on WhatsAppShare on FacebookShare on Telegram

ಉತ್ತರ ಪ್ರದೇಶದಲ್ಲಿ ಭೀಕರ ಕಾಲ್ತುಳಿತಕ್ಕೆ ಬರೋಬ್ಬರಿ 120ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ದೊಡ್ಡವರ ಶವಗಳ ನಡುವೆ ಪಟ್ಟ ಪುಟ್ಟ ಮಕ್ಕಳು ಉಸಿರು ಚೆಲ್ಲಿರುವ ಘನಘೋರ ಘಟನೆ ನಡೆದಿದೆ. ಹಾದಿ ಬೀದಿಯಲ್ಲಿ ರಾಶಿ ರಾಶಿ ಶವಗಳು ಬಿದ್ದಿದ್ದು, ಬದುಕಿ ಉಳಿದವರು ಶವಗಳ ಎದುರು ರೋಧಿಸುವ ಸಂಗತಿ ಕರುಳು ಚುರ್​ ಎನ್ನುವಂತಿದೆ.

ADVERTISEMENT

ಉತ್ತರಪ್ರದೇಶದ ಹತ್ರಾಸ್‌ ಜಿಲ್ಲೆಯ ಫುಲ್ರೈ ಗ್ರಾಮದಲ್ಲಿ ಭೋಲೆ ಬಾಬಾ ಸತ್ಸಂಗ ಕಾರ್ಯಕ್ರಮ ನಡೆಯುತ್ತಿತ್ತು. ಸತ್ಸಂಗದಲ್ಲಿ ಭಾಗಿಯಾಗಲು ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ರು. ಬೃಹತ್​ ಟೆಂಟ್​ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮ ಸರಾಗವಾಗಿ ನಡೆದಿತ್ತು. ಆದ್ರೆ ಸತ್ಸಂಗದ ನಂತರ ಏಕಾಏಕಿ ನೂಕುನುಗ್ಗಲು ಉಂಟಾಗಿ ಅತಿದೊಡ್ಡ ದುರಂತ ನಡೆದು ಹೋಗಿದೆ. ಕಾಲ್ತುಳಿತದಲ್ಲಿ ನೂರಾರು ಭಕ್ತರು ಅಸುನೀಗಿದ್ರು.

ಮೃತಪಟ್ಟವರಲ್ಲಿ ಹತ್ರಾಸ್ ಮತ್ತು ಇಟಾಹ್ ನಗರ ನಿವಾಸಿಗಳೇ ಹೆಚ್ಚಾಗಿದ್ದಾರೆ ಎನ್ನಲಾಗಿದೆ. ಭದ್ರತಾ ಸಿಬ್ಬಂದಿ ಭಕ್ತರನ್ನು ಒಂದೇ ಕಡೆ ನಿಲ್ಲಿಸಿದ್ದರಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಹೀಗಾಗಿ ಹಲವಾರು ಜನರು ನಿಂತಲ್ಲಿಯೇ ಪ್ರಜ್ಞಾಹೀನರಾಗಿದ್ರು. ಮೃತರ ಶವ ಎಲ್ಲೆಂದರಲ್ಲಿ ಬಿದ್ದಿದ್ದು, ಗೂಡ್ಸ್​ ವಾಹನ, ಕಾರು ಸೇರಿದಂತೆ ಮಹಿಳೆಯರು, ಮಕ್ಕಳ ಮೃತದೇಹಗಳು ಚೆಲ್ಲಾಡಿವೆ. ಮಕ್ಕಳು ಸೇರಿ ಹಲವಾರು ಜನರು ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತರ ಸಂಖ್ಯೆ ನೋಡಿದಾಗ ಕಾರ್ಯಕ್ರಮ ಆಯೋಜನೆ ಸರಿಯಾಗಿ ಇರಲಿಲ್ಲ ಎನ್ನುವುದು ಸಾಬೀತಾಗುತ್ತದೆ. ರಾಜ್ಯ ಸರ್ಕಾರ ಹಾಗು ಜಿಲ್ಲಾಡಳಿತದ ನಿರ್ಲಕ್ಷ್ಯ ಎದ್ದು ಕಾಣ್ತಿದೆ. ಅನಿಯಂತ್ರಿತ ಜನಸಂದಣಿ ಮತ್ತು ಆಮ್ಲಜನಕ ಕೊರತೆಯೂ ಸಾವಿಗೆ ಕಾರಣ ಎನ್ನಲಾಗಿದೆ. ಜನರು ಪ್ರಾಣ ಕಳೆದುಕೊಂಡಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಸೂಚನೆ ಕೊಟ್ಟಿದ್ದಾರೆ. ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ದುರಂತದ ಬಗ್ಗೆ ಸಂತಾಪ ಸೂಚಿಸಿದ್ದಾರೆ.

ಸತ್ಸಂಗದಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಉತ್ತರ ಪ್ರದೇಶದ ಸಚಿವ ಸಂದೀಪ್​ ಸಿಂಗ್ ಮಾತನಾಡಿ, ಘಟನಾ ಸ್ಥಳಕ್ಕೆ ಹೋಗಲು ಸಿಎಂ ಆದೇಶಿಸಿದ್ದಾರೆ. ಇಲ್ಲೇ ಇದ್ದು ಘಟನೆ ಬಗ್ಗೆ ಪರಿಶೀಲನೆ ಮಾಡ್ತೇವೆ. ಸರ್ಕಾರ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಸತ್ತವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎಂದಿದ್ದಾರೆ.

ಕಾಲ್ತುಳಿತದಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಸಿಎಂ ಯೋಗಿ ಆದಿತ್ಯನಾಥ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಅಂತ ಯೋಗಿ ಆದಿತ್ಯನಾಥ್ ಹಾರೈಸಿದ್ದಾರೆ. ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಈ ವಿಚಾರ ವಿರೋಧ ಪಕ್ಷಗಳ ಪಾಲಿಗೆ ಅಸ್ತ್ರವಾಗಿ ಸಿಕ್ಕಿದ್ದು, ಕೇಂದ್ರದ ಬಿಜೆಪಿ ಸರ್ಕಾರ ಹಾಗು ಉತ್ತರ ಪ್ರದೇಶದ ಬಿಜೆಪಿ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸುವ ಎಲ್ಲಾ ಸಾಧ್ಯತೆಗಳೂ ಇವೆ.

ಕೃಷ್ಣಮಣಿ

Tags: #yogiadithyanathBJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿಜೆಪಿಸಿದ್ದರಾಮಯ್ಯ
Previous Post

Plants to Avoid Mosquito: ಮನೆಯ ಮುಂದೆ ಈ ಗಿಡಗಳಿದ್ರೆ ಸೊಳ್ಳೆಗಳು ಬರುವುದಿಲ್ಲ.!

Next Post

ಸದನದಲ್ಲಿ ಅಬ್ಬರಿಸಿದ ಪ್ರಧಾನಿ ಮೋದಿ ! ರಾಹುಲ್ ಗಾಂಧಿಯನ್ನ ಬಚ್ಚಾ ಎಂದ ನಮೋ ?! 

Related Posts

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!
Top Story

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

by ಪ್ರತಿಧ್ವನಿ
April 14, 2026
0

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. https://youtu.be/jc4uNwRML78?si=OFDsWjRgGzT4buqt ಇಂದು...

Read moreDetails
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
Next Post
ಸದನದಲ್ಲಿ ಅಬ್ಬರಿಸಿದ ಪ್ರಧಾನಿ ಮೋದಿ ! ರಾಹುಲ್ ಗಾಂಧಿಯನ್ನ ಬಚ್ಚಾ ಎಂದ ನಮೋ ?! 

ಸದನದಲ್ಲಿ ಅಬ್ಬರಿಸಿದ ಪ್ರಧಾನಿ ಮೋದಿ ! ರಾಹುಲ್ ಗಾಂಧಿಯನ್ನ ಬಚ್ಚಾ ಎಂದ ನಮೋ ?! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada