ಭಾರತದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬಹುತೇಕ ಜನರಿಗೆ ಚುನಾವಣೆ, ಮತದಾನ ಎಂದರೆ ಹೋ ಎನ್ನುವ ರಾಗ ಎಳೆಯುತ್ತಾರೆ. ಇದಕ್ಕೆ ಕಾರಣ ಇವಿಎಂಗಳ ದುರ್ಬಳೆ ಆಗುತ್ತಿದೆ. ತಮಗೆ ಬೇಕಾದ ಅಂಕಿಅಂಶಗಳನ್ನು ತುಂಬುವ ಮೂಲಕ ತಮಗೆ ಬೇಕಾದ ಫಲಿತಾಂಶ ಬರುವಂತೆ ಮಾಡುತ್ತಾರೆ ಎನ್ನುವ ಗುರುತರವಾದ ಆರೋಪ ಇದೆ. ಇದರ ಜೊತೆಗೆ ಇವಿಎಂಗಳಲ್ಲಿ ಯಾವುದೇ ಪಕ್ಷಕ್ಕೆ ಮತ ಚಲಾಯಿಸಿದರೂ ಭಾರತೀಯ ಜನತಾ ಪಾರ್ಟಿಗೆ ಮತ ಹೋಗುವಂತೆಯೂ ಮಾಡಿದ್ದಾರೆ ಎನ್ನುವುದು ಹಲವಾರು ಜನರ ನಂಬಿಕೆಯೂ ಆಗಿದೆ. ವಿರೋಧ ಪಕ್ಷಗಳು ಈ ರೀತಿಯ ಆರೋಪವನ್ನೂ ಮಾಡಿದ್ದಾರೆ. ಸುಪ್ರೀಂಕೋರ್ಟ್‌ಗೂ ಅರ್ಜಿ ಹಾಕಿದ್ದಾರೆ. ಆದರೆ ಕೋರ್ಟ್ ಈ ಆರೋಪವನ್ನು ಅಲ್ಲಗಳೆದಿದೆ.

ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೇರೊಂದು ರೀತಿಯ ಅನುಮಾನ ಕಾಡುವುದಕ್ಕೆ ಶುರುವಾಗಿದೆ. ಕೇಂದ್ರ ಚುನಾವಣಾ ಆಯೋಗ ನೀಡುತ್ತಿರುವ ಮಾಹಿತಿಯಲ್ಲೇ ಗೊಂದಲ ಸೃಷ್ಟಿಯಾಗುತ್ತಿದೆ. ಒಮ್ಮೆ ಒಂದು ಅಂಕಿ ಅಂಶ ನೀಡಿದರೆ, ಮಗದೊಮ್ಮೆ ಮತ್ತೊಂದು ರೀತಿಯ ಅಂಕಿ ಅಂಶ ನೀಡುತ್ತಿರುವುದು ಅನುಮಾನ ದುಪ್ಪಟ್ಟಾಗುವಂತೆ ಮಾಡಿದೆ. ಈ ಬಗ್ಗೆ ಮಹಾರಾಷ್ಟ್ರ CPIM ಪ್ರಶ್ನೆ ಮಾಡಿದ್ದು, ಇದು ಹೇಗೆ ಸಾಧ್ಯ ಎಂದು ಕೇಂದ್ರ ಚುನಾವಣಾ ಆಯೋಗ ಉತ್ತರಿಸಬೇಕು ಎಂದು ಆಗ್ರಹ ಮಾಡಿದೆ. ಆದರೆ ಚುನಾವಣಾ ಅಕ್ರಮ ಅಥವಾ ಚುನಾವಣಾ ಅಂಕಿಅಂಶದ ಬಗ್ಗೆ ಸ್ಪಷ್ಟನೆಯನ್ನೂ ನೀಡಿಲ್ಲ.

ಎಚ್ಚರಿಕೆಯಿಂದ ಪರಿಶೀಲಿಸಿ ಎಂದು ಮಹಾರಾಷ್ಟ್ರ CPIM ಈ ಪೋಸ್ಟ್ ಹಾಕಿದ್ದು 20/5/2024 ರಂದು ರಾತ್ರಿ 9 ಗಂಟೆಗೆ ನೀಡಲಾದ ಫಾರ್ಮ್ 17C ನಲ್ಲಿ ನಮೂದಿಸಲಾದ ಮತಗಳ ಸಂಖ್ಯೆ ಎಂದು ಒಂದು ಚುನಾವಣಾ ಆಯೋಗದ ಅಧಿಕೃತ ಸೀಲ್ ಹೊಂದಿರುವ ಮಾಹಿತಿಯನ್ನು ಹಂಚಿಕೊಂಡಿದೆ. ಅದೇ ಕ್ಷೇತ್ರದ ಮತ್ತೊಂದು ಪತ್ರ 21/5/2024ರ ರಾತ್ರಿ 9 ಗಂಟೆಗೆ ನೀಡಲಾಗಿದ್ದು, ಫಾರ್ಮ್ 17C ನಲ್ಲಿ ನಮೂದಿಸಲಾದ ಮತಗಳ ಸಂಖ್ಯೆ ಭಾರೀ ವ್ಯತ್ಯಾಸ ಆಗಿದೆ. 24 ಗಂಟೆಗಳಲ್ಲಿ ಹೆಚ್ಚುವರಿಯಾಗಿ ಒಟ್ಟು 85,943 ಮತಗಳು ಚಲಾವಣೆಯಾಗಿವೆ. ಇದು ಹೇಗೆ ಹೇಗೆ ಸಾಧ್ಯ ಅನ್ನೋದು ಮಹಾರಾಷ್ಟ್ರ CPIM ಪ್ರಶ್ನೆ. ಇದಕ್ಕೆ ಚುನಾವಣಾ ಆಯೋಗ ಉತ್ತರಿಸುತ್ತದೆಯೇ..? ಎಂದು ಪ್ರಶ್ನೆ ಮಾಡಿದೆ.
ಈ ಬಾರಿ ‘ಚಾರ್ ಸೋ ಪಾರ್’ ಅನ್ನೋ ಘೋಷಣೆ ಹಿಡಿದು ಹೊರಟ ಬಿಜೆಪಿಗೆ ಚುನಾವಣೆಯಲ್ಲಿ ಅಂದುಕೊಂಡಷ್ಟು ಮತಗಳಿಕೆ ಆಗಿಲ್ಲ ಅನ್ನೋ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ರಾಹುಲ್ ಗಾಂಧಿಯೂ ಪದೇ ಪದೇ ಹೇಳಿಕೆ ನೀಡುತ್ತಿದ್ದು, ಬಿಜೆಪಿ ಹೇಳಿದ ರೀತಿ ಎಲ್ಲಿಯೂ ಜನಬೆಂಬಲ ಇಲ್ಲ ಎಂದೇ ವಾಗ್ದಾಳಿ ಮಾಡುತ್ತಿದ್ದಾರೆ. ಇನ್ನು ದಕ್ಷಿಣ ಭಾರತದಲ್ಲಿ ಅಷ್ಟೇ ಅಲ್ಲದೆ ಈ ಬಾರಿ ಉತ್ತರ ಭಾರತದಲ್ಲೂ ಕಾಂಗ್ರೆಸ್ ಕಮಾಲ್ ಮಾಡಲಿದೆ ಎನ್ನುತ್ತಿರುವಾಗ ಈ ರೀತಿಯ ಅನುಮಾನದ ಮಾಹಿತಿಯೊಂದು ಹರಿದಾಡ್ತಿದೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ಕೊಟ್ಟರೆ ಮತದಾನ ಮಾಡಿದ ಮತದಾರರಿಗೂ ಹಾಗು ದೇಶದಲ್ಲಿರುವ ಇತರೆ ಪಕ್ಷಗಳಿಗೂ ಸಮಾಧಾನ ತರಬಹುದು.

ಕೃಷ್ಣಮಣಿ