ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಸರ್ಕಾರದ ವಿರುದ್ಧ ಮುಗಿ ಬಿದ್ದಿದ್ದು ಲಿಕ್ಕರ್ ಗೇಟ್ ವಿಚಾರವಾಗಿ ಅನ್ನೋದು ಎಲ್ಲರಿಗೂ ಗೊತ್ತಿರೋ ಸಂಗತಿ. ದೆಹಲಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿದ್ದ ಮನೀಷ್ ಸಿಸೋಡಿಯಾ ಲಿಕ್ಕರ್ ಗೇಟ್ನಲ್ಲಿ ಭಾಗಿಯಾಗಿದ್ದಾರೆ ಅಂತಾ ಆರೋಪ ಎದುರಾಗಿತ್ತು. ಸಿಬಿಐ ವಿಚಾರಣೆ ಶುರು ಮಾಡಿದಾಗ ಸಿಬಿಐನಿಂದ ಬಂಧನಕ್ಕೆ ಒಳಗಾಗಿದ್ದ ಮನೀಷ್ ಸಿಸೋಡಿಯಾ ಆಪ್ತ ಸಾಕ್ಷಿಯಾಗಲು ಒಪ್ಪಿದ್ದಾರೆ. ಮನೀಷ್ ಸಿಸೋಡಿಯಾ ಆಪ್ತ ಅಮಿತ್ ಅರೋರ ವಿಚಾರಣೆ ನಡುವೆ ಜಾರಿ ನಿರ್ದೇಶನಾಲಯ ಮನೀಷ್ ಸಿಸೋಡಿಯಾ ಬಂಧನ ಮಾಡಲಾಗಿತ್ತು. ಆದರೆ ಲಿಕ್ಕರ್ ಗೇಟ್ ಬಗ್ಗೆ ಇ.ಡಿ ಅಧಿಕಾರಿಗಳು ನನಗೆ ಯಾವುದೇ ಪ್ರಶ್ನೆ ಕೇಳಲಿಲ್ಲ. ಆಮ್ ಆದ್ಮಿ ಪಕ್ಷ ಬಿಟ್ಟು ಬಿಜೆಪಿ ಸೇರುವಂತೆ ಆಹ್ವಾನ ನೀಡಲಾಯ್ತು. ಮುಖ್ಯಮಂತ್ರಿ ಸ್ಥಾನವನ್ನೂ ಕೊಡುವ ಭರವಸೆ ನೀಡಿದ್ರು ಅಂತಾ ಆರೋಪ ಮಾಡಿದ್ರು. ಆದರೆ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ.
ನಾನು ಇದಕ್ಕೆಲ್ಲಾ ಹೆದರಲ್ಲ, ಇದೆಲ್ಲಾ ಮೋದಿ ಆಟ
ದೆಹಲಿ ಸರ್ಕಾರದ ಉಪಮುಖ್ಯಮಂತ್ರಿ ಅವರನ್ನು ಅರೆಸ್ಟ್ ಮಾಡಿದ್ದ ಮೇಲೂ ಚಾರ್ಜ್ಶೀಟ್ನಲ್ಲಿ ಮನೀಷ್ ಸಿಸೋಡಿಯಾ ಅವರ ಹೆಸರೇ ಇರಲಿಲ್ಲ. ಆದರೆ ಇದೀಗ ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣದಲ್ಲಿ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕವಿತಾ ಹೆಸರು ಬಂದಿದೆ. ಕವಿತಾ, ಮಗುಂತ ಶ್ರೀನಿವಾಸಲು, ಒಡೆತನದ ಸೌತ್ ಗ್ರೂಪ್ನಿಂದ 100 ಕೋಟಿ ಲಂಚ ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ವರದಿ ಸಿದ್ಧ ಮಾಡಿದೆ. ಈ ವಿಚಾರಕ್ಕೆ ಕವಿತಾ ಪ್ರತಿಕ್ರಿಯೆ ನೀಡಿದ್ದು, ತೆಲಂಗಾಣ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಬರ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಮಾತನಾಡಲು ಯಾವುದೇ ಅಸ್ತ್ರ ಇಲ್ಲ. ಅದಕ್ಕಾಗಿಯೇ ಜಾರಿ ನಿರ್ದೇಶನಾಲಯ ಹಾಗು ಸಿಬಿಐ ಕಳುಹಿಸಿ ಕೇಸ್ ಹಾಕಿಸ್ತಿದ್ದಾರೆ. ಇದಕ್ಕೆಲ್ಲಾ ನಾನು ಹೆದರಲ್ಲ ಎಂದಿದ್ದಾರೆ.

ದಿಲ್ಲಿ ಟು ತೆಲಂಗಾಣ..! ಏನಿದು ಅಬಕಾರಿ ಹಗರಣ..?
ದೆಹಲಿಯ ಅಬಕಾರಿ ಹಗರಣದಲ್ಲಿ 100 ಕೋಟಿ ಕಿಕ್ಬ್ಯಾಕ್ ಪಡೆದಿದ್ದಾರೆ ಎಂದು ಆರೋಪ ಬಂದಿದೆ. ಆರೋಪಿ ವಿಜಯ್ ನಾಯರ್ಗೆ 100 ಕೋಟಿ ರೂಪಾಯಿ ಕಿಕ್ಬ್ಯಾಕ್ ಬಂದಿದೆ ಎನ್ನಲಾಗಿದೆ. ಜಾರಿ ನಿರ್ದೇಶನಾಲಯ ಬಂಧನದಲ್ಲಿರುವ ಆರೋಪಿ ಅಮಿತ್ ಅರೋರಾ ಹೇಳಿಕೆ ಆಧರಿಸಿ ವರದಿ ಪಡೆಯಲಾಗಿದೆ. 100 ಕೋಟಿ ಹಣ ನೀಡಿರುವ ಸೌತ್ಗ್ರೂಪ್ ಕಂಪನಿ, ಇದೇ ಸೌತ್ಗ್ರೂಪ್ನಲ್ಲಿ ಕೆ ಚಂದ್ರಶೇಖರ್ ರಾವ್ ಪುತ್ರಿ ಕವಿತಾ ಪಾಲುದಾರಿಕೆ ಇದೆ ಎಂದು ಆರೋಪ ಮಾಡಲಾಗಿದೆ. ಅದರ ಜೊತೆಗೆ ಯಾವುದೇ ಸಾಕ್ಷಿ ಸಿಗದಂತೆ 36 ಮಂದಿ ಡಿಜಿಟಲ್ ಸಾಕ್ಷಿ ನಾಶ ಮಾಡಿದ್ದಾರೆ ಎನ್ನಲಾಗಿದೆ. 1.38 ಕೋಟಿ ರೂಪಾಯಿ ಮೌಲ್ಯದ ಮೊಬೈಲ್ಗಳನ್ನ ನಾಶ ಮಾಡಿದ್ದಾರೆ. ಕೆ ಚಂದ್ರಶೇಖರ್ ರಾವ್ ಪುತ್ರಿ ಕವಿತಾ 10 ಫೋನ್, 2 ಸಿಮ್ ಬಳಸಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ.
ಪಂಜಾಬ್ಗಾಗಿ ಸಿಸೋಡಿಯಾ.. ತೆಲಂಗಾಣಕ್ಕಾಗಿ ಕವಿತಾ ?
ಪಂಜಾಬ್ನಲ್ಲಿ ಚುನಾವಣೆ ನಡೆಯುತ್ತಿದ್ದ ಕಾರಣಕ್ಕೆ ಮನೀಷ್ ಸಿಸೋಡಿಯಾ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿತ್ತು. ಅದೇ ರೀತಿ ಮನೀಷ್ ಸಿಸೋಡಿಯಾ ಅವರನ್ನೇ ಬಿಜೆಪಿಗೆ ಸೆಳೆಯುವ ಪ್ರಯತ್ನವೂ ಆಗಿತ್ತು. ಆದರೆ ಅದ್ಯಾವುದು ಸಾಧ್ಯವಾಗದಿದ್ದಾಗ ತೆಲಂಗಾಣದಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಲು ಹೋಗಿ ಬಿಜೆಪಿ ನಾಯಕರೇ ಕಾನೂನು ಕುಣಿಕೆಗೆ ಸಿಲುಕಿದ್ದಾರೆ. ಇದೀಗ ಮೂವರು ಬಿಜೆಪಿ ನಾಯಕರಿಗೆ ಬೇಲ್ ಸಿಕ್ಕಿದೆ. ತೆಲಂಗಾಣದಲ್ಲಿ ಟಿಆರ್ಎಸ್ ಶಾಸಕರನ್ನು ಸೆಳೆಯುವುದಕ್ಕೆ ಮುಂದಾಗಿದ್ದು ತೆಲಂಗಾಣದಲ್ಲಿ ಭಾರೀ ಹಿನ್ನೆಡೆಯಾಗುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಕೆ ಚಂದ್ರಶೇಖರ್ ರಾವ್ ಅವರನ್ನು ಮಣಿಸಲು ಇದೊಂದು ಅಸ್ತ್ರವನ್ನಾಗಿ ಬಳಸುವ ತಂತ್ರ ಎಂದೇ ರಾಜಕಾರಣದಲ್ಲಿ ಚರ್ಚೆ ಆಗ್ತಿದೆ. ಆದರೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಬಿಜೆಪಿ ಸ್ವಾರ್ಥಕ್ಕೆ ಬಳಸಿಕೊಳ್ತಿದ್ಯಾ..? ಅನ್ನೋ ಅನುಮಾನ ಸೃಷ್ಟಿಯಾಗಿದೆ.
ಕೃಷ್ಣಮಣಿ






