• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಭಾರತದಲ್ಲಿ ಚುನಾವಣಾ ಹಗರಣ ನಡೆಯುತ್ತಿದ್ಯಾ..? ಆಯೋಗವೇ ಸಾಥ್‌ ಕೊಡ್ತಿದ್ಯಾ..?

Krishna Mani by Krishna Mani
May 24, 2024
in Top Story, ಇದೀಗ, ರಾಜಕೀಯ, ವಿಶೇಷ
0
ಭಾರತದಲ್ಲಿ ಚುನಾವಣಾ ಹಗರಣ ನಡೆಯುತ್ತಿದ್ಯಾ..? ಆಯೋಗವೇ ಸಾಥ್‌ ಕೊಡ್ತಿದ್ಯಾ..?
Share on WhatsAppShare on FacebookShare on Telegram

ಭಾರತದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬಹುತೇಕ ಜನರಿಗೆ ಚುನಾವಣೆ, ಮತದಾನ ಎಂದರೆ ಹೋ ಎನ್ನುವ ರಾಗ ಎಳೆಯುತ್ತಾರೆ. ಇದಕ್ಕೆ ಕಾರಣ ಇವಿಎಂಗಳ ದುರ್ಬಳೆ ಆಗುತ್ತಿದೆ. ತಮಗೆ ಬೇಕಾದ ಅಂಕಿಅಂಶಗಳನ್ನು ತುಂಬುವ ಮೂಲಕ ತಮಗೆ ಬೇಕಾದ ಫಲಿತಾಂಶ ಬರುವಂತೆ ಮಾಡುತ್ತಾರೆ ಎನ್ನುವ ಗುರುತರವಾದ ಆರೋಪ ಇದೆ. ಇದರ ಜೊತೆಗೆ ಇವಿಎಂಗಳಲ್ಲಿ ಯಾವುದೇ ಪಕ್ಷಕ್ಕೆ ಮತ ಚಲಾಯಿಸಿದರೂ ಭಾರತೀಯ ಜನತಾ ಪಾರ್ಟಿಗೆ ಮತ ಹೋಗುವಂತೆಯೂ ಮಾಡಿದ್ದಾರೆ ಎನ್ನುವುದು ಹಲವಾರು ಜನರ ನಂಬಿಕೆಯೂ ಆಗಿದೆ. ವಿರೋಧ ಪಕ್ಷಗಳು ಈ ರೀತಿಯ ಆರೋಪವನ್ನೂ ಮಾಡಿದ್ದಾರೆ. ಸುಪ್ರೀಂಕೋರ್ಟ್‌ಗೂ ಅರ್ಜಿ ಹಾಕಿದ್ದಾರೆ. ಆದರೆ ಕೋರ್ಟ್‌ ಈ ಆರೋಪವನ್ನು ಅಲ್ಲಗಳೆದಿದೆ.

ADVERTISEMENT

ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೇರೊಂದು ರೀತಿಯ ಅನುಮಾನ ಕಾಡುವುದಕ್ಕೆ ಶುರುವಾಗಿದೆ. ಕೇಂದ್ರ ಚುನಾವಣಾ ಆಯೋಗ ನೀಡುತ್ತಿರುವ ಮಾಹಿತಿಯಲ್ಲೇ ಗೊಂದಲ ಸೃಷ್ಟಿಯಾಗುತ್ತಿದೆ. ಒಮ್ಮೆ ಒಂದು ಅಂಕಿ ಅಂಶ ನೀಡಿದರೆ, ಮಗದೊಮ್ಮೆ ಮತ್ತೊಂದು ರೀತಿಯ ಅಂಕಿ ಅಂಶ ನೀಡುತ್ತಿರುವುದು ಅನುಮಾನ ದುಪ್ಪಟ್ಟಾಗುವಂತೆ ಮಾಡಿದೆ. ಈ ಬಗ್ಗೆ ಮಹಾರಾಷ್ಟ್ರ CPIM ಪ್ರಶ್ನೆ ಮಾಡಿದ್ದು, ಇದು ಹೇಗೆ ಸಾಧ್ಯ ಎಂದು ಕೇಂದ್ರ ಚುನಾವಣಾ ಆಯೋಗ ಉತ್ತರಿಸಬೇಕು ಎಂದು ಆಗ್ರಹ ಮಾಡಿದೆ. ಆದರೆ ಚುನಾವಣಾ ಅಕ್ರಮ ಅಥವಾ ಚುನಾವಣಾ ಅಂಕಿಅಂಶದ ಬಗ್ಗೆ ಸ್ಪಷ್ಟನೆಯನ್ನೂ ನೀಡಿಲ್ಲ.

ಎಚ್ಚರಿಕೆಯಿಂದ ಪರಿಶೀಲಿಸಿ ಎಂದು ಮಹಾರಾಷ್ಟ್ರ CPIM ಈ ಪೋಸ್ಟ್‌ ಹಾಕಿದ್ದು 20/5/2024 ರಂದು ರಾತ್ರಿ 9 ಗಂಟೆಗೆ ನೀಡಲಾದ ಫಾರ್ಮ್ 17C ನಲ್ಲಿ ನಮೂದಿಸಲಾದ ಮತಗಳ ಸಂಖ್ಯೆ ಎಂದು ಒಂದು ಚುನಾವಣಾ ಆಯೋಗದ ಅಧಿಕೃತ ಸೀಲ್‌ ಹೊಂದಿರುವ ಮಾಹಿತಿಯನ್ನು ಹಂಚಿಕೊಂಡಿದೆ. ಅದೇ ಕ್ಷೇತ್ರದ ಮತ್ತೊಂದು ಪತ್ರ 21/5/2024ರ ರಾತ್ರಿ 9 ಗಂಟೆಗೆ ನೀಡಲಾಗಿದ್ದು, ಫಾರ್ಮ್ 17C ನಲ್ಲಿ ನಮೂದಿಸಲಾದ ಮತಗಳ ಸಂಖ್ಯೆ ಭಾರೀ ವ್ಯತ್ಯಾಸ ಆಗಿದೆ. 24 ಗಂಟೆಗಳಲ್ಲಿ ಹೆಚ್ಚುವರಿಯಾಗಿ ಒಟ್ಟು 85,943 ಮತಗಳು ಚಲಾವಣೆಯಾಗಿವೆ. ಇದು ಹೇಗೆ ಹೇಗೆ ಸಾಧ್ಯ ಅನ್ನೋದು ಮಹಾರಾಷ್ಟ್ರ CPIM ಪ್ರಶ್ನೆ. ಇದಕ್ಕೆ ಚುನಾವಣಾ ಆಯೋಗ ಉತ್ತರಿಸುತ್ತದೆಯೇ..? ಎಂದು ಪ್ರಶ್ನೆ ಮಾಡಿದೆ.

ಈ ಬಾರಿ ‘ಚಾರ್‌ ಸೋ ಪಾರ್‌’ ಅನ್ನೋ ಘೋಷಣೆ ಹಿಡಿದು ಹೊರಟ ಬಿಜೆಪಿಗೆ ಚುನಾವಣೆಯಲ್ಲಿ ಅಂದುಕೊಂಡಷ್ಟು ಮತಗಳಿಕೆ ಆಗಿಲ್ಲ ಅನ್ನೋ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ರಾಹುಲ್‌ ಗಾಂಧಿಯೂ ಪದೇ ಪದೇ ಹೇಳಿಕೆ ನೀಡುತ್ತಿದ್ದು, ಬಿಜೆಪಿ ಹೇಳಿದ ರೀತಿ ಎಲ್ಲಿಯೂ ಜನಬೆಂಬಲ ಇಲ್ಲ ಎಂದೇ ವಾಗ್ದಾಳಿ ಮಾಡುತ್ತಿದ್ದಾರೆ. ಇನ್ನು ದಕ್ಷಿಣ ಭಾರತದಲ್ಲಿ ಅಷ್ಟೇ ಅಲ್ಲದೆ ಈ ಬಾರಿ ಉತ್ತರ ಭಾರತದಲ್ಲೂ ಕಾಂಗ್ರೆಸ್‌ ಕಮಾಲ್‌ ಮಾಡಲಿದೆ ಎನ್ನುತ್ತಿರುವಾಗ ಈ ರೀತಿಯ ಅನುಮಾನದ ಮಾಹಿತಿಯೊಂದು ಹರಿದಾಡ್ತಿದೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ಕೊಟ್ಟರೆ ಮತದಾನ ಮಾಡಿದ ಮತದಾರರಿಗೂ ಹಾಗು ದೇಶದಲ್ಲಿರುವ ಇತರೆ ಪಕ್ಷಗಳಿಗೂ ಸಮಾಧಾನ ತರಬಹುದು.

ಕೃಷ್ಣಮಣಿ

Tags: #Congressticket #loksabhaelectionBJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಜಾತಿ ವ್ಯವಸ್ಥೆ , ವರ್ಣಾಶ್ರಮದಿಂದ ಮನುಷ್ಯ ಮನುಷ್ಯನನ್ನು ಶೋಷಿಸುವ ಅಸಮಾನತೆ ಸೃಷ್ಟಿಯಾಯಿತು: ಸಿ.ಎಂ.ಸಿದ್ದರಾಮಯ್ಯ

Next Post

ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್

Related Posts

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..
Top Story

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

by ಪ್ರತಿಧ್ವನಿ
April 22, 2026
0

ಹೈದ್ರಾಬಾದ್‌ :  2026ರ ಐಪಿಎಲ್‌ನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ಮಣಿಸಿದೆ. ಇನ್ನೂ ಈ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದ್ರಾಬಾದ್‌ ತಂಡದ ಓಪನರ್...

Read moreDetails
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

April 21, 2026
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

April 21, 2026
Next Post

ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada