• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಜೈನ ಮುನಿ ಭೀಕರ ಹತ್ಯೆ, ಸರ್ಕಾರದ ವಿರುದ್ಧ ಆಕ್ರೋಶ ಯಾಕೆ..?

ಕೃಷ್ಣ ಮಣಿ by ಕೃಷ್ಣ ಮಣಿ
July 10, 2023
in ಅಂಕಣ, ಅಭಿಮತ
0
ಜೈನ ಮುನಿ ಭೀಕರ ಹತ್ಯೆ, ಸರ್ಕಾರದ ವಿರುದ್ಧ ಆಕ್ರೋಶ ಯಾಕೆ..?
Share on WhatsAppShare on FacebookShare on Telegram

ಬೆಳಗಾವಿ ಜಿಲ್ಲೆ ಹಿರೇಕೋಡಿ ನಂದಿಪರ್ವತ ಆಶ್ರಮದ ಕಾಮ ಕುಮಾರ ನಂದಿ ಮಹಾರಾಜರ ಹತ್ಯೆ ನಡೆದಿದ್ದು, ಭೀಕರ ಹತ್ಯೆಗೆ ಇಡೀ ರಾಜ್ಯವೇ ಮರುಗುತ್ತಿದೆ. ಭಾನುವಾರ ಹಿರೇಕೋಡಿ ನಂದಿಪರ್ವತ ಆಶ್ರಮದಲ್ಲಿ ಹತ್ಯೆಯಾದ ಜೈನ ಮುನಿಗಳ ಅಂತ್ಯಕ್ರಿಯೆ ನಡೆದಿದ್ದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶದ ಕಟ್ಟೆ ಹೊಡೆದಿದೆ. ಇದಕ್ಕೆ ಪ್ರಮುಖ ಕಾರಣ ರಾಜ್ಯ ಸರ್ಕಾರ ನಡೆದುಕೊಂಡಿರುವ ರೀತಿ ನೀತಿಗಳು. ಮೊದಲಿಗೆ ಜೈನ ಮುನಿಗಳ ಹತ್ಯೆ ನಡೆದಾಗಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಚಕಾರ ಎತ್ತಿಲ್ಲ. ಈ ಬಗ್ಗೆ ಮಾತನಾಡಿಲ್ಲ. ಇನ್ನು ಈ ಭೀಕರ ಹತ್ಯೆಯಲ್ಲಿ ಓರ್ವ ಮುಸ್ಲಿಂ ವ್ಯಕ್ತಿ ಭಾಗಿಯಾಗಿದ್ದು, ಸರ್ಕಾರ ಕೊಲೆಗಾರನ ಹೆಸರನ್ನು ಮೊದಲಿಗೆ ಮುಚ್ಚಿಡುವ ಕೆಲಸ ಮಾಡಿತ್ತು. ಆ ಬಳಿಕ ಪ್ರತಿಭಟನೆ ಜೋರಾಗುತ್ತಿದ್ದ ಹಾಗೆ ಮುಸ್ಲಿಂ ಹೆಸರನ್ನು ಬಹಿರಂಗ ಮಾಡಿದರ ಎನ್ನುವುದು ಆರೋಪ.

ADVERTISEMENT

ಜೈನ ಮುನಿಗಳನ್ನು ಕರೆಂಟ್​​ ಶಾಕ್​ ಕೊಟ್ಟು ಹತ್ಯೆ ಮಾಡಿದ ಬಳಿಕ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಬೋರ್​ವೆಲ್​ಒಳಕ್ಕೆ ಬಿಸಾಡಿದ್ದರು. ಕೊಲೆ ಆರೋಪಿಗಳಾದ ನಾರಾಯಣ ಬಸಪ್ಪ ಮಾಳಿ ಹಾಗು ಹಸನ್ ಢಲಾಯತ್ ಎಂಬುವರನ್ನು ಬಂಧಿಸಲಾಗಿದೆ. ಜೈನ ಸಮುದಾಯದ ನಾವು ಕಷ್ಟ ಬಂದರು ಯಾರಿಗೂ ನೋಯಿಸದೆ ಜೀವನ ಮಾಡುತ್ತೇವೆ. ನಮಗೆ ಇವತ್ತು ಇಂತಹ ಕಷ್ಟ ಬಂದಿದೆ. ಸಾಧು ಸಂತರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಮುನಿಗಳ ಚಿತೆಗೆ ಭೀಮಗೊಂಡ ಉಗಾರೆ ಅಗ್ನಿ ಸ್ಪರ್ಶ ಮಾಡಿದ್ದಾರೆ. ಕಾಮಕುಮಾರ ನಂದಿ ಮಹಾರಾಜರ ಪೂರ್ವಾಶ್ರಮದ ಅಣ್ಣನ ಮಗ ಭೀಮಗೊಂಡ ಉಗಾರೆ, ಕಾಮಕುಮಾರ ನಂದಿ ಮಹಾರಾಜ ಚಾರಿಟೇಬಲ್ ಟ್ರಸ್ಟ್​ನ ಅಧ್ಯಕ್ಷರೂ ಆಗಿದ್ದಾರೆ. ಹತ್ಯೆ ಖಂಡಿಸಿ ಬೆಳಗಾವಿಯ ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ಪ್ರತಿಭಟನೆ‌‌ ಮಾಡಿದ್ದು, ಸಾವಿರಾರು ಜನ, ಜೈನ ಸಮುದಾಯದ ಜನರು ಭಾಗಿಯಾಗಿ, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಸರ್ಕಾರದ ವಿರುದ್ಧ ಪ್ರತಿಭಟನೆ ಅಲ್ಲ, ರಕ್ಷಣೆಗಾಗಿ ಹೋರಾಟ..!

ಪ್ರತಿಭಟನೆ ವೇಳೆ ಮಾತನಾಡಿದ ಸಿದ್ದಸೇನ ಮಹಾರಾಜರು, ಈ ಪ್ರತಿಭಟನೆ ಜಾತಿ, ಧರ್ಮ, ಸರ್ಕಾರದ ವಿರುದ್ಧ ಅಲ್ಲ. ಅಹಿಂಸಾ ಪರಮೋ ಧರ್ಮದ ಅಡಿಯಲ್ಲಿ ಹೋರಾಟ ಮಾಡ್ತಿದ್ದೇವೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಒಂದಲ್ಲಾ ಐದು ಸಾರಿ ಕರೆ ಮಾಡಿ ಮಾತಾಡಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಬೆಳಗ್ಗೆ ನನ್ನ ಜೊತೆಗೆ ಕರೆ ಮಾಡಿ ಮಾತಾಡಿದ್ದಾರೆ‌. ಸರ್ಕಾರ ಜೈನ ಸಮುದಾಯದ ಜೊತೆಗಿದೆ ಅಂತಾ ಸಿಎಂ ಹೇಳಿದ್ದಾರೆ. ಒಂದು ಬಟ್ಟೆಯನ್ನೂ ತ್ಯಾಗ ಮಾಡಿದ ಏಕೈಕ ಸಮುದಾಯ ಜೈನ ಸಮುದಾಯ. ಜೈನ ಮುನಿಗಳ ಹೆಸರಿನಲ್ಲಿ ಆಸ್ತಿ ಇಲ್ಲ, ಅಕೌಂಟ್ ಇಲ್ಲ. ಜೈನ ಸಾಧು ಸಂತರು, ಮಠಾಧೀಶರಿಗೆ ಸರ್ಕಾರ ರಕ್ಷಣೆ ಕೊಡಬೇಕು. ಈ ಹಿಂದೆ ಬೆಳಗಾವಿಯಲ್ಲಿ ವಿಹಾರ ಮಾಡುವಾಗ ಮುಸ್ಲಿಮರಿರುವ ಏರಿಯಾದಲ್ಲಿ ನಮಗೆ ಹೋಗಲು ಬಿಟ್ಟಿಲ್ಲ. ಈ ರೀತಿ ಆಗಬಾರದು ಜೈನ ಸಾಧು ಸಂತರಿಗೆ ಸುರಕ್ಷೆ ಕೊಡಬೇಕು ಎಂದಿದ್ದಾರೆ.

6 ಲಕ್ಷ ಹಣದ ವಿಚಾರಕ್ಕೆ ನಡೆದಿರುವ ಮುನಿಗಳ ಹತ್ಯೆ..!

ಬೆಳಗಾವಿ ಸುವರ್ಣ ವಿಧಾನಸೌಧದ ಬಳಿ ಶಾಸಕ ಅಭಯ್ ಪಾಟೀಲ್ ಮಾತನಾಡಿ, ಮೇಲಿನವರ ಮಾತು ಕೇಳಿ ಜೈನ ಸಮಾಜದ ಹೆಸರು ಕೆಡಿಸುವ ಕೆಲಸವನ್ನು ಪೊಲೀಸರು ಮಾಡ್ತಿದ್ದಾರೆ. ಸ್ವಂತ ಬಟ್ಟೆ ಬಿಟ್ಟ ಸ್ವಾಮೀಜಿ, ದುಡ್ಡಿನ ವಿಚಾರಕ್ಕೆ ಕೊಲೆ ಆಗಿದೆ ಅಂತಾರೆ. ಪೊಲೀಸರು ಆರಂಭದಲ್ಲಿ ಸರಿಯಾಗಿ ಕೆಲಸ ಮಾಡುತ್ತಿದ್ರು. ಎರಡನೇ ದಿನ ಒತ್ತಡದಲ್ಲಿ ಕೆಲಸ ಮಾಡ್ತಿದ್ದೇವೆ ಅಂತಾ ಕೆಲವರು ನಮ್ಮ ಬಳಿ ಹೇಳಿದ್ದಾರೆ. ಆರ್ಥಿಕ ವ್ಯವಹಾರಕ್ಕೆ ಘಟನೆ ಆಗಿದೆ ಅಂತಾ ಜೈನ ಸಮುದಾಯದ ಹೆಸರು ಬದನಾಮ್ ಮಾಡ್ತಿದ್ದಾರೆ. ಒಬ್ಬನ ಉಳಿಸುವ ಕೆಲಸ ಮಾಡುತ್ತಿದ್ದೀರಿ, ಇದು ಆಗಬಾರದು. ಸಿಬಿಐಗೆ ವಿಚಾರಣೆ ನೀಡಿದ್ರೇ ತನಿಖೆ ಸರಿ ಆಗುತ್ತೆ. ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಅಭಯ್ ಪಾಟೀಲ್ ಒತ್ತಾಯ ಮಾಡಿದ್ದಾರೆ. ಆರೋಪಿ ನಾರಾಯಣ ಮಾಳಿ ಒಬ್ಬನೇ ಇದಾನೆ ಅಂತಿದ್ದಾರೆ. ಒಹಳ ಒತ್ತಡ ಆದ ಮೇಲೆ ಹುಸೇನ್ ಢಲಾಯತ್ ಹೆಸರು ಹೇಳ್ತಿದ್ದೀರಿ.
ಈ ರೀತಿ ಮರೆ ಮಾಚುವ ಕೆಲಸ ಯಾಕೆ ಮಾಡಿದ್ರೀ..? ಎಂದು ಪ್ರಶ್ನೆ ಮಾಡಿದ್ದಾರೆ.

ಸಿಬಿಐ ತನಿಖೆಗೆ ಆಗ್ರಹಿಸಿದ ಕೇಂದ್ರ ಸಚಿವ ಜೋಶಿ..!

ಹುಬ್ಬಳ್ಳಿಯ ವರೂರ ನವಗ್ರಹ ತೀರ್ಥಕ್ಷೇತ್ರಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜೈನ‌ ಮುನಿ ಗುಣಧರ ನಂದಿ ಶ್ರೀ ಗಳನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಬಳಿಕ ಮಾತನಾಡಿದ ಜೋಶಿ, ಕಾಮಕುಮಾರ ನಂದಿ ಮಹಾರಾಜ ಹತ್ಯೆ ಖಂಡನೀಯ. ಅವರಿಗೆ ವಿದ್ಯುತ್ ಶಾಕ್ ಕೊಟ್ಟು, ಕೈ ಕಾಲು ಕತ್ತರಿಸಿ ಬೋರ್​ವೆಲ್​ನಲ್ಲಿ ಹಾಕಿದ್ದಾರೆ. ಇದು ಇತಿಹಾಸದಲ್ಲೇ ಅತ್ಯಂತ ಕ್ರೂರ ಘಟನೆ. ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಜೈನ ಸನ್ಯಾಸಿಗಳು ಕಾಲ್ನಡಿಗೆ ನಡೀತಾರೆ, ಸರ್ವಸಂಗ ಪರಿತ್ಯಾಗ ಮಾಡ್ತಾರೆ. ಅಂಥವರನ್ನು ಹೀಗೆ ಹತ್ಯೆ ಮಾಡಿದ್ದು ಹೇಯ ಕೃತ್ಯ.
ಕಾಣೆಯಾಗಿದ್ದಾರೆ ಅಂದ ಮೇಲೂ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಪ್ರತಿಭಟನೆ ಮಾಡ್ತೀನಿ ಅಂದಾಗ ಗಂಭೀರವಾಗಿ ತೆಗೆದುಕೊಂಡ್ರು. ಕಟ್ಟಡ ಕಟ್ಟಲು ದುಡ್ಡು ಕೊಟ್ಟಿದ್ರು ಅಂತ ಮಾಹಿತಿ ಇದೆ. ಬಡ್ಡಿ ವ್ಯವಹಾರ ಮಾಡ್ತಿದ್ರು ಅಂತ ಹೇಳಿಕೆ ತೆಗೆದುಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ಇದು ಸರ್ಕಾರಕ್ಕೆ ಶೋಭೆ ತರುವ ಸಂಗತಿ ಅಲ್ಲ. ಶಾಸಕ ಅಭಯ ಪಾಟೀಲ್ ಗಂಭೀರವಾಗಿ ಖಂಡಿಸಿದಾಗ ಹೆಸರು ಬಿಡುಗಡೆ ಮಾಡಿದ್ರು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಜೈನ ಮುನಿಗಳ ಕೊಲೆಯಲ್ಲಿ ರಾಜಕಾರಣ ಬೇಡ – ಸವದಿ

ಹಿರೇಕೋಡಿ ಗ್ರಾಮದಲ್ಲಿ ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಮಾತನಾಡಿ, ಹತ್ಯೆಯನ್ನು ಅತ್ಯಂತ ತೀವ್ರ ಗತಿಯಲ್ಲಿ ಖಂಡಿಸುತ್ತೇವೆ. ಇಂತಹ ಘಟನೆ ನಮ್ಮ ರಾಜ್ಯ, ನಮ್ಮ ಜಿಲ್ಲೆಯಲ್ಲಿ ಆಗಿರೋದು ನಾವೆಲ್ಲರೂ ತಲೆ ತಗ್ಗಿಸುವಂತದ್ದು. ನಾವೆಲ್ಲಾ ಜಿಲ್ಲೆಯ ಶಾಸಕರು, ಸಮಾಜ, ಸರ್ಕಾರ ಉಗ್ರವಾಗಿ ಖಂಡಿಸುತ್ತೇವೆ. ನಾಳೆ ಅಧಿವೇಶನದಲ್ಲಿ ಈ ಬಗ್ಗೆ ಸವಿಸ್ತಾರವಾಗಿ ಚರ್ಚೆ ಮಾಡೋಣ. ಗೃಹ ಸಚಿವ, ಸಿಎಂಗೆ ಕೂಲಂಕಷವಾಗಿ ಚರ್ಚಿಸಿ ಸರ್ಕಾರದ ಗಮನಕ್ಕೆ ತರುತ್ತೇವೆ. ಜೈನರು ವಿಶ್ವಕ್ಕೆ ಶಾಂತಿ ಕೋರುವ ಅಹಿಂಸೆ ಪ್ರತಿಪಾದನೆ ಮಾಡುವವರು. ಈ ವಿಚಾರದಲ್ಲಿ ನಮ್ಮ ಎದುರಾಳಿ ಪಕ್ಷದ ನಾಯಕರು ರಾಜಕಾರಣ ಮಾಡುವುದು ಬೇಡ ಎಂದು ಒತ್ತಾಯಿಸಿದ್ದಾರೆ. ಇದು ರಾಜಕಾರಣ ಪ್ರೇರಿತ ಘಟನೆ ಅಲ್ಲ, ಇದು ಅಹಿತಕರ ಘಟನೆ. ಇದನ್ನ ಪಕ್ಷಾತೀತವಾಗಿ ಖಂಡಿಸಬೇಕು. ಆರೋಪಿಗಳಿಗೆ ಶಿಕ್ಷೆ ನೀಡಲು ಎಲ್ಲರೂ ಕೈಜೋಡಿಸಬೇಕು, ಧರ್ಮ ನ್ಯಾಯಸಮ್ಮತ ಹೋರಾಟ ಮಾಡಬೇಕು ಎಂದು ತಿಳಿಸಿದ್ದಾರೆ. ಇನ್ನು ಗುಣದರ ನಂದಿ ಶ್ರೀ ಗಳೊಂದಿಗೆ ಕರೆ ಮಾಡಿ ಮಾತನಾಡಿದ ಸಚಿವ ಜಿ ಪರಮೇಶ್ವರ್. ಇಂದು ಗುಣದರ ನಂದಿ ಶ್ರೀಯನ್ನು ಭೇಟಿಯಾಗುವ ಭರವಸೆ ನೀಡಿದ್ದಾರೆ.

ಕೃಷ್ಣಮಣಿ

Tags: crimeCRIME NEWSJain CommunityJain rishiKarnataka
Previous Post

ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೆ ತಲೆನೋವು ತರುತ್ತಾ ಲಿಂಗಾಯತ ಧರ್ಮ..?

Next Post

5 ಕೆಜಿ ಜೊತೆ ₹170 ಹಣ.. ಸಿದ್ದರಾಮಯ್ಯರಿಂದ ಚಾಲನೆ.. ಯಾರಿಗೆ ಸಿಗಲ್ಲ ಹಣ..?

Related Posts

ಈ ಸ್ವರ ಸಾಮ್ರಾಜ್ಞಿಗೂ ಸಾಟಿ ಯಾರೂ ಇಲ್ಲ
ಅಂಕಣ

ಈ ಸ್ವರ ಸಾಮ್ರಾಜ್ಞಿಗೂ ಸಾಟಿ ಯಾರೂ ಇಲ್ಲ

by ಪ್ರತಿಧ್ವನಿ
April 15, 2026
0

ನಾ ದಿವಾಕರ ಹಂ ದೋನೋ ಚಿತ್ರದ “ ಅಭೀ ನಾ ಜಾವೋ ಚೋಡ್‌ ಕರ್‌ ”, ಯಾದೋಂಕಿ ಬಾರಾತ್‌ ಚಿತ್ರದ “ ಚುರಾಲಿಯಾ ಹೈ ತುಮ್‌ ನೆ...

Read moreDetails
ಭಾರತದ ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ: ಸವಾಲುಗಳು ಮತ್ತು ಸಾಧ್ಯತೆಗಳು.

ಭಾರತದ ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ: ಸವಾಲುಗಳು ಮತ್ತು ಸಾಧ್ಯತೆಗಳು.

April 15, 2026
“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

April 14, 2026
ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್‌ ಎಲ್ಲಿದ್ದಾರೆ ?

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್‌ ಎಲ್ಲಿದ್ದಾರೆ ?

April 14, 2026
ಒಳದನಿಗೆ ಜೀವತುಂಬಿದ ʼ ಪ್ರತಿಧ್ವನಿ ʼ ಯೊಡನೆ- ನಾ ದಿವಾಕರ  ಲೇಖನ

ಒಳದನಿಗೆ ಜೀವತುಂಬಿದ ʼ ಪ್ರತಿಧ್ವನಿ ʼ ಯೊಡನೆ- ನಾ ದಿವಾಕರ  ಲೇಖನ

April 13, 2026
Next Post
5 ಕೆಜಿ ಜೊತೆ ₹170 ಹಣ.. ಸಿದ್ದರಾಮಯ್ಯರಿಂದ ಚಾಲನೆ.. ಯಾರಿಗೆ ಸಿಗಲ್ಲ ಹಣ..?

5 ಕೆಜಿ ಜೊತೆ ₹170 ಹಣ.. ಸಿದ್ದರಾಮಯ್ಯರಿಂದ ಚಾಲನೆ.. ಯಾರಿಗೆ ಸಿಗಲ್ಲ ಹಣ..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada